ಚಾಮರಾಜನಗರ: ಬೆಂಗಳೂರಿನಲ್ಲಿನ ಸ್ವೀಕಾರ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಮಹಿಳಾ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಪಕ್ಷದ ಮಹಿಳಾ ಮೋರ್ಚಾ ಆಶ್ರಯ ದಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ಸಾಗಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ನಗರದಲ್ಲಿನ ನಿಮ್ಹಾನ್ಸ್ ಕೇಂದ್ರದಲ್ಲಿನ ಸ್ವೀಕಾರ ಕೇಂದ್ರವು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಯ ಈ ಕೇಂದ್ರವು ಅನಾಚಾರಗಳ ತಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಪ್ರವೇಶ ಪಡೆದ ಸಾವಿರಾರು ಅಬಲೆಯರು ನಾಪತ್ತೆಯಾಗಿದ್ದಾರೆ. ಬಹಳಷ್ಟು ಮಹಿಳೆಯರ ಮೇಲೆ ಇಲಾ ಖೆಯ ಕೆಲ ದುರುಳರು ಅತ್ಯಾಚಾರ ಎಸಗಿ ದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ವೀಕಾರ ಕೇಂದ್ರಕ್ಕೆ ಆಶ್ರಯ ಅರಸಿ ಬಂದ ಹಲವಾರು ಹೆಣ್ಣು ಮಕ್ಕಳು ಪರ ರಾಜ್ಯದ ವೇಶ್ಯಾವಾಟಿಕೆ ಸ್ಥಳಗಳಿಗೂ ರವಾ ನಿಸಲ್ಪಟ್ಟಿದ್ದಾರೆ ಎಂಬ ದೂರು ವ್ಯಾಪಕವಾ ಗಿದೆ. ಸ್ವೀಕಾರ ಕೇಂದ್ರದಲ್ಲಿ ನಿರಂತರ ವಾಗಿ ನಡೆಯುತ್ತಿರುವ ಅನೈತಿಕ ಚಟು ವಟಿಕೆಗಳಿಗೆ ಹಲವು ವರ್ಷಗಳಿಂದ ಅಧಿ ಕಾರಿ, ಸಿಬ್ಬಂದಿಯಾಗಿರುವ ಬಿ.ವಾಸಂತಿ, ಸಿ.ದಾಕ್ಷಾಯಿಣಿ, ರೆನ್ನಿಗೆ ಅವರೇ ಕಾರಣ ರಾಗಿದ್ದಾರೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಸಿ ರುವ ಸಿಬ್ಬಂದಿ ಸೇರಿದಂತೆ ಕೇಂದ್ರ ಅಸಮರ್ಪಕ ನಿರ್ವಹಣೆಗೆ ಕಾರಣರಾದ ಮೇಲಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಧ್ಯಕ್ಷೆ ಹುಲ್ಲೇಪುರ ಮಂಗಳಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಸರಸ್ವತಿ, ಶಿವಮ್ಮ, ನಗರಸಭಾ ಸದಸ್ಯೆ ಕವಿತಾ, ಗ್ರಾಪಂ ಅಧ್ಯಕ್ಷ ಪದ್ಮಾ, ಮುಖಂಡರಾದ ವನಜಾಕ್ಷಿ, ಪುಷ್ಪಮಾಲಾ, ಲಕ್ಷ್ಮಿ, ದೇವಮಣಿ, ಸುಂದ ರರಾಜ್ ಇತರರು ಪ್ರತಿಭಟನೆಯಲ್ಲಿದ್ದರು.