ಹಾಸನ: ಜಿಲ್ಲಾ ಪಂಚಾಯಿತಿ ಮಾಜಿ ಉಪಾ ಧ್ಯಕ್ಷರೂ ಆದ ಹಾಲಿ ಸದಸ್ಯ ಶ್ರೀನಿವಾಸ್ ಮತ್ತು ಪ್ರಭಾರ ಸಿಇಓ ಪುಟ್ಟಸ್ವಾಮಿ ನಡುವೆ ಜಟಾಪಟಿ ನಡೆ ದಿದ್ದು, ಪುಟ್ಟಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾ ಪಂಚಾಯಿತಿಗೆ 36 ಲಕ್ಷ ರೂ. ಅನುದಾನ ಬಂದಿದ್ದು, ಈ ಬಗ್ಗೆ ವಿಚಾರಿಸಲು ಶ್ರೀನಿವಾಸ್ ಅವರು ಪುಟ್ಟಸ್ವಾಮಿ ಅವರನ್ನು ಸಂಪರ್ಕಿಸಿದಾಗ ಜಟಾಪಟಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರಭಾರ ಸಿಇಓ ಪುಟ್ಟಸ್ವಾಮಿ ಅವರು, ಶ್ರೀನಿವಾಸ್ ಅವರು ಮತ್ತೋರ್ವ ವ್ಯಕ್ತಿಯೊಂದಿಗೆ ಕಚೇರಿಗೆ ಬಂದು 36 ಲಕ್ಷ ರೂ. ವಿಶೇಷ ಅನುದಾನದ ಬಗ್ಗೆ ವಿಚಾರಿಸಿದರು.
ಅದರ ಬಗ್ಗೆ ಅಧಿಕಾರಿ ಗಳಿಂದ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಹೇಳಿದಾಗ ಅವರು ನನ್ನ ವಯಸ್ಸನ್ನೂ ಲೆಕ್ಕಿಸದೆ ಒರಟಾಗಿ ಮಾತನಾಡಿದರು. ‘ನೀವು ಜಿಲ್ಲಾ ಪಂಚಾ ಯಿತಿಯ ಉಪಾಧ್ಯಕ್ಷ ರಾಗಿದ್ದವರು. ಹೀಗೆಲ್ಲಾ ಮಾತನಾಡುವುದು ಬೇಡ’ ಎಂದು ಹೇಳಿದಾಗ ಅವರು, ಬಾಯಿಗೆ ಬಂದಂತೆ ಮಾತನಾಡಿದ್ದಲ್ಲದೆ, ಯಾರನ್ನೋ ಕರೆ ತಂದು ಅಟ್ರಾಸಿಟಿ ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಇದರಿಂದಾಗಿ ಮನಸ್ಸಿಗೆ ಬೇಸರ ವಾಗಿದೆ. ಆದರೆ ಈ ಘಟನೆಯಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ಮನೆಗೆ ಹೋದ ಮೇಲೆ ತಲೆಸುತ್ತು ಬಂದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ ಎಂದರು.