ಲೋಕಸಭಾ ಚುನಾವಣೆ: ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
ಹಾಸನ

ಲೋಕಸಭಾ ಚುನಾವಣೆ: ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

February 4, 2019

ಹಾಸನ: ಕೇಂದ್ರದ ಇಂದಿನ ಜನಪರ ಬಜೆಟ್ ಮುಂದಿನ ಅಭಿವೃದ್ಧಿಗೆ ದಿಕ್ಸೂಚಿ ಆಗಲಿದ್ದು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 28 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿ ಸಿದೆ. ಎಲ್ಲಾ ಯೋಜನೆಗೂ ಹಣವನ್ನು ಮುಂಗಡವಾಗಿ ತೆಗೆದು ಇಡುವ ಮೂಲಕ ದೇಶಕ್ಕೆ ಒಂದು ಭದ್ರತೆ ಒದಗಿಸಿದ್ದಾರೆ ಎಂದರು.

ಇಷ್ಟು ದಿನಗಳವರೆಗೆ ನಡೆದ ಎಲ್ಲ ಚುನಾವಣೆಗಳು ಜಾತಿ, ಹಣಬಲವನ್ನು ಅವಲಂಬಿಸಿದ್ದವು. ಆದರೆ ಈಗ ದೇಶದ ಜನ ಪ್ರಜ್ಞಾವಂತರಾಗಿದ್ದು 2014ರಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳು ಈ ಬಾರಿ ಇನ್ನೂ ಹೆಚ್ಚಾಗುತ್ತದೆ. ಜಿಲ್ಲೆಯಲ್ಲಿ ಶೇ. 51ರಷ್ಟು ಹಿಂದುಳಿದ ವರ್ಗದವರ ಮತಗಳಿವೆ. ಬ್ರಾಹ್ಮಣರು ಶೇ. 2.6, ಒಕ್ಕಲಿಗ ಶೇ. 35 ಹಾಗೂ ಲಿಂಗಾಯತರು ಶೇ. 10.9, ಒಬಿಸಿ ಶೇ. 27.65ರಷ್ಟು ಇದ್ದಾರೆ. ಇವರುಗಳ ಮತಗಳು ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಅಭಿವೃದ್ಧಿ ಬಗ್ಗೆ ಗಮನಹರಿ ಸದ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಈಗ ಒಬ್ಬ ಮೊಮ್ಮಗನನ್ನು ಹಾಸನ ಮತ್ತೊಬ್ಬರನ್ನು ಮಂಡ್ಯದಿಂದ ಸಂಸದರನ್ನಾಗಿ ಮಾಡಲು ಚಿಂತನೆ ನಡೆಸುತ್ತಿದ್ದು, ಇವರಿಂದ ರಾಜ್ಯ ಹಾಗೂ ರಾಷ್ಟ್ರಕ್ಕೆ ಯಾವ ಲಾಭಗಳಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲದಿದ್ದರೂ ಯೋಜನೆಗಳನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ 65 ವರ್ಷ ಮೇಲ್ಪಟ್ಟವರು 23,77,594 ಜನರಿದ್ದಾರೆ. ಇವರೆಲ್ಲರಿಗೂ 5 ಸಾವಿರ ರೂ. ಪಿಂಚಣಿ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದು, ಅದರ ಮೊತ್ತ ವಾರ್ಷಿಕ 1,78,247 ಕೋಟಿ ರೂ. ಆಗು ತ್ತದೆ. 11.43 ಲಕ್ಷ ಗರ್ಭಿಣಿಯರಿದ್ದು ಪ್ರತಿ ಯೊಬ್ಬರಿಗೆ 6 ಸಾವಿರ ರೂ. ಭತ್ಯೆ ನೀಡು ವುದಾಗಿ ಘೋಷಿಸಿದ್ದಾರೆ. 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಇದರ ಜತೆಗೆ ಆಡಳಿತ ನಡೆಸಲು 47 ಸಾವಿರ ಕೋಟಿ ರೂಗಳ ಸಾಲ ಮಾಡುವುದಾ ಗಿಯೂ ತಿಳಿಸಿದ್ದಾರೆ. ಕುಮಾರಸ್ವಾಮಿಯ ವರೇ ಮಂಡಿಸಿದ ಬಜೆಟ್ ಗಾತ್ರ 2.18 ಸಾವಿರ ಕೋಟಿ ರೂ.ಗಳದ್ದಾಗಿದೆ. ತಾವೇ ಮಂಡಿಸಿರುವ ಬಜೆಟ್‍ಗೂ ಹಾಗೂ ಘೋಷಿ ಸುತ್ತಿರುವ ಯೋಜನೆಗಳಿಗೆ ಹೋಲಿಕೆ ಆಗುತ್ತದೆಯಾ ಎಂಬುದನ್ನು ಪರಿಶೀಲಿಸ ಬೇಕು ಎಂದು ಪ್ರಶ್ನೆ ಮಾಡಿದರು.

ಉಗ್ರಗಾಮಿಗಳ ಜನ್ಮತಾಣವಾಗಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಮೂಲಕ ಅಮೇರಿಕ, ಚೀನಾಗಳ ವಿಶ್ವಾಸ ಪಡೆದು ವಿಶ್ವಮಟ್ಟದಲ್ಲಿ ಭಾರತವನ್ನು ಪರಿಚಯಿಸಿ ದ್ದಾರೆ. ನರೇಂದ್ರ ಮೋದಿಯಿಂದ ಭಾರತ ಪ್ರಜ್ವಲಿಸುತ್ತಿದೆ. ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್, ಆಧುನಿಕ ಯುದ್ಧೋ ಪಕರಣ ಒದಗಿಸುವ ಮೂಲಕ ಬಲಿಷ್ಠ ಭಾರತ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುದ್ರಾ ಯೋಜನೆ, ಜನಧನ್, ಬೇಟಿ ಬಚಾವೋ ಬೇಟಿ ಪಡಾವೋ, ಜನ ಔಷಧಿ, ಪ್ರಧಾನ್ ಮಂತ್ರಿ ಫಸಲ್ ಬಿಮಾ ಸೇರಿದಂತೆ ಅನೇಕ ಯೋಜನೆಗಳು ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅರಾಜಕತೆ ಸೃಷ್ಟಿಯಾಗದಂತೆ ಆಡಳಿತ ನೀಡಿದ್ದಾರೆ. ಮತ್ತೊಮ್ಮೆ ಇವರೆ ಪ್ರಧಾನಿ ಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಉಪಾಧ್ಯಕ್ಷರಾದ ಎಲ್.ಕೆ.ರಾಜು, ಎಸ್.ಪುಟ್ಟಸ್ವಾಮಿ, ತಿಪ್ಪೇ ಸ್ವಾಮಿ, ಜಿಲ್ಲಾಧ್ಯಕ್ಷ ಜಯಕೃಷ್ಣಮೂರ್ತಿ, ಎಂಜಾರಪ್ಪ, ರಾಮಲಿಂಗಪ್ಪ, ನಗರಾಭಿ ವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ದಯಾನಂದ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್. ಎನ್.ನಾಗೇಶ್, ರಾಜ್ಯ ರೈತ ಮೋರ್ಚಾದ ರೇಣುಕುಮಾರ್ ಇತರರು ಉಪಸ್ಥಿತರಿದ್ದರು.

ಸಮ್ಮಿಶ್ರ ಸರ್ಕಾರದ ಡಿವೋರ್ಸ್‍ಗೆ ಹೆಚ್ಚು ದಿನ ಬೇಕಿಲ್ಲ

ಹಾಸನ: ದೋಸ್ತಿ ಸರ್ಕಾರದ್ದು ಗಂಡ-ಹೆಂಡತಿ ಕಚ್ಚಾಟ ವಿದ್ದಂತೆ. ಇವರು ಯಾವತ್ತೂ ಒಂದಾಗಲ್ಲ. ಹಾಗೆಯೇ ಡಿವೋರ್ಸ್ ಆಗಲು ಇವರಿಗೆ ಹೆಚ್ಚುದಿನ ಬೇಕಿಲ್ಲ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವ್ರು, ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲು ಮುಂದಾಗಿ ದ್ದಾರೆ. ತನ್ನ ವೈಫಲ್ಯಗಳಿಂದ ಬಚಾವಾಗಲು ಅವರಿಗೆ ಉಳಿದಿ ರುವುದು ರಾಜೀನಾಮೆ ಒಂದೇ ದಾರಿ ಎಂದು ಜರಿದಿದ್ದಾರೆ.

ಹಾಸನ ಕ್ಷೇತ್ರ ಜೆಡಿಎಸ್ ಕುಟುಂಬಕ್ಕೆ ಮೀಸಲಾಗಿದೆ. ಪ್ರತಿಭಾ ವಂತ ಯುವಕರಿಗೆ ಬೆಳೆಯೋಕೆ ಅವಕಾಶ ಕಲ್ಪಿಸುತ್ತಿಲ್ಲ.ಇಂತಹ ಪ್ರಾಂತೀಯ ರಾಜರೆಲ್ಲಾ ಪ್ರಧಾನಿಗಳಾದರೆ ದೇಶದ ಕಥೆ ಏನಾಗಬಹುದು. ಇವರ ಮೈತ್ರಿ ಹಾಗೂ ಘಟ್‍ಬಂಧನ್ ಮೋದಿಗೆ ಸಮವಲ್ಲ.ಇವರು ಏನೇ ಮಾಡಿದ್ರೂ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯೋದು ನಿಶ್ಚಿತ ಎಂದರು.

ನಾವು ಆಪರೇಷನ್ ಮಾಡ್ತಿಲ್ಲ. ಕಾಂಗ್ರೆಸ್‍ಗೆ ಅವರ ಶಾಸಕ ರನ್ನು ಭದ್ರವಾಗಿ ಇಟ್ಟುಕೊಳ್ಳಲು ಆಗುತ್ತಿಲ್ಲ. 7 ತಿಂಗಳಿಂದ ರಾಜ್ಯ ದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಮೂಡಿದೆ. ದಿನ ಬೆಳ ಗಾದರೆ ಹಾಸನದಲ್ಲೊಬ್ಬ ಮೊಮ್ಮಗನನ್ನು ನಿಲ್ಲಿಸುತ್ತೇನೆ, ಮಂಡ್ಯದ ಲ್ಲೊಬ್ಬನನ್ನು ನಿಲ್ಲಿಸುತ್ತೇನೆ ಎನ್ನುತ್ತಾರೆ. ಅವರಿಗೆ ಕುಟುಂಬ ರಾಜ ಕಾರಣ ಬಿಟ್ಟು ರಾಜ್ಯದ ಚಿಂತೆ ಇಲ್ಲವೆಂದು ಹೆಚ್.ಡಿ. ದೇವೇ ಗೌಡರ ಕುಟುಂಬದ ವಿರುದ್ಧ ಪುಟ್ಟಸ್ವಾಮಿ ಆರೋಪ ಮಾಡಿದರು.

Translate »