80 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ
ಹಾಸನ

80 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ

February 4, 2019

ರಾಮನಾಥಪುರ: ಅರಕಲಗೂಡನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಮೂಲಕ ಹಿಂದುಳಿದ ತಾಲೂಕು ಪಟ್ಟಿ ಯಿಂದ ತಾಲೂಕಿನ ಹೆಸರನ್ನು ತೆಗೆದು ಹಾಕಿಸುವೆ ಎಂದು ಶಾಸಕ ಎ.ಟಿ.ರಾಮ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಗ್ರಾಪಂ ಆವರಣದಲ್ಲಿ 20 ಲಕ್ಷ ರೂ. ವೆಚ್ಚ ದಲ್ಲಿ ಅಂಬೇಡ್ಕರ್ ಭವನದ ಗುದ್ದಲಿ ಪೂಜೆ, ನದಿ ದಂಡೆಯ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ ಆವರಣ ಹಾಗೂ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದ ಆವರಣದಲ್ಲಿ ತಲಾ 25 ಲಕ್ಷ ರೂ. ವೆಚ್ಚ ದಲ್ಲಿ ಶೌಚಾಲಯ ಸೇರಿದಂತೆ 80 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ಹತ್ತಿರವಿರುವ ಪ.ಜಾತಿ ಜನಾಂಗದ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ. ಮಂಜೂರಾ ಗಿದೆ. ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿ ರುವ ಶ್ರೀ ಪಟ್ಟಾಭಿರಾಮ ದೇವಸ್ಥಾನದ ಸುತ್ತಲ ರಸ್ತೆ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ರಸ್ತೆ, ಮತ್ತು ಕಾವೇರಿ ನದಿ ಸಂಪರ್ಕ ರಸ್ತೆ 5 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕಣದ ಕಾಮಗಾರಿ ಮುಗಿದಿದೆ ಎಂದು ತಿಳಿಸಿದರು.

ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಪುರಾಣ ಪ್ರಸಿದ್ಧ ಇತಿಹಾಸವಿರುವ ಶ್ರೀ ರಾಮೇಶ್ವರಸ್ವಾಮಿ ಮತ್ತು ಲಕ್ಷ್ಮಣೇಶ್ವರಸ್ವಾಮಿ ದೇವಸ್ಥಾನದ ಮಧ್ಯೆ ತೂಗು ಸೇತುವೆ ನಿರ್ಮಾಣದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾ ಗುವುದು. ದೇವಸ್ಥಾನಕ್ಕೆ ಸಂಪರ್ಕ ರಸ್ತೆಗೆ ಡಾಂಬರೀಕರಣ ಹಾಗೂ ಒಳಚರಂಡಿ ನಿರ್ಮಾಣ, ದೇವಸ್ಥಾನದ ಸುತ್ತ ಕಾಂಪೌಂಡ್, ದೇವಸ್ಥಾನದ ಉತ್ತರದ ಭಾಗದ ಕಾವೇರಿಯ ಭಾಗಕ್ಕೆ ಸೋಪಾನ ಕಟ್ಟೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ರೀತಿ ಅನುದಾನದ ವ್ಯವಸ್ಥೆ ಮಾಡಿಸಿ ಕೊಡಲಾಗುವುದು ಎಂದರು.
ಶಾಸಕರಲ್ಲಿ ಮನವಿ: ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮಣೇ ಶ್ವರ ಸ್ವಾಮಿ ದೇವಸ್ಥಾನದ ಮಧ್ಯೆ ಹಾದು ಹೋಗಿರುವ ಕಾವೇರಿ ನದಿಗೆ ಸೇತುವೆ ನಿರ್ಮಿಸಿ ಎರಡು ದೇವಸ್ಥಾನಗಳ ನಡುವೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಇನ್ನಿತರ ಗ್ರಾಮದ ಅಭಿವೃದ್ಧಿಗಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿಯಿಂದ ಇದೇ ವೇಳೆ ಶಾಸಕರಿಗೆ ಮನವಿ ಮಾಡಲಾಯಿತು.

ಈ ವೇಳೆ ಕಾವೇರಿ ಮಹಾ ಮಂಡಳ ಅಧ್ಯಕ್ಷ ಚೌಡೇಗೌಡ, ತಾಪಂ ಮಾಜಿ ಸದಸ್ಯ ಬಿ.ಸಿ. ವೀರೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಹೆಚ್.ಕೃಷ್ಣಮೂರ್ತಿ, ಸದಸ್ಯರಾದ ದಿವಾಕರ್, ಮಹದೇವ್, ದ್ಯಾವಯ್ಯ, ಅಖಿಲ ಭಾರತೀಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಬಿ.ಆರ್.ನಾರಾ ಯಣಸ್ವಾಮಿ, ಹಿಂದುಳಿದ ವರ್ಗದ ಅಧ್ಯಕ್ಷ ಸಾದಿಕ್‍ಸಾಬ್, ಗ್ರಾಪಂ ಮಾಜಿ ಅಧ್ಯಕ್ಷ ರಾದ ಚಿಕ್ಕಣ್ಣಶೆಟ್ಟಿ, ಡಿ.ಹೆಚ್.ಪ್ರಭಾಕರ್, ಮಾಜಿ ಉಪಾಧ್ಯಕ್ಷರಾದ ರಾಮೇಗೌಡ, ಮಾಜಿ ಸದಸ್ಯ ರಾಜೇಗೌಡ, ಪುಟ್ಟರಾಜು, ಗೋವಿಂದರಾಜು, ಮುಖಂಡರಾದ ಉಪಾರೀಕೇಗೌಡ, ಮಂಜುನಾಥ್, ರಂಗಯ್ಯ, ನಿಂಗೇಗೌಡ ಶಾಸಕರ ಅಪ್ತ ಸಹಾಯಕ ವೆಂಕಟೇಶ್, ಕೃಷ್ಣೇಗೌಡ, ಗುಂಡಣ್ಣ ಮುಂತಾದವರಿದ್ದರು.

Translate »