ಸಾಹಿತಿ, ಪತ್ರಕರ್ತ ಉದಯರವಿಗೆ ಡಾಕ್ಟರೇಟ್; ಅಭಿನಂದನೆ
ಹಾಸನ

ಸಾಹಿತಿ, ಪತ್ರಕರ್ತ ಉದಯರವಿಗೆ ಡಾಕ್ಟರೇಟ್; ಅಭಿನಂದನೆ

February 4, 2019

ಆಲೂರು: ಪ್ರಶಸ್ತಿಗಳು ಹಾಗೂ ಸನ್ಮಾನಗಳು ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಇಂತಹ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿಕೊಂಡಿರುವ ನಮ್ಮ ತಾಲೂಕಿನ ಹಿರಿಯ ಸಾಹಿತಿ, ಪತ್ರಕರ್ತ ರಾದ ಉದಯರವಿ ಅವರಿಗೆ ಜೀವಮಾ ನದ ಸಾಧನೆಗಾಗಿ ಗೌರವ ಡಾಕ್ಟರೇಟ್ ಸಂದಿರುವುದು ಹೆಮ್ಮೆಯ ಸಂಗತಿ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಟರಾಜ್ ನಾಕಲಗೂಡು ತಿಳಿಸಿದರು.

ತಾಲೂಕು ಚುಟುಕು ಸಾಹಿತ್ಯ ಪರಿಷತ್, ಸಾರ್ವಜನಿಕ ಕೇಂದ್ರ ಗ್ರಂಥಾ ಲಯ ಸಹಯೋಗದಲ್ಲಿ ಡಾ.ಉದಯ ರವಿಯವರಿಗೆ ಹಮ್ಮಿಕೊಂಡಿದ್ದ ಅಭಿನಂ ದನಾ ಸಮಾರಂಭದ ಉದ್ಘಾಟಿಸಿ ಮಾತ ನಾಡಿದ ಅವರು, ಉದಯರವಿ ಅವರು ತಾಲೂಕು ಕಂಡ ಅಪರೂಪದ ವ್ಯಕ್ತಿ. ಸಾಹಿತ್ಯ, ಸಂಘಟನೆ, ಪತ್ರಿಕೋದ್ಯಮದಲ್ಲಿ ನಿರಂತರ ಕೆಲಸ ಮಾಡಿದ ಸಾಧಕರು. ಅವರಿಗೆ ಈ ಅತ್ಯುನ್ನತ ಗೌರವ ಸಂದಿ ರುವುದು ತಾಲೂಕಿಗೆ ಹೆಮ್ಮೆ ಎಂದರು.

ತಾಲೂಕು ಚುಟುಕು ಸಾಹಿತ್ಯ ಪರಿಷ ತ್ತಿನ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಆಲೂರು ತಾಲೂಕಿಗೆ ಮೊದಲ ಗೌರವ ಡಾಕ್ಟರೇಟ್ ತಂದ ಕೀರ್ತಿ ಉದಯ ರವಿಯವರಿಗೆ ಸಲ್ಲುತ್ತದೆ. ತಾಲೂಕಿನಲ್ಲಿ ಐತಿಹಾಸಿಕ, ಸಾಹಿತ್ಯಿಕ, ಸಂಘಟಕರಾಗಿ ದುಡಿಯುವುದರ ಜೊತೆಗೆ ತಾಲೂಕಿಗೆ ಅನೇಕ ಮೂಲ ಸೌಲಭ್ಯ ಕಲ್ಪಿಸಿಕೊಡು ವಲ್ಲಿ ಶ್ರಮಿಸಿದ್ದಾರೆ. ಆಲೂರಿನಲ್ಲಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಗಿ ಹಲವಾರು ಮೌಲ್ಯಯುತ ಸಾಮಾ ಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿ ಡಾ.ಉದಯರವಿ ಅವರು, ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವ ಸಂದರ್ಭಕ್ಕಿಂ ತಲೂ ಇಂದು ಬಹಳ ಮಹತ್ವದ್ದಾಗಿದೆ. ಏಕೆಂದರೆ ಹುಟ್ಟೂರಲ್ಲಿ ಸಿಗುವ ಗೌರವ ಎಲ್ಲವನ್ನೂ ಮೀರಿಸುವಂತದ್ದು. ನಾನು ನನ್ನ ಜೀವನದ ಪ್ರಮುಖ ಕ್ಷಣಗಳನ್ನು ಆಲೂರಿನಲ್ಲಿ ಇಲ್ಲಿನ ಪರಿಸರದಲ್ಲಿ ಕಳೆದಿ ದ್ದೇನೆ. ಆಲೂರಿನ ಐತಿಹ್ಯವನ್ನು 1998 ರಲ್ಲಿಯೇ ಕೃತಿ ರೂಪದಲ್ಲಿ ತಂದಿದ್ದೇನೆ. ನನ್ನ ಏಳ್ಗೆಗೆ ಪ್ರಮುಖ ಕಾರಣ ನನ್ನ ತಂದೆ ಪಟೆಲ್ ವೆಂಕಟೇಗೌಡರು ಹಾಗೂ ಗ್ರಂಥಾಲಯ ಎಂದು ಸ್ಮರಿಸಿದರಲ್ಲದೆ, ನನ್ನೀ ಜೀವಮಾನದ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಹಾಸನ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಬಿ.ಎನ್.ರಾಮಸ್ವಾಮಿ, ಹಿರಿಯ ಪತ್ರಕರ್ತ ಹೆಚ್.ಕೆ.ವೇಣುಕುಮಾರ್, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಶಿವಣ್ಣ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಫಾ.ಹೈ.ಗುಲಾಂ ಸತ್ತಾರ್, ಗೌರವಾಧ್ಯಕ್ಷರಾದ ಎಂ.ಬಾಲ ಕೃಷ್ಣ, ಸಾಹಿತಿ ಕೆ.ಕೆ.ಸಿದ್ದೇಗೌಡ, ಸಾಹಿತಿ ಗಳಾದ ವಾಣಿ ಮಹೇಶ್, ಸಮುದ್ರವಳ್ಳಿ ವಾಸು, ಎಂ.ಶಿವಣ್ಣ ಮಡಬಲು, ಸಿ.ಎಸ್. ಅಣ್ಣಪ್ಪ, ಎಚ್.ಇ.ದ್ಯಾವಪ್ಪ, ಪಟೇಲ್ ವೆಂಕಟೇಗೌಡ, ಎಂ.ಜೆ.ಪೃಥ್ವಿ, ಟಿ.ಕೆ. ಕುಮಾರಸ್ವಾಮಿ, ಸತೀಶ್ ಚಿಕ್ಕಕಣಗಾಲ್ ಮುಂತಾದವರಿದ್ದರು.

Translate »