ಹಾಸನ

ವಿಜೃಂಭಣೆಯ ಗುತ್ತಿನಕೆರೆ ರಂಗನಾಥಸ್ವಾಮಿ ರಥೋತ್ಸವ
ಹಾಸನ

ವಿಜೃಂಭಣೆಯ ಗುತ್ತಿನಕೆರೆ ರಂಗನಾಥಸ್ವಾಮಿ ರಥೋತ್ಸವ

January 17, 2019

ಅರಸೀಕೆರೆ: ತಾಲೂಕಿನ ಶ್ರೀ ಕ್ಷೇತ್ರ ಗುತ್ತಿನಕೆರೆ ರಂಗನಾಥ ಸ್ವಾಮಿಯ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಗುರುವಾರ ನೆರವೇರಿತು. ಪ್ರಾತಃ ಕಾಲದಿಂದಲೇ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರಾರಂಭ ಗೊಂಡ ಕಾರ್ಯಕ್ರಮಗಳು ಭಕ್ತಾದಿಗಳ ಕಣ್ಮನ ಸೂರೆಗೊಂಡಿತು. ಸಂಕ್ರಾಂತಿ ದಿನದಿಂದ ಮೂರು ದಿನಗಳ ಕಾಲ ನಡೆದ ಮಹಾ ರಥೋತ್ಸವ ಕಾರ್ಯಕ್ರಮಗಳು, ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಅಂತಿಮವಾಗಿ ತೆರೆ ಎಳೆಯಲಾಯಿತು. ಪದ್ಮಾವತಿ ಸಮೇತರಾಗಿ ರಥದಲ್ಲಿ ವಿಜೃಂ ಭಿಸಿದ ರಂಗನಾಥ ಸ್ವಾಮಿಯನ್ನು ಕಣ್ತುಂಬಿ ಕೊಂಡ ಭಕ್ತಾದಿಗಳು ಗೋವಿಂದಾ…

ಸರ್ಕಾರಿ ಕಾಲೇಜಿನಲ್ಲಿ ಕುವೆಂಪು ಜನ್ಮ ದಿನಾಚರಣೆ
ಹಾಸನ

ಸರ್ಕಾರಿ ಕಾಲೇಜಿನಲ್ಲಿ ಕುವೆಂಪು ಜನ್ಮ ದಿನಾಚರಣೆ

January 17, 2019

ಹಾಸನ: ವಿಶ್ವಮಾನವ ಕುವೆಂಪು ಯುಗದ ಪ್ರಜ್ಞೆ ಹೊಂದಿ ದಂತಹ ಕನ್ನಡದ ಮೇರು ಕವಿ ಎಂದು ಸಾಂಸ್ಕøತಿಕ ಚಿಂತಕರು ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ ಕಾಲೇಜಿನ (ಸ್ವಾಯತ್ತ) ಸಭಾಂಗಣದಲ್ಲಿ ಗುರುವಾರ ಕನ್ನಡ ವಿಭಾಗದ ವತಿಯಿಂದ ಆಯೋ ಜಿಸಿದ್ದ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುವೆಂಪು ಕೇವಲ ಸಾಹಿತಿಯಲ್ಲ, ಒಬ್ಬ ರಾಜಕೀಯ ಚಿಂತಕ, ಸಾಮಾಜಿಕ ಚಿಂತಕ, ವೈಚಾರಿಕ ಚಿಂತಕ, ತತ್ವಜ್ಞಾನಿ, ಬಹು ಮುಖ ಪ್ರತಿಭೆ…

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಡಿಸಿ ಸೂಚನೆ
ಹಾಸನ

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಡಿಸಿ ಸೂಚನೆ

January 17, 2019

ಹಾಸನ: ಜಿಲ್ಲೆಯಾದ್ಯಂತ ಫೆ. 3 ರಂದು ನಡೆಯಲಿರುವ ಪಲ್ಸ್ ಪೋಲಿ ಯೋ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಸಂಪೂರ್ಣ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೋ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಪೋಲಿಯೋ ಮುಕ್ತ ಭಾರತದ ನಿರ್ಮಾಣದ ಉದ್ದೇಶ ಹೊಂದಿ ರುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಒಂದು ದೇಶ ಕಟ್ಟುವ ಕೆಲಸವಿದ್ದಂತೆ. ಹಾಗಾಗಿ ಎಲ್ಲರೂ…

ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿರುವುದು ನಿಜ: ಶಾಸಕ ಎ.ಟಿ.ರಾಮಸ್ವಾಮಿ
ಹಾಸನ

ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿರುವುದು ನಿಜ: ಶಾಸಕ ಎ.ಟಿ.ರಾಮಸ್ವಾಮಿ

January 15, 2019

ರಾಮನಾಥಪುರ: ಮೈತ್ರಿ ಸರ್ಕಾರ ದಲ್ಲಿ ಭಿನ್ನಾಭಿಪ್ರಾಯಗಳಿರುವುದು ನಿಜ, ಆದರೆ ನಮ್ಮ ಹಿರಿಯರು ಮಾಡಿಕೊಂಡಿರುವ ಒಪ್ಪಂದ ಪಾಲಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು. ರಾಮನಾಥಪುರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪೂಜೆಗೆ ಆಗಮಿಸಿದ ಶಾಸಕ ಡಾ.ಎ.ಟಿ.ರಾಮಸ್ವಾಮಿ ಅವರನ್ನು ದೇವಸ್ಥಾನದ ಪಾರುಪತ್ತೇಗಾರ ರಮೇಶ್ ಭಟ್ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂತಹ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯ ಕ್ರಮಗಳನ್ನು ಮಾಡಿಕೊಂಡು ಬರುತ್ತಿರು ವುದು ಸಂತೋಷದ ವಿಷಯ ಎಂದರು. ರಾಜ್ಯದ ಎರಡು ಪಕ್ಷದ ವರಿಷ್ಠರು ಸೇರಿ ಹಾಕಿಕೊಂಡಿರುವ…

ಅಕ್ರಮ ಮದ್ಯ ಮಾರಾಟ ವಿರುದ್ಧ ಕಟ್ಟುನಿಟ್ಟಿನ  ಕ್ರಮಕ್ಕೆ ಸಚಿವ ಹೆಚ್.ಡಿ.ರೇವಣ್ಣ ಸೂಚನೆ
ಹಾಸನ

ಅಕ್ರಮ ಮದ್ಯ ಮಾರಾಟ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಹೆಚ್.ಡಿ.ರೇವಣ್ಣ ಸೂಚನೆ

January 15, 2019

ಹಾಸನ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ಸರ್ಕಾರಿ ನಿರೀಕ್ಷಣಾ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳ್ಳಿ ಹಳ್ಳಿಗಳಲ್ಲಿ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಅದನ್ನು ಸಂಪೂರ್ಣ ವಾಗಿ ಮಟ್ಟ ಹಾಕುವಂತೆ ಅಬಕಾರಿ ಇಲಾಖೆ ಜಿಲ್ಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಒಂದು ವೇಳೆ ಅದು ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯ ಅಬಕಾರಿ ಆಯುಕ್ತರಿಗೆ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗುವುದು ಎಂದರು. ಯಾವುದಾದರು…

ಸಂಕ್ರಾಂತಿ ಹಬ್ಬ: ಎಳ್ಳು, ಬೆಲ್ಲ, ಕಬ್ಬು, ಹೂವಿಗೆ ಬಾರಿ ಬೇಡಿಕೆ
ಹಾಸನ

ಸಂಕ್ರಾಂತಿ ಹಬ್ಬ: ಎಳ್ಳು, ಬೆಲ್ಲ, ಕಬ್ಬು, ಹೂವಿಗೆ ಬಾರಿ ಬೇಡಿಕೆ

January 15, 2019

ಹಾಸನ: ನಗರದ ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ ಸುತ್ತಮುತ್ತ ಮಕರ ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು. ಸಂಕ್ರಾಂತಿ ಹಬ್ಬದ ಪದಾರ್ಥವನ್ನು ಕೊಳ್ಳಲು ಸೋಮವಾರ ಬೆಳಗ್ಗಿನಿಂದಲೇ ನಗರದ ಕಟ್ಟಿನಕೆರೆ ಮಾರುಕಟ್ಟೆ ಹಾಗೂ ಕಸ್ತೂರಬಾ ರಸ್ತೆಯಲ್ಲಿ ಜನತೆ ಮುಗಿ ಬಿದ್ದಿದ್ದರು. ಎಳ್ಳು-ಬೆಲ್ಲವನ್ನು ಪ್ಯಾಕೆಟ್ ಮಾಡಿ ಮಾಮೂಲಿ ಬೆಲೆಯಲ್ಲೇ ಮಾರಾಟ ಮಾಡಿದರು. ಸೇವಂತಿ ಹೂವು ಒಂದು ಮಾರಿಗೆ 30 ರಿಂದ 50 ರೂ.ಗಳು ಇದ್ದು, ಕಬ್ಬು ಜೋಡಿಗೆ 30, 50, 60 ರೂ.ಗಳವರೆಗೂ ಮಾರಾಟ ಮಾಡಲಾಯಿತು. ಈ ಹಬ್ಬದ ವಿಶೇಷ…

ನೃತ್ಯಬಾಲೆ ನಿರೀಕ್ಷಾಗೆ ‘ಕಲಾನಿಧಿ’ ಪ್ರಶಸ್ತಿ
ಹಾಸನ

ನೃತ್ಯಬಾಲೆ ನಿರೀಕ್ಷಾಗೆ ‘ಕಲಾನಿಧಿ’ ಪ್ರಶಸ್ತಿ

January 15, 2019

ಬೇಲೂರು: ಸಕಲೇಶಪುರದ ಹಾಡ್ಯ ಸುಬ್ಬೇಗೌಡರ ಪುರಭವನದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಪ್ರೇರಣ ಪುರಸ್ಕಾರ ಕಾರ್ಯಕ್ರಮದಲ್ಲಿ ಬೇಲೂರಿನ ಡಿ.ನಿರೀಕ್ಷಾ ಅವರು ‘ಕಲಾನಿಧಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಭೂಮಿ ಕ್ರಿಯೇಷನ್ಸ್ ಕರ್ನಾಟಕ ಹಾಗೂ ಸಹಾಯಕ ಸಂಘಟನೆಗಳೊಂದಿಗೆ ಆಯೋಜನೆ ಮಾಡಲಾಗಿರುವ ಪ್ರತಿಭಾ ತರಂಗ ಸಾಂಸ್ಕøತಿಕ ಉತ್ಸವ-2019′ ಕಾರ್ಯಕ್ರಮದಲ್ಲಿ ಡಿ.ನಿರೀಕ್ಷಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಗಣ್ಯರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿ ಬೇಲೂರಿಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಕಲಾನಿಧಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗಿದೆ. ಡಿ.ನಿರೀಕ್ಷಾ ಅವರು ಬೇಲೂರು ಚನ್ನಕೇಶವಸ್ವಾಮಿ…

ಅರಸೀಕೆರೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ
ಹಾಸನ

ಅರಸೀಕೆರೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

January 15, 2019

ಅರಸೀಕೆರೆ: ಸಂಕ್ರಾಂತಿ ಹಬ್ಬ ನೆಪ ಮಾತ್ರಕ್ಕೆ ನಮ್ಮ ಹಿರಿಯರು ಮಾಡಿ ರುವುದಿಲ್ಲ. ವೈಜ್ಞಾನಿಕ ಮತ್ತು ಧಾರ್ಮಿ ಕವಾಗಿ ಅರ್ಥೈಸಿ ಪ್ರಕೃತ್ತಿ ಮತ್ತು ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸಲು ಸನಾತನ ಕಾಲದಿಂದಲೂ ಆಚರಿಸಿಕೊಂಡು ಬರು ತ್ತಿರುವ ಸಂಭ್ರಮದ ಆಚರಣೆ ಆಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂ ಸ್ಥಾನದ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ…

ಚನ್ನಪಟ್ಟಣದ ಗೋಮತಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಹಾಸನ

ಚನ್ನಪಟ್ಟಣದ ಗೋಮತಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

January 14, 2019

ಹಾಸನ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ: ಹೆಚ್.ಡಿ.ರೇವಣ್ಣ ಹಾಸನ: ಜಿಲ್ಲೆಯಲ್ಲಿ ಕಳೆದ 10 ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕ್ರಮ ಕೈಗೊಳ್ಳಲಾ ಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಭರವಸೆ ನೀಡಿದರು. ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗದೇ ನೋವು ಉಂಟಾಗಿರುವುದು ನನಗೆ ತಿಳಿದಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರೈತರ…

ಸಂಕ್ರಾಂತಿ ಹಬ್ಬ: ಬೇಲೂರಿನಲ್ಲಿ ರಂಗೋಲಿ ಸ್ಪರ್ಧೆ
ಹಾಸನ

ಸಂಕ್ರಾಂತಿ ಹಬ್ಬ: ಬೇಲೂರಿನಲ್ಲಿ ರಂಗೋಲಿ ಸ್ಪರ್ಧೆ

January 14, 2019

ಬೇಲೂರು: ಕೈಗಳಲ್ಲಿ ರಂಗೋಲಿ ಪುಡಿ ಹಿಡಿದಿದ್ದ ಮಹಿಳೆಯರು, ಯುವತಿ ಯರು ಆವರಣದಲ್ಲಿ ನೀರು ಚುಮುಕಿಸಿ ರಂಗೋಲಿ ಬಿಡಿಸಲು ಸಜ್ಜಾಗುತ್ತಿದ್ದರು… ಅವರು ಹೇಗೆ ರಂಗೋಲಿ ಬಿಡಿಸುತ್ತಾರೆ ಎಂದು ಕಾತುರದಿಂದ ಕಾದು ನಿಂತಿದ್ದ ಜನರು… ಪಟ್ಟಣದ ಕುರುಬಗೇರಿ ಬೀದಿಯಲ್ಲಿ ಚೇತನಲೋಕ ಫೌಂಡೇಷನ್ ಹಾಗೂ ವಿನಾಯಕ ಗೆಳೆಯರ ಬಳಗದಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆ ಯರಿಗೆ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯವಿದು. ಸ್ಪರ್ಧೆಯಲ್ಲಿ ಒಟ್ಟು 130ಕ್ಕೂ ಹೆಚ್ಚು ಸ್ಫರ್ಧಾಳುಗಳು ಪಾಲ್ಗೊಂಡಿದ್ದರು. ನವಿಲು, ಗಣಪತಿ ಸೇರಿದಂತೆ ವಿವಿಧ ರೀತಿಯ…

1 56 57 58 59 60 133
Translate »