ನೃತ್ಯಬಾಲೆ ನಿರೀಕ್ಷಾಗೆ ‘ಕಲಾನಿಧಿ’ ಪ್ರಶಸ್ತಿ
ಹಾಸನ

ನೃತ್ಯಬಾಲೆ ನಿರೀಕ್ಷಾಗೆ ‘ಕಲಾನಿಧಿ’ ಪ್ರಶಸ್ತಿ

January 15, 2019

ಬೇಲೂರು: ಸಕಲೇಶಪುರದ ಹಾಡ್ಯ ಸುಬ್ಬೇಗೌಡರ ಪುರಭವನದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಪ್ರೇರಣ ಪುರಸ್ಕಾರ ಕಾರ್ಯಕ್ರಮದಲ್ಲಿ ಬೇಲೂರಿನ ಡಿ.ನಿರೀಕ್ಷಾ ಅವರು ‘ಕಲಾನಿಧಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಭೂಮಿ ಕ್ರಿಯೇಷನ್ಸ್ ಕರ್ನಾಟಕ ಹಾಗೂ ಸಹಾಯಕ ಸಂಘಟನೆಗಳೊಂದಿಗೆ ಆಯೋಜನೆ ಮಾಡಲಾಗಿರುವ ಪ್ರತಿಭಾ ತರಂಗ ಸಾಂಸ್ಕøತಿಕ ಉತ್ಸವ-2019' ಕಾರ್ಯಕ್ರಮದಲ್ಲಿ ಡಿ.ನಿರೀಕ್ಷಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಗಣ್ಯರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿ ಬೇಲೂರಿಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಕಲಾನಿಧಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗಿದೆ. ಡಿ.ನಿರೀಕ್ಷಾ ಅವರು ಬೇಲೂರು ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ವೆಂಕಟೇಗೌಡ ಅವರ ಮೊಮ್ಮಗಳಾಗಿದ್ದಾರೆ.

Translate »