ಅರಸೀಕೆರೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ
ಹಾಸನ

ಅರಸೀಕೆರೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

January 15, 2019

ಅರಸೀಕೆರೆ: ಸಂಕ್ರಾಂತಿ ಹಬ್ಬ ನೆಪ ಮಾತ್ರಕ್ಕೆ ನಮ್ಮ ಹಿರಿಯರು ಮಾಡಿ ರುವುದಿಲ್ಲ. ವೈಜ್ಞಾನಿಕ ಮತ್ತು ಧಾರ್ಮಿ ಕವಾಗಿ ಅರ್ಥೈಸಿ ಪ್ರಕೃತ್ತಿ ಮತ್ತು ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸಲು ಸನಾತನ ಕಾಲದಿಂದಲೂ ಆಚರಿಸಿಕೊಂಡು ಬರು ತ್ತಿರುವ ಸಂಭ್ರಮದ ಆಚರಣೆ ಆಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂ ಸ್ಥಾನದ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತ ನಾಡಿದ ಅವರು, ಅನ್ನದಾತ ರೈತನು ಬೆಳೆದ ದವಸ ಧಾನ್ಯಗಳನ್ನು ಒಂದೆಡೆ ರಾಶಿ ಹಾಕು ವುದರ ಮೂಲಕ ಪೂಜೆ ಸಲ್ಲಿಸಿ ಭೂಮಿ ಪೂಜೆ, ಗೋವುಗಳ ಪೂಜೆಯೊಂದಿಗೆ ಗುರು ಪೂಜೆಯನ್ನು ಆಚರಿಸಿಕೊಂಡು ಬರುವ ಸಂಪ್ರದಾಯ ಅನಾದಿ ಕಾಲದಿಂ ದಲೂ ನಮ್ಮ ಸಂಸ್ಕøತಿಯಲ್ಲಿ ಹಾಸು ಹೊಕ್ಕಾ ಗಿದೆ. ಇಂತಹ ಪ್ರಕೃತಿ ಪೂರಕ ಕಾರ್ಯ ಕ್ರಮಗಳು ನಮ್ಮ ಸಂಸ್ಕøತಿಯ ಪ್ರತೀಕ ವಾಗಿವೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ತಾವು ಬೆಳೆದ ದವಸ ಧಾನ್ಯಗಳಿಗೆ ಕಣ ಎನ್ನುವ ಹೆಸರಿ ನಲ್ಲಿ ರಾಶಿ ಹಾಕಿ ಗ್ರಾಮಸ್ಥರು ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಭಾಗ ವಹಿಸಿ ಧನ್ಯತಾ ಭಾವವನ್ನು ಹೊಂದು ತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಎಂದರೆ ನಿರ್ಲಕ್ಷ್ಯ ತೋರಿ ಸುವ ದಿನಗಳಲ್ಲಿ ಶಾಲಾ ಮಕ್ಕಳಿಗೆ ಧಾನ್ಯಗಳ ರಾಶಿ ಪೂಜೆ, ಗೋವುಗಳ ಪೂಜೆ ಮತ್ತು ಗುರು ಪೂಜೆಗಳಂತಹ ಕಾರ್ಯಕ್ರಮ ಗಳನ್ನು ಆಯೋಜಿಸಿ, ಪರಿಚಯಿಸುತ್ತಿರುವುದು ಸಂತೋಷÀವಾಗುತ್ತಿದೆ. ಮನೆ ಮನೆಗಳಲ್ಲಿ ತಮ್ಮ ಪೂರ್ವಿಕರು ನಡೆಸಿಕೊಂಡು ಬರುತ್ತಿದ್ದ ಸಾಂಸ್ಕøತಿಕ ಪರಂಪರೆಯನ್ನು ಪರಿಚಯ ಮಾಡಿಕೊಡುವ ಚಟುವಟಿಕೆಗಳಿಗೆ ಪ್ರತಿ ಯೊಬ್ಬರು ಪ್ರೋತ್ಸಾಹ ನೀಡಬೇಕಾಗಿದೆ.

ಮಠದ ಹಿರಿಯ ಚೇತನ ಪರಮ ಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಯವರ ಕನಸಿನಂತೆ ಪ್ರತಿಯೊಬ್ಬರೂ ಶಿಕ್ಷಣ ವನ್ನು ಪಡೆಯಬೇಕು ಮತ್ತು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಮಠವು ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಆ ನಿಟ್ಟಿನಲ್ಲೂ ಶ್ರೀಯವರ ಆಸೆಯನ್ನು ಪೂರೈಸಲು ಶ್ರಮಿ ಸಲಾಗುತ್ತಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಸಂಸ್ಕಾರದೊಂದಿಗೆ ಸಂಸ್ಕøತಿಯನ್ನು ರೂಢಿಸಿಕೊಂಡಾಗ ಮಾತ್ರ ನಮ್ಮ ಹಿರಿ ಯರ ಮಾರ್ಗದರ್ಶನ ಮತ್ತು ಅದರ ಹಿನ್ನೆಲೆ ನಮಗೆಲ್ಲ ಅರಿವಾಗುತ್ತದೆ. ಸಂಕ್ರಾಂತಿ ಯಂತಹ ಸಂಭ್ರಮದ ಹಬ್ಬಗಳನ್ನು ಪ್ರತಿ ಕುಟುಂಬದಲ್ಲೂ ನಿರಂತರವಾಗಿ ಆಚರಿಸಿ ಕೊಂಡು ಬಂದಾಗ ಆ ಮನೆಗಳಲ್ಲಿ ವೈಷಮ್ಯ, ಅಸೂಯೆಗಳು ದೂರವಾಗುವುದರ ಮೂಲಕ ಸುಖೀ ಕುಟುಂಬವಾಗುವುದ ರಲ್ಲಿ ಯಾವುದೇ ಸಂಶಯವಿಲ್ಲ. ಗುರುವಿನ ಮೂಲಕ ಪಡೆಯುವ ಸಂಸ್ಕಾರ ಮತ್ತು ಸಂಸ್ಕøತಿ ಪ್ರತಿಯೊಬ್ಬರ ಜೀವನವು ಹಸನಾ ಗುತ್ತದೆ. ಈ ಎರಡೂ ಪದ್ಧತಿಗಳು ನಮ್ಮನ್ನು ಒಂದುಗೂಡಿಸುತ್ತವೆ ಮತ್ತು ಸಹಬಾಳ್ವೆ ಯನ್ನು ಕಲಿಸಿಕೊಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ರಾಗಿ ರಾಶಿ ಮತ್ತು ಅಲಂಕೃತÀ ಎತ್ತಿನಗಾಡಿಗೆ ಪೂಜೆ ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಲಾ ಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ವಿದ್ಯಾರ್ಥಿಗಳ ಪೋಷಕರು ಸಾಮೂಹಿಕ ವಾಗಿ ಗುರುಗಳ ಪಾದಗಳಿಗೆ ಪೂಜೆ ಸಲ್ಲಿ ಸುವುದರ ಮೂಲಕ ಗೌರವ ಸಲ್ಲಿಸಿದರು. ಸಂಸ್ಕøತ ವಿದ್ವಾಂಸ ರಾಮಚಂದ್ರಪ್ಪ ಪೋತ್ರಿ, ಪ್ರಾಂಶುಪಾಲ ಲಿಂಗರಾಜು, ಮುಖ್ಯೋಪಾ ಧ್ಯಾಯಿನಿ ಜ್ಞಾನೇಶ್ವರಿ, ನಗರಸಭೆ ಮಾಜಿ ಅಧ್ಯಕ್ಷ ಮನುಕುಮಾರ್ ಇನ್ನಿತರರು ಇದ್ದರು.

Translate »