ಸಂಕ್ರಾಂತಿ ಹಬ್ಬ: ಬೇಲೂರಿನಲ್ಲಿ ರಂಗೋಲಿ ಸ್ಪರ್ಧೆ
ಹಾಸನ

ಸಂಕ್ರಾಂತಿ ಹಬ್ಬ: ಬೇಲೂರಿನಲ್ಲಿ ರಂಗೋಲಿ ಸ್ಪರ್ಧೆ

January 14, 2019

ಬೇಲೂರು: ಕೈಗಳಲ್ಲಿ ರಂಗೋಲಿ ಪುಡಿ ಹಿಡಿದಿದ್ದ ಮಹಿಳೆಯರು, ಯುವತಿ ಯರು ಆವರಣದಲ್ಲಿ ನೀರು ಚುಮುಕಿಸಿ ರಂಗೋಲಿ ಬಿಡಿಸಲು ಸಜ್ಜಾಗುತ್ತಿದ್ದರು… ಅವರು ಹೇಗೆ ರಂಗೋಲಿ ಬಿಡಿಸುತ್ತಾರೆ ಎಂದು ಕಾತುರದಿಂದ ಕಾದು ನಿಂತಿದ್ದ ಜನರು…
ಪಟ್ಟಣದ ಕುರುಬಗೇರಿ ಬೀದಿಯಲ್ಲಿ ಚೇತನಲೋಕ ಫೌಂಡೇಷನ್ ಹಾಗೂ ವಿನಾಯಕ ಗೆಳೆಯರ ಬಳಗದಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆ ಯರಿಗೆ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯವಿದು.
ಸ್ಪರ್ಧೆಯಲ್ಲಿ ಒಟ್ಟು 130ಕ್ಕೂ ಹೆಚ್ಚು ಸ್ಫರ್ಧಾಳುಗಳು ಪಾಲ್ಗೊಂಡಿದ್ದರು. ನವಿಲು, ಗಣಪತಿ ಸೇರಿದಂತೆ ವಿವಿಧ ರೀತಿಯ ಪಕ್ಷಿಗಳು, ಹೂವುಗಳು ಹಾಗೂ ಇನ್ನಿತರ ಚಿತ್ತಾರಗಳನ್ನು ಹೆಂಗಳೆಯರು ಬಿಡಿಸಿ ಸಂಭ್ರಮಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಚೇತನ ಲೋಕ ಫೌಂಡೇಷನ್ ಅಧ್ಯಕ್ಷ ಕೆ.ಟಿ.ಚೇತನ್ ಕುಮಾರ್ ಮಾತನಾಡಿ, ಇತ್ತೀಚಿನ ದಿನ ಗಳಲ್ಲಿ ಹಿಂದೂ ಸಂಸ್ಕøತಿ ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕøತಿಯತ್ತ ಯುವತಿ ಯರು ವಾಲುತ್ತಿದ್ದಾರೆ.
ಮಹಿಳೆಯರು ಧಾರವಾಹಿಗಳತ್ತ ಹೆಚ್ಚು ಗಮನಹರಿಸುತ್ತಿದ್ದು ಮನೆಯಲ್ಲಿ ಧಾರ್ಮಿಕ ಸಂಸ್ಕøತಿ ಆಚರಣೆಗಳು ಹಬ್ಬ ಹರಿದಿನಗಳು ಕಡಿಮೆಯಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಂಕ್ರಾಂತಿ ಹಬ್ಬದ ಅಂಗವಾಗಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.

ಮಕ್ಕಳಿಗೆ ಮನೆಯ ಮೊದಲ ಪಾಠ ಶಾಲೆಯಾಗಿದ್ದು, ಅವರಿಗೆ ಚಿಕ್ಕವಯಸ್ಸಿ ನಿಂದಲೇ ನಮ್ಮ ಆಚಾರ- ವಿಚಾರಗಳನ್ನು ಮನವರಿಕೆ ಮಾಡಿಕೊಡುವುದು ಅಗತ್ಯ ವಾಗಿದೆ ಎಂದು ತಿಳಿಸಿದರು.

ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಲಾಗುತ್ತಿತ್ತು. ಮನೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವನ್ನು ಬಿಡಿಸುತ್ತಿದ್ದರು. ಆದರೆ, ಇತ್ತೀಚಿನ ದಿನದಲ್ಲಿ ಹಬ್ಬದ ಸೊಗಡು ಕಡಿಮೆಯಾಗುತ್ತಿದ್ದು, ಆಚಾರ-ವಿಚಾರ ಗಳು ದೂರವಾಗುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆ ಯರಿಗೆ, ಯುವತಿಯರಿಗೆ ರಂಗೋಲಿ ಸ್ಪರ್ಧೆ ಯನ್ನು ಏರ್ಪಡಿಸುವುದರಿಂದ ಮನರಂ ಜನೆಯ ಜೊತೆಗೆ ನಮ್ಮ ಸಂಸ್ಕøತಿ ಪರಿಚಯ ಮಾಡಿಕೊಟ್ಟಂತಾಗುತ್ತದೆ ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಜ. 16 ರಂದು ಕೆಂಚರಾಯ ಸ್ವಾಮಿ ದೇಗುಲದ ಬಳಿ ಏರ್ಪಡಿಸಿರುವ ದೀಪ ಪೂಜಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.

ತೀರ್ಪುಗಾರರಾದ ಇಂದಿರಮ್ಮ ಮಾತ ನಾಡಿ, ಇಂದಿನ ರಂಗೋಲಿ ಸ್ಪರ್ಧೆಯಲ್ಲಿ 130 ಕ್ಕೂ ಹೆಚ್ಚು ಮಹಿಳೆಯರು ಯುವತಿ ಯರು ಪಾಲ್ಗೊಂಡಿದ್ದು, ಬಣ್ಣ ಬಣ್ಣದ ಚಿತ್ತಾರದ ರಂಗೋಲಿಯನ್ನು ಬಿಡಿಸಿರು ವುದು ಸಂತೋಷವನ್ನು ಉಂಟು ಮಾಡಿದೆ. ಪುರಾತನ ಕಲೆಯಾದ ರಂಗೋಲಿಯು ಇಂದು ಕಣ್ಮರೆಯಾಗುವ ಅಂಚಿನಲ್ಲಿದ್ದು ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

Translate »