ಶ್ರದ್ಧಾಭಕ್ತಿಯಿಂದ ನಡೆದ ಪುಣ್ಯಾರಾಧನಾ ಮಹೋತ್ಸವ
ಹಾಸನ

ಶ್ರದ್ಧಾಭಕ್ತಿಯಿಂದ ನಡೆದ ಪುಣ್ಯಾರಾಧನಾ ಮಹೋತ್ಸವ

January 14, 2019

ಹಾಸನ: ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವು ನಗರದ ಶ್ರೀ ಆದಿಚುಂಚನಗಿರಿ ಸಮು ದಾಯ ಭವನದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶಂಭುನಾಥ ಸ್ವಾಮೀಜಿ ಅವರು ಪ್ರಾತಃಕಾಲ 6 ಗಂಟೆಗೆ ಮಠದ ಆವರಣದಲ್ಲಿರುವ ಮಹಾಗಣಪತಿ ದೇವಾ ಲಯದಲ್ಲಿ ವಿಘ್ನೇಶ್ವರ ಮೂರ್ತಿಗೆ, ಅಭಿಷೇಕ ಮತ್ತು ರಜತ ಕವಚಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿ ಸುವುದರೊಂದಿಗೆ ಶ್ರೀ ಡಾ.ಬಾಲಗಂಗಾ ಧರನಾಥ ಸ್ವಾಮೀಜಿ ಅವರ 6ನೇ ಪುಣ್ಯಾ ರಾಧನಾ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಹಲವು ಧಾರ್ಮಿಕ ವಿಧಿವಿಧಾನಗಳು ಸಂಪ್ರ ದಾಯದಂತೆ ಜರುಗಿದವು.
ತರುವಾಯ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಪುತ್ಥಳಿಯನ್ನು ಶ್ರೀ ಮಠದ ಆವರಣದಿಂದ ಎಂ.ಜಿ.ರಸ್ತೆಯ ಮೂಲಕ ಮುತ್ತಿನ ಪಲ್ಲಕ್ಕಿಯಲ್ಲಿ ಉತ್ಸವದ ಮೂಲಕ ಆದಿಚುಂಚನಗಿರಿ ಸಮು ದಾಯ ಭವನದವರೆಗೂ ತರಲಾಯಿತು. ಇದೇ ವೇಳೆ ಶಂಭುನಾಥ ಸ್ವಾಮೀಜಿ ಗೋಪೂಜೆ ನೆರವೇರಿಸಿದರು.

ತದನಂತರ ಆದಿಚುಂಚನಗಿರಿ ಸಮು ದಾಯ ಭವನದಲ್ಲಿ ನಡೆದ ಪುಣ್ಯಾರಾ ಧನಾ ವಿಧಿ ವಿಧಾನಗಳು ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದವು. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಯವರ ಪುತ್ಥಳಿ ಎದುರು ನೈವೇದ್ಯ ಇಟ್ಟು ಅಷ್ಟಾವಧಾನ ಸೇವೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಈ ವೇಳೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಮಠದ ಭಕ್ತರು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಶ್ರೀಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಗಾಯಕ ರೋಹನ್ ಆರ್.ಅಯ್ಯರ್, ಕು.ಸ್ವಾತಿ ಕಾಂತರಾಜು ಭಕ್ತಿಭಾವ ಸುಧೆ ಹರಿಸಿದರು. ಕಲಾವಿದೆ ರೂಪಿಕಾ ಭರತನಾಟ್ಯ ನಡೆಸಿಕೊಟ್ಟರು. ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ ಹಾಗೂ ಕಬ್ಬಳಿಯ ಶ್ರೀ ಶನೇಶ್ವರ ಭಜನಾ ಮಂಡಳಿ, ಹಾಸನದ ಶ್ರೀಹೇಮಾವತಿ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು.
ಸಂಜೆ ಶ್ರೀ ಶಂಭುನಾಥ ಶ್ರೀಗಳ ನೇತೃತ್ವ ದಲ್ಲಿ ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಮಠದವರೆಗೂ ಸಾವಿರಾರು ಭಕ್ತರು ದಿವ್ಯ ಜ್ಯೋತಿಯೊಂದಿಗೆ ಮೆರವಣಿಗೆ ನಡೆಸಿದರು. ನಂತರ ಡಾ.ಬಾಲಗಂಗಾ ಧರನಾಥ ಸ್ವಾಮೀಜಿಯವರ ಪುತ್ಥಳಿಗೆ ಮಹಾಮಂಗಳಾರತಿ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂ ಚನಗಿರಿ ಶೃಂಗೇರಿ ಶಾಖಾ ಮಠದ ಗುಣ ನಾಥ ಸ್ವಾಮೀಜಿ, ಮಂಗಳೂರು ಮಠದ ಧರ್ಮನಾಥ ಸ್ವಾಮೀಜಿ, ರಾಮನಗರದ ಅನ್ನದಾನೇಶ್ವರನಾಥ ಸ್ವಾಮೀಜಿ, ಕನಕ ಪುರದ ವಿದ್ಯಾಧರನಾಥ ಸ್ವಾಮೀಜಿ, ದಸರೀ ಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ಚುಂಚನಕಟ್ಟೆಯ ಶಿವಾನಂದನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠ ಗಳ ಮಠಾಧೀಶರು, ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮಗಳ ಸಂಚಾಲಕ ಎಚ್.ಬಿ. ಮದನಗೌಡ, ಮಠದ ವ್ಯವಸ್ಥಾಪಕ ಚಂದ್ರಶೇಖರ್ ಉಪಸ್ಥಿತರಿದ್ದರು.

Translate »