ಹಾಸನ-ಬೇಲೂರು ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್
ಹಾಸನ

ಹಾಸನ-ಬೇಲೂರು ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್

January 14, 2019
  • 33 ಕಿ.ಮೀ ಹಳಿ ಜೋಡಣೆ
  • 600 ಕೋಟಿ ಒಟ್ಟು ವೆಚ್ಚ
  • 50:50 ರಾಜ್ಯ, ಕೇಂದ್ರದ ಪಾಲು

ಹಾಸನ: ಹಾಸನ-ಬೇಲೂರು ರೈಲು ಮಾರ್ಗದ 600 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ಬೇಲೂರು ನಡುವೆ ರೈಲ್ವೆ ಹಳಿ ಜೋಡಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಕಾಮಗಾರಿ ಕೈಗೆತ್ತಿ ಕೊಳ್ಳಲಿದೆ. ಸುಮಾರು 600 ಕೋಟಿ ರೂ. ವೆಚ್ಚದಡಿ ನಿರ್ಮಾಣವಾಗಲಿರುವ ರೈಲ್ವೆ ಮಾರ್ಗಕ್ಕೆ ಸಂಸತ್ತಿನಲ್ಲಿ ಅನು ಮೋದನೆ ದೊರೆತಿದೆ ಎಂದರು.

ಬೇಲೂರು-ಆಲೂರು-ಹಾಸನ ಮಾರ್ಗ ವಾಗಿ 33 ಕಿಮೀ ಹಳಿ ಜೋಡಣೆಗೆ ಕ್ಯಾಬಿ ನೆಟ್ ಅನುಮೋದನೆ ಕೊಟ್ಟಿದ್ದು, ಶೀಘ್ರ ದಲ್ಲೇ ಕಾಮಗಾರಿಗೆ ಭೂಮಿಪೂಜೆ ನೆರ ವೇರಿಸಲಾಗುವುದು ಎಂದು ಹೇಳಿದರು.

ತಾಲೂಕಿನ ಶಾಂತಿಗ್ರಾಮ ಹೋಬ ಳಿಯ ಗಾಡೇನಹಳ್ಳಿ ಬಳಿ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ 40 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 255 ಕೋಟಿ ರೂ. ವೆಚ್ಚದಲ್ಲಿ ಜೈಲು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ 380 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ಎಡದಂಡೆ ನಾಲೆ ಆಧುನೀಕರಣಕ್ಕೆ ಅನುಮೋದನೆ ಸಿಕ್ಕಿದೆ. ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧ ರಾಗಿದ್ದೇವೆ ಎಂದು ಹೇಳಿದರು.

ಹಾಸನದಲ್ಲಿ ಒಂದು ವಾರ ಕೃಷಿ ಹಾಗೂ ಆರೋಗ್ಯ ಮೇಳ ಹಮ್ಮಿಕೊಳ್ಳ ಲಾಗುವುದು. ವಾರದೊಳಗೆ ಶ್ರೀರಾಮ ದೇವರ ಕಟ್ಟೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಜಿಲ್ಲಾ ಕ್ರಿಡಾಂಗಣವನ್ನು 10 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರ ಮಟ್ಟದ ದರ್ಜೆಗೆ ಏರಿಕೆಯಾಗಲಿದ್ದು, ಸದ್ಯ ದಲ್ಲೇ ಹಾಸನ ವಿಮಾನ ನಿಲ್ದಾಣ ಕಾಮ ಗಾರಿಗೆ ಚಾಲನೆ ದೊರೆಯಲಿದೆ ಎಂದರು.

ಎ.ಮಂಜು ಹೇಳಿಕೆಗೆ ತಿರುಗೇಟು: ಜಿಲ್ಲೆ ಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗೆ ಕಾಂಗ್ರೆಸ್ ಕಾಲದಲ್ಲೇ ಆಗಿದೆ ಎಂದು ಮಾಜಿ ಸಚಿವ ಎ.ಮಂಜು ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿದರೇ ನಾನು ಪೊಳ್ಳಾಗ ಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಆಡಳಿತದಲ್ಲಿ ಹಾಸನದ ಅಭಿವೃದ್ಧಿ ಕೆಲಸದ ಕಾಮಗಾರಿಗೆ ಅನುಮೋದನೆ ದೊರಕಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮೊದಲು ಈ ವಿಷಯವನ್ನು ಪೂರ್ಣ ತಿಳಿದುಕೊಂಡು ಮಾತ ನಾಡಬೇಕು. ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕೆಲಸಗಳು ಆಗಿರುವುದಿಲ್ಲ. ಇಂತಹ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.

Translate »