ವಿವೇಕಾನಂದರ ವಾಣಿ ವಿಶ್ವ ಮನ್ನಣೆಗೆ ಪಾತ್ರ
ಹಾಸನ

ವಿವೇಕಾನಂದರ ವಾಣಿ ವಿಶ್ವ ಮನ್ನಣೆಗೆ ಪಾತ್ರ

January 14, 2019

ಅರಸೀಕೆರೆ: ಸ್ವಾಮಿ ವಿವೇಕಾ ನಂದ ಅವರ ಅದ್ಭುತ ವಾಣಿಗಳನ್ನು ಇಂದು ಪ್ರಪಂಚವೇ ಮೆಚ್ಚುತ್ತಿದೆ. ನಮ್ಮ ದೇಶದ ಯುವ ಜನತೆ ಇವರ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಲು ಮುಂದಾಗ ಬೇಕು. ಆಗ ಮಾತ್ರ ಮಾತ್ರ ವಿವೇಕಾ ನಂದರು ವಿಶ್ವಕ್ಕೆ ಹೇಗೆ ಮಾದರಿಯಾದರು ಎಂದು ಅರಿವಾಗುತ್ತದೆ ಎಂದು ಶಿಕ್ಷಣ ತಜ್ಞ ನಾರಾಯಣ ರಾವ್ ಶರ್ಮ ಹೇಳಿದರು.

ನಗರದ ರೋಟರಿ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾ ನಂದರ 156ನೇ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ವಿವೇಕಾನಂದ ರನ್ನು ಇಡೀ ಜಗತ್ತೇ ಹೊಗಳಿ ಕೊಂಡಾ ಡುತ್ತದೆ. ನಮ್ಮ ದೇಶವನ್ನು ಪ್ರಪಂಚದ ಎಲ್ಲಾ ದೇಶಗಳು ತಿರುಗಿ ನೋಡುವಂತೆ ಮಾಡಿದ ಮಹಾನ್ ವ್ಯಕ್ತಿ ವಿವೇಕಾನಂದರು. ಆದರೆ ಅವರ ಆದರ್ಶ, ಜೀವನ ತತ್ವಗಳನ್ನು ನಾವು ಅಳವಡಿಸಿಕೊಳ್ಳುವಲ್ಲಿ ವಿಫಲರಾಗಿ ದ್ದೇವೆ. ದೇಶದಲ್ಲಿ ಸದೃಢ ಯುವ ಜನಾಂಗ ವನ್ನು ನಾವು ನೋಡಬೇಕಾದರೆ ಮೊದಲು ಶಿಕ್ಷಣದ ವ್ಯವಸ್ಥೆ ಸದೃಢವಾಗಬೇಕು. ಮಕ್ಕಳಲ್ಲಿ ಅಂತಹ ಮನೋಭಾವವನ್ನು ಶಿಕ್ಷಕರು ಶಾಲೆಗಳಲ್ಲಿ ಕಲಿಸಿಕೊಡಬೇಕು. ವಿವೇಕಾನಂದರು ಹೇಳಿದಂತೆ ಮಕ್ಕಳು ಭವಿಷ್ಯದಲ್ಲಿ ತನ್ನ ಕಾಲ ಮೇಲೆ ತಾನು ನಿಂತು ಕೊಳ್ಳುವಂತೆ ಸಾಧ್ಯವಾಗುವಂತಹ ಶಿಕ್ಷಣ ನೀಡಬೇಕು. ಕೇವಲ ಅಂಕ ಗಳಿಕೆಗೆ ಈಗಿನ ವಿದ್ಯೆ ಮೀಸಲಾಗುತ್ತಿರುವುದು ಇದಕ್ಕೆ ಪೋಷಕರೂ ಸಹ ಮಾರು ಹೋಗಿರು ವುದು ದುರದೃಷ್ಟಕರ ಎಂದರು.

ನಗರಸಭಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನೂರಾರು ಮಕ್ಕಳು ಶಾಲಾ ಶಿಕ್ಷಕರು ರೋಟರಿ ಶಾಲೆ ಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವ ಣಿಗೆಯಲ್ಲಿ ಶಾಲಾ ಮಕ್ಕಳು ಧರಿಸಿದ್ದ ಸ್ವಾಮಿ ವಿವೇಕಾನಂದರ ವೇಷಭೂಷಣ ಹಾಗೂ ಅವರಾಡಿದ ವಿವೇಕಾನಂದರ ನುಡಿಗಳು ನೋಡುಗರ ಕಣ್ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸುರೇಶ್ ಮಾತನಾಡಿದರು. ಶಾಲಾ ನಿರ್ದೇಶಕ ಗೋವಿಂದರಾವ್, ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳಾದ ಸುಮನ ಭರತ್, ರೋಹಿಣಿ, sಸಂಧ್ಯಾ ವಿಶ್ವನಾಥ್, ಶಾಲಾ ಮುಖ್ಯೋಪಾಧ್ಯಾಯ ಅರುಣ್ ಕುಮಾರ್, ಪೋಷಕ ಜಯಣ್ಣ, ಹಿರಿಯ ಪತ್ರಕರ್ತ ಕಣಕಟ್ಟೆ ಕುಮಾರ್, ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನ ಹಳ್ಳಿ ಪ್ರಸನ್ನ, ಸಹ ಶಿಕ್ಷಕರಾದ ವೆಂಕ ಟೇಶ್, ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.

Translate »