ಪ್ಲಾಸ್ಟಿಕ್ ಅಕ್ಕಿ ಪತ್ತೆ?
ಮೈಸೂರು

ಪ್ಲಾಸ್ಟಿಕ್ ಅಕ್ಕಿ ಪತ್ತೆ?

January 14, 2019

ತಿ.ನರಸೀಪುರ: ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಸಂದರ್ಭ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಪ್ರಕರಣ ಇಂದು ಬೆಳ ಕಿಗೆ ಬಂದಿದೆ. ಬಿಸಿಯೂಟ ಯೋಜ ನೆಗೆ ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆ ಪೂರೈಕೆ ಮಾಡುವ ಅಕ್ಕಿಯ ಮೂಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿ ಆತಂಕ ಮೂಡಿಸಿದೆ. ಎಂದಿ ನಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಮೂಟೆಯಿಂದ ಅಕ್ಕಿ ತೆಗೆದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಗಾಬರಿಗೊಂಡ ಬಿಸಿಯೂಟ ತಯಾರಿಕೆ ಸಿಬ್ಬಂದಿ ಅಡುಗೆ ಕಾರ್ಯ ಸ್ಥಗಿತಗೊಳಿಸಿ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಮುಖ್ಯ ಶಿಕ್ಷಕ ಬಸವರಾಜು ಮೂಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಇರುವುದನ್ನು ಖಚಿತ ಪಡಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿಆರ್‍ಸಿ ಗಮನಕ್ಕೆ ತರಲಾಗಿ ಸ್ಥಳಕ್ಕೆ ಬಿಆರ್‍ಸಿ ಮಂಜುಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಿಸಿಯೂಟದ ಸಿಬ್ಬಂದಿ ಮೇಲೆ ಗರಂ ಆದ ಮಂಜುಳ ಉಡಾಫೆಯಿಂದ ವರ್ತಿಸಿದರು ಎನ್ನಲಾಗಿದೆ. ಜೊತೆಗೆ ಸ್ಥಳದಲ್ಲೇ ಹಾಜರಿದ್ದು ಸಂಪೂರ್ಣ ಮಾಹಿತಿ ನೀಡಿದ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಡಿಎಸ್‍ಎಸ್ ಮುಖಂಡ ಬನ್ನಹಳ್ಳಿ ಸೋಮಣ್ಣ ಅವರಿಗೂ ಸಮರ್ಪಕ ಮಾಹಿತಿ ನೀಡದೆ ನುಣುಚಿ ಕೊಳ್ಳಲು ಯತ್ನಿಸಿದರು. ಇದರಿಂದ ಕೆರಳಿದ ಸೋಮಣ್ಣ ಈ ಸಂಬಂದ ಬಿಇಓ, ಬಿಆರ್‍ಸಿ ವಿರುದ್ಧ ಡಿಡಿಪಿಐರವರಿಗೆ ದೂರು ನೀಡುವುದಾಗಿ ತಿಳಿಸಿದರು.

Translate »