ಸಿಬಿಐ, ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ವೃದ್ಧರ ವಂಚಿಸಿ ಚಿನ್ನಾಭರಣ ದೋಚಿದ ಖದೀಮರು
ಮೈಸೂರು

ಸಿಬಿಐ, ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ವೃದ್ಧರ ವಂಚಿಸಿ ಚಿನ್ನಾಭರಣ ದೋಚಿದ ಖದೀಮರು

January 14, 2019

ಮೈಸೂರು: ಸಿಬಿಐ ಮತ್ತು ಸಿಐಡಿ ಅಧಿ ಕಾರಿಗಳ ಸೋಗಿನಲ್ಲಿ ಕಳ್ಳರು ಹಾಡಹಗಲೇ ಇಬ್ಬರು ವೃದ್ಧ ರನ್ನು ವಂಚಿಸಿ ಚಿನ್ನಾಭರಣ ದೋಚಿರುವ ಘಟನೆ ಶನಿವಾರ ಬೆಳಿಗ್ಗೆ ಮೈಸೂರಿನ ವಿವಿಪುರಂನಲ್ಲಿ ನಡೆದಿದೆ.

ಮೈಸೂರಿನ ಗೋಕುಲಂ ನಿವಾಸಿ ಕೃಷ್ಣ ಪ್ರಸಾದ್(80) ಮತ್ತು ಕೆ.ಜಿ.ಕೊಪ್ಪಲು ನಿವಾಸಿ ಶಿವಲಿಂಗು(74) ಎಂಬುವರೇ ಪ್ರತ್ಯೇಕ ಸ್ಥಳದಲ್ಲಿ ನಕಲಿ ಪೊಲೀಸರ ಬೆಣ್ಣೆ ಮಾತಿಗೆ ಮರು ಳಾಗಿ ಚಿನ್ನಾಭರಣ ಕಳೆದುಕೊಂಡವರಾಗಿದ್ದಾರೆ. ಈ ಪ್ರಕರಣ ದಿಂದ ವೃದ್ಧರನ್ನೇ ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿ ರುವ ಜಾಲವೊಂದು ಮೈಸೂರಲ್ಲಿ ಕಾರ್ಯಾಚರಣೆ ನಡೆಸು ತ್ತಿರುವ ಅನುಮಾನ ದಟ್ಟವಾಗಿದೆ. ಈ ಕುರಿತಂತೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ `ಮೈಸೂರು ಮಿತ್ರ’ ವೃದ್ಧೆಯರನ್ನು ವಂಚಿಸುವ ಜಾಲ ಕಾರ್ಯಾಚರಿಸುತ್ತಿರುವ ಬಗ್ಗೆ ವರದಿ ಪ್ರಕಟಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತ್ತು. ಆದರೂ ಕಳ್ಳರು ಹಾಡಹಗಲೇ ವಂಚಿಸಿರುವುದು ಆತಂಕ ಮೂಡಿಸಿದೆ.

ಮೊದಲ ಘಟನೆ: ಶನಿವಾರ ಬೆಳಗ್ಗೆ ಗೋಕುಲಂ ನಿವಾಸಿ ಕೃಷ್ಣಪ್ರಸಾದ್ ಎಂಬವರು ಮಾತೃಮಂಡಳಿ ವೃತ್ತದ ಬಳಿಯಿ ರುವ ಲಾಯಲ್ ವಲ್ಡರ್ï ಸೂಪರ್ ಮಾರ್ಕೆಟ್‍ನಲ್ಲಿ ಮಾತ್ರೆ ತೆಗೆದುಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ಮೂವರು ಬಂದು ನಾವು ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡಿ ದ್ದಾರೆ. ನಾವು ಡ್ರಗ್ಸ್ ಚೆಕ್ ಮಾಡುತ್ತಿz್ದÉೀವೆ.
ನಿಮ್ಮ ಹತ್ತಿರ ಡ್ರಗ್ಸ್ ಇದೆಯಾ ಎಂದು ಹೇಳಿ ಕೃಷ್ಣಪ್ರಸಾದ್ ಅವರ ಜೇಬು ಚೆಕ್ ಮಾಡಿದ್ದಾರೆ. ಪÀರ್ಸ್ ಮತ್ತು ಕರವಸ್ತ್ರವನ್ನು ತೆಗೆದು ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿದ್ದ ಉಂಗುರವನ್ನು ತೆಗೆಸಿ ಒಬ್ಬರೇ ರಸ್ತೆಯಲ್ಲಿ ಬರುವಾಗ ಆಭರಣ ಹಾಕಿಕೊಂಡು ಬರಬೇಡಿ ಎಂದು ಬುದ್ಧಿವಾದ ಹೇಳಿದಂತೆ ನಾಟಕವಾಡಿದ್ದಾರೆ. ನಂತರ ಕರವಸ್ತ್ರದಲ್ಲಿ ಉಂಗುರ ಮತ್ತು ಸರವನ್ನು ಸುತ್ತಿ ಉಂಡೆಯಂತೆ ಗಂಟುಕಟ್ಟಿ ಕೃಷ್ಣಪ್ರಸಾದ್ ಕೈಗೆ ಕೊಟ್ಟಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಬಿಚ್ಚದೆ ಮನೆಗೆ ಹೋಗಿ ಉಂಗುರ ಮತ್ತು ಸರವನ್ನು ಧರಿಸಿ ಕೊಳ್ಳಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ಕೃಷ್ಣಪ್ರಸಾದ್ ಮನೆಗೆ ಬಂದು ಕರವಸ್ತ್ರದ ಗಂಟನ್ನು ಬಿಚ್ಚಿ ನೋಡಿದಾಗ 8 ಗ್ರಾಂ ತೂಕದ ಉಂಗುರ ಮತ್ತು 25 ಗ್ರಾಂ ತೂಕದ ಚಿನ್ನದ ಸರ ಇರಲಿಲ್ಲ. ಇದನ್ನು ಕಂಡು ಮೋಸ ಹೋಗಿರುವುದು ಮನವರಿಕೆಯಾದ ಕೂಡಲೆ ಮಕ್ಕಳೊಂದಿಗೆ ರಸ್ತೆಯಲ್ಲಿ ಕಳ್ಳರಿಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಸುಳಿವು ಸಿಗದೆ ಹಿನ್ನೆಲೆಯಲ್ಲಿ ವಿವಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣ: ಕೆ.ಜಿ.ಕೊಪ್ಪಲಿನ ನಿವಾಸಿ ಶಿವಲಿಂಗು ಎಂಬುವರು ಕೆಆರ್‍ಎಸ್ ರಸ್ತೆ ಸುಬ್ರಮಣ್ಯ ದೇವಾಲಯದ ಬಳಿ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ಸ್ಕೂಟರ್ ನಿಲ್ಲಿಸುವಂತೆ ಹೇಳಿದ್ದಾರೆ. ಇದನ್ನು ಲೆಕ್ಕಿಸದೆ ಶಿವ ಲಿಂಗು ಸ್ಕೂಟರ್ ಅನ್ನು ಚಾಲನೆ ಮಾಡಿಕೊಂಡು ಮುಂದೆ ಹೋಗಿದ್ದಾರೆ. ಹಿಂಬಾಲಿಸಿದ ಕಳ್ಳರು ಶಿವಲಿಂಗು ಅವರ ಸ್ಕೂಟರ್‍ಗೆ ನಿಧಾನವಾಗಿ ತಾಕಿಸಿದ್ದಾರೆ. ಇದರಿಂದ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿದ ಶಿವಲಿಂಗು ಅವರ ಬಳಿ ಬಂದು ಇಬ್ಬರು ನಾವು ಸಿಐಡಿ ಅಧಿಕಾರಿಗಳು ಎಂದು ಹೇಳಿ ಐಡಿ ಕಾರ್ಡ್ ತೋರಿಸಿದ್ದಾರೆ.

ಮುಂದೆ ಕಳ್ಳತನ, ದರೋಡೆ ನಡೆದಿದೆ. ನಿಮ್ಮ ಚಿನ್ನಾಭರಣ ಗಳನ್ನು ಬಿಚ್ಚಿ ಜೇಬು ಅಥವಾ ಸ್ಕೂಟರ್ ಡಿಕ್ಕಿಯೊಳಗೆ ಇರಿಸಿಕೊಳ್ಳಿ ಎಂದು ಹೇಳಿ, ತಾವೇ ಕರವಸ್ತ್ರ ಪಡೆದು ಕತ್ತಿನಲ್ಲಿದ್ದ 1 ಚಿನ್ನದ ಸರ, ಕೈಯಲ್ಲಿದ್ದ 1 ಬ್ರಾಸ್‍ಲೆಟ್ ಮತ್ತು ಕೈ ಬೆರಳಿನಲ್ಲಿದ್ದ 1 ಉಂಗುರವನ್ನು ಬಿಚ್ಚಿಸಿ ಕರವಸ್ತ್ರಕ್ಕೆ ಕಟ್ಟಿ ಸ್ಕೂಟರ್ ಡಿಕ್ಕಿಗೆ ಹಾಕಿದ್ದಾರೆ. ನಿಮ್ಮ ಚಿನ್ನಾಭರಣಗಳನ್ನು ಡಿಕ್ಕಿಗೆ ಹಾಕಿz್ದÉೀವೆ. ಮನೆಗೆ ಹೋಗಿ ತೆಗೆದುಕೊಳ್ಳಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮನೆಗೆ ಬಂದು ಗಂಟನ್ನು ಬಿಚ್ಚಿ ನೋಡಿದಾಗ ಚಿನ್ನಾಭರಣ ಇಲ್ಲದಿರುವುದು ಕಂಡುಬಂದಿದೆ. ಕೂಡಲೆ ಶಿವಲಿಂಗು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ವಿವಿ ಪುರಂ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Translate »