ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿರುವುದು ನಿಜ: ಶಾಸಕ ಎ.ಟಿ.ರಾಮಸ್ವಾಮಿ
ಹಾಸನ

ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯವಿರುವುದು ನಿಜ: ಶಾಸಕ ಎ.ಟಿ.ರಾಮಸ್ವಾಮಿ

January 15, 2019

ರಾಮನಾಥಪುರ: ಮೈತ್ರಿ ಸರ್ಕಾರ ದಲ್ಲಿ ಭಿನ್ನಾಭಿಪ್ರಾಯಗಳಿರುವುದು ನಿಜ, ಆದರೆ ನಮ್ಮ ಹಿರಿಯರು ಮಾಡಿಕೊಂಡಿರುವ ಒಪ್ಪಂದ ಪಾಲಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು.

ರಾಮನಾಥಪುರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪೂಜೆಗೆ ಆಗಮಿಸಿದ ಶಾಸಕ ಡಾ.ಎ.ಟಿ.ರಾಮಸ್ವಾಮಿ ಅವರನ್ನು ದೇವಸ್ಥಾನದ ಪಾರುಪತ್ತೇಗಾರ ರಮೇಶ್ ಭಟ್ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂತಹ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯ ಕ್ರಮಗಳನ್ನು ಮಾಡಿಕೊಂಡು ಬರುತ್ತಿರು ವುದು ಸಂತೋಷದ ವಿಷಯ ಎಂದರು. ರಾಜ್ಯದ ಎರಡು ಪಕ್ಷದ ವರಿಷ್ಠರು ಸೇರಿ ಹಾಕಿಕೊಂಡಿರುವ ಲಕ್ಷ್ಮಣ ರೇಖೆಯನ್ನು ಇಬ್ಬರೂ ದಾಟುವುದು ಬೇಡ. ನಮ್ಮ ಮೇಲೆ ಅಟ್ಟಹಾಸ ಮಾಡಲು ಬಂದರೆ ನಾವು ಸುಮ್ಮ ನಿರುವುದುಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರಾಮಸ್ವಾಮಿ ಹರಿಹಾಯ್ದರು.

ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿವೇಚನೆಯಿಂದ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಬೇಕು. ಪ್ರತಿ ಬಾರಿಯೂ ಕಾಂಗ್ರೆಸ್ ಹೇಳಿದ ಹಾಗೆ ಜೆಡಿಎಸ್ ಶಾಸಕರು ಕೇಳಬೇಕೆಂದು ಹಠ ಹಿಡಿಯುವುದು ಸರಿಯಲ್ಲ. ನಾವು ಸುಮ್ಮ ನಿದ್ದೇವೆ ಎಂಬ ಮಾತ್ರಕ್ಕೆ ಅಸಮರ್ಥರು ಎಂದು ಭಾವಿಸುವುದು ತಪ್ಪು. ಅಧಿಕಾರಕ್ಕೆ ಅಂಟಿಕೊಂಡಿರುವ ಜಾಯಮಾನ ನಮ್ಮ ದಲ್ಲ. ಜಾತ್ಯಾತೀತ ತತ್ವ ಸಿದ್ಧಾಂತಗಳಿಗೆ ಧಕ್ಕೆ ಉಂಟಾದರೆ ವಿರೋಧ ಪಕ್ಷದ ಸ್ಥಾನ ದಲ್ಲಿ ಕೂರಲು ಸಿದ್ಧರಿದ್ದೇವೆ. ಕಾಂಗ್ರೆಸ್ ದಬ್ಬಾಳಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಾಕಷ್ಟು ಕಷ್ಟಪಟ್ಟು ಪಕ್ಷ ಬೆಳೆಸಿದ್ದಾರೆ. ಅವರು ಈಗಲೂ ಹಗಲು ರಾತ್ರಿ ಎನ್ನದೇ ಪಕ್ಷ ಹಾಗೂ ದೇಶದ ಜನತೆಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಸಂಘ ಟನೆಗೆ ಒತ್ತು ನೀಡಿ ಎಲ್ಲದರ ಅಭಿವೃದ್ಧಿ ಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

2 ಕೋಟಿ ರೂ ಮಂಜೂರು: ರಾಮನಾಥ ಪುರ ಸಾರಿಗೆ ಘಟಕ ನಿರ್ಮಾಣಕ್ಕೆ 2 ಕೋಟಿ 62 ಲಕ್ಷ ರೂ ಮಂಜೂರಾಗಿದೆ. ಇಲ್ಲಿಯ ಕೆಎಸ್‍ಅರ್‍ಟಿಸಿ ನೂತನ ಬಸ್ ನಿಲ್ದಾಣದ ಮತ್ತು ವಾಣಿಜ್ಯ ಮಳಿಗೆ ಸೇರಿ ದಂತೆ ವಿವಿಧ ಸೌಲಭ್ಯಗಳಿಗೆ ಸರ್ಕಾರಕ್ಕೆ ಮತ್ತೆ 1 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಅರಕಲಗೂಡು ಪಟ್ಟಣದ ಅನಕೃ ಸರ್ಕಲ್‍ನಲ್ಲಿ 6 ರಸ್ತೆಗಳು ಒಂದೇ ಜಾಗದಲ್ಲಿ ಸೇರಲಿದ್ದು, ಹಳೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲ ಕ್ಕಾಗಿ ಅತ್ಯಾಧುನಿಕ ಪ್ರಯಾಣಿಕರ ತಂಗು ದಾಣ, ವಾಣಿಜ್ಯ ಮಳಿಗೆಗಳು, ಶೌಚಾ ಲಯಗಳಿಗೆ 1.3 ಕೋಟಿ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳು ಹಿಸಲಾಗಿದೆ ಎಂದರು.

ಮುಗಳೂರು ಗ್ರಾಮದಿಂದ ಕೇರಳಾ ಪುರದ ಗಡಿವರೆಗೆ ಆಧುನೀಕರಣ ಕಾಮ ಗಾರಿ ಹಾರಂಗಿ ಎಡದಂಡೆ ನಾಲೆಗೆ ಸಿಮೆಂಟ್ ಲೈನಿಂಗ್ ಮತ್ತು ಆಧುನೀ ಕರಣ ಕಾಮಗಾರಿಗೆ 116 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಹಾರಂಗಿ ನಾಲೆಯು ಕಂಟೇನಹಳ್ಳಿ ಯಿಂದ ಕಟ್ಟೇಪುರ ಗ್ರಾಮದ ಹತ್ತಿರ ಕಾವೇರಿ ನದಿಯ ಕೃಷ್ಣರಾಜ ಅಣೆಕಟ್ಟೆ ಯಿಂದ 8110 ಎಕರೆ ಪ್ರದೇಶದಲ್ಲಿ ನೀರಾ ವರಿ ಸೌಲಭ್ಯ ಒದಗಿಸುತ್ತಿದ್ದು, ಬಲದಂಡೆ ಮತ್ತು ಎಡದಂಡೆ ನಾಲೆಯನ್ನು ಆಧುನೀ ಕರಣಗೊಳಿಸಲು ತೀರ್ಮಾನಿಸಿ 88.50 ಕೋಟಿಗಳ ಅಂದಾಜು ಪಟ್ಟಿಗೆ ಮಂಜೂ ರಾತಿ ನೀಡಿ, ಪೇವರ್‍ನಿಂದ ನಾಲೆಯ ಎರಡು ಬದಿಯಲ್ಲಿ ಸಿಮೆಂಟ್ ಕಾಂಕ್ರಿಟ್ ಮಾಡಲಾಗುವುದು ಎಂದರು.

ಜೆಡಿಎಸ್ ಮಾಜಿ ಅಧ್ಯಕ್ಷ ರಂಗ ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಭಾ ಕರ್, ಹನ್ಯಾಳು ಮಂಜುನಾಥ್, ಎಪಿ ಎಂಸಿ ಮಾಜಿ ಉಪಾಧ್ಯಕ್ಷ ಬಸವಪಟ್ಟಣ ಜೆ.ನಾಗರಾಜು, ತಾಪಂ ಮಾಜಿ ಸದಸ್ಯ ಬಿ.ಸಿ.ವೀರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮಾದಾಪುರ ಕೃಷ್ಣೇಗೌಡ, ಶಾಸಕರ ಆಪ್ತ ಸಹಾಯಕ ವೆಂಕಟೇಶ್ ಮುಂತಾದವರಿದ್ದರು.

Translate »