ಬಸ್ತೀಪುರ ಸರ್ಕಾರಿ ಶಾಲೆಯಲ್ಲಿ ಸ್ವಚ್ಛ ದಂತ ಅಭಿಯಾನ
ಮೈಸೂರು

ಬಸ್ತೀಪುರ ಸರ್ಕಾರಿ ಶಾಲೆಯಲ್ಲಿ ಸ್ವಚ್ಛ ದಂತ ಅಭಿಯಾನ

January 15, 2019

ಮೈಸೂರು: ಸ್ವಚ್ಛ ದಂತ ಅಭಿಯಾನದಡಿ ಬಸ್ತೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳಿಗೆ ಮೈಸೂರಿನ ಹನಿ ಫೌಂಡೇಷನ್ ವತಿ ಯಿಂದ ಉಚಿತವಾಗಿ ದಂತ ತಪಾ ಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ದಂತ ಆರೋಗ್ಯ ಕಾಪಾಡುವ ನಿಟ್ಟಿ ನಲ್ಲಿ ಹನಿ ಫೌಂಡೇಷನ್ `ಸ್ವಚ್ಛ ದಂತ’ ಅಭಿಯಾನ ಹಮ್ಮಿಕೊಂಡಿದ್ದು, ಈಗಾ ಗಲೇ ಹಲವು ಶಾಲೆಗಳ ವಿದ್ಯಾರ್ಥಿ ಗಳಿಗೆ ದಂತ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಬಸ್ತೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ತಪಾಸಣಾ ಶಿಬಿರ ನಡೆಸಿ ಹಲ್ಲಿನ ಸ್ವಚ್ಛತೆ, ಸುರಕ್ಷತೆ ಹಾಗೂ ಹಲ್ಲು ಉಜ್ಜುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವೈದ್ಯರು ವಿವರಿಸಿದರು. ಬಳಿಕ ಎಲ್ಲರಿಗೂ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ, ಉಚಿತವಾಗಿ ಹಲ್ಲು ಉಜ್ಜುವ ಪೇಸ್ಟ್ ಮತ್ತು ಬ್ರಷ್ ವಿತರಿಸಲಾಯಿತು.

ಈ ವೇಳೆ ಹನಿ ಫೌಂಡೇಷನ್ ಮುಖ್ಯಸ್ಥೆ, ದಂತ ವೈದ್ಯೆ ಡಾ. ನಿಸರ್ಗ ಕನ್ಸರ್ ಮಾತನಾಡಿ, ಹನಿ ಫೌಂಡೇಷನ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸೇವೆ ನೀಡಲಾಗುತ್ತಿದೆ. ಕೇವಲ ತಪಾಸಣೆಗೆ ಮಾತ್ರ ಶಿಬಿರವನ್ನು ಸೀಮಿತಗೊಳಿಸದೇ ಉಚಿತವಾಗಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡುವುದು, ದೊಡ್ಡ ಸಮಸ್ಯೆ ಇದ್ದರೆ ಅವರನ್ನು ಆಸ್ಪತ್ರೆಗೆ ಕರೆತಂದು ಉಚಿತವಾಗಿ ಚಿಕಿತ್ಸೆಯೊಂದಿಗೆ ಔಷಧವನ್ನು ನೀಡಲಾಗುತ್ತದೆ. ನಮ್ಮ ತಂಡದಲ್ಲಿ ತಜ್ಞ ವೈದ್ಯರುಗಳಾದ ಡಾ. ಅನುಶ್ರೀ, ಡಾ.ಚೈತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು, ಸರ್ಕಾರಿ ಶಾಲೆ ಮುಖ್ಯಸ್ಥರು ತಮ್ಮ ಶಾಲೆಯ ವಿದ್ಯಾರ್ಥಿ ಗಳಿಗೆ ಸೇವೆ ಬಯಸಿದರೆ ಹನಿ ಫೌಂಡೇಷನ್ ವತಿಯಿಂದ ನೆರವು ನೀಡಲಾಗುತ್ತದೆ ಎಂದರು. ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಬೋಧಕ ಸಿಬ್ಬಂದಿ ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Translate »