ಕಾವೇರಿ ಆಸ್ಪತ್ರೆಯಿಂದ ಬಾಲಕನಿಗೆ  ಸವಾಲಿನ ಥೊರಾಕೊಸ್ಕೋಪಿ ಯಶಸ್ವಿ ಚಿಕಿತ್ಸೆ
ಮೈಸೂರು

ಕಾವೇರಿ ಆಸ್ಪತ್ರೆಯಿಂದ ಬಾಲಕನಿಗೆ ಸವಾಲಿನ ಥೊರಾಕೊಸ್ಕೋಪಿ ಯಶಸ್ವಿ ಚಿಕಿತ್ಸೆ

January 15, 2019

ಮೈಸೂರು: ಶ್ವಾಸಕೋಶದ ಮೇಲಿನ ಪದರ (ಫ್ಲೂರಲ್) ರೋಗದಿಂದ ಬಳಲುತ್ತಿದ್ದ 13 ವರ್ಷದ ಬಾಲಕನಿಗೆ ಸವಾಲಿನ ವೈದ್ಯಕೀಯ ಥೊರಾ ಕೊಸ್ಕೋಪಿ ಚಿಕಿತ್ಸೆಯನ್ನು ಯಶಸ್ವಿಯಗಿ ಮಾಡಿರುವುದಾಗಿ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಸಿ ಆಸ್ಪತ್ರೆ ವೈದ್ಯ ಡಾ.ಎಸ್.ವಿ.ಹರ್ಷವರ್ಧನ್ ತಿಳಿಸಿದರು.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಿದ್ದ ಮಳವಳ್ಳಿ ತಾಲೂಕು ನಿಮ್ನಾಪುರ ದೊಡ್ಡಿಯ ಮುತ್ತುರಾಜ್ ಗುಣಮುಖನಾಗುತ್ತಿ ದ್ದಾನೆ ಎಂದು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಜ್ವರ, ಆಹಾರ ಸೇವನೆ ಸಾಧ್ಯವಾಗದೆ ಬಳಲುತ್ತಿದ್ದ ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಅತ್ಯಂತ ಸೂಕ್ಷ್ಮವಾದ ಎದೆ ಮತ್ತು ಶ್ವಾಸಕೋಶದ ನಡುವೆ ಕಂಡು ಬಂದ ಕ್ಷಯ ರೋಗಾಣುವನ್ನು ಥೊರಾಕೊಸ್ಕೋಪಿ ಮೂಲಕ ಯಶಸ್ವಿ ಚಿಕಿತ್ಸೆ ನೀಡಲಾಯಿತು. ಈಗ ಗುಣಮುಖನಾಗುತ್ತಿರುವ ಆತ ಎರಡು ತಿಂಗಳಿಂದ ಆಹಾರ ಸೇವನೆ ಮಾಡುತ್ತಿದ್ದು, ಕ್ಷಯ ರೋಗಾಣುಗಳು ಕಡಿಮೆಯಾಗಿದ್ದು, ವಿದ್ಯಾರ್ಥಿ ಲವಲವಿಕೆಯಿಂದ ಇದ್ದಾನೆ. ಇನ್ನೂ ಆರು ತಿಂಗಳು ಔಷಧೋಪಚಾರ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯ ವೇಳೆ ಬಾಲಕ ಮುತ್ತುರಾಜ್, ಅಸ್ಪತ್ರೆಯ ಆಡಳಿತಾಧಿಕಾರಿ ಸಂದೀಪ್ ಪಾಟೀಲ್, ಬಾಲಕನ ಪೋಷಕರಾದ ಮರಿಸ್ವಾಮಿ ಉಪಸ್ಥಿತರಿದ್ದರು.

Translate »