ಹಾಸನ

ಜನ ಮರುಳೊ, ಜಾತ್ರೆ ಮರುಳೋ; ಕಣ್ಣು ಬಿಟ್ಟಳಾ ಭದ್ರಕಾಳಿ…?
ಹಾಸನ

ಜನ ಮರುಳೊ, ಜಾತ್ರೆ ಮರುಳೋ; ಕಣ್ಣು ಬಿಟ್ಟಳಾ ಭದ್ರಕಾಳಿ…?

October 14, 2018

ಅರಸೀಕೆರೆ: ತಾಲೂಕಿನ ಬೆಂಡೆಕೆರೆ ಗ್ರಾಪಂ ವ್ಯಾಪ್ತಿಯ ಶಾಂತನ ಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಭದ್ರಕಾಳಮ್ಮ ದೇವಿ ಕಣ್ಣು ಬಿಟ್ಟಿರುವ ದೃಶ್ಯ ಗೋಚರವಾಗಿದ್ದು, ಸುದ್ದಿ ಹರಡುತ್ತಿದ್ದಂತೆ ರಾಜ್ಯದ ವಿವಿಧ ಮೂಲೆಗಳಿಂದ ಜನತೆ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ. ನವರಾತ್ರಿ ಆರಂಭದ ಹಿಂದಿನ ದಿನ ಮಹಾಲಯ ಅಮಾವಾಸ್ಯೆಯಂದು ದೇವಿಯ ಕಣ್ಣುಗಳು ತೆರೆದಂತೆ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಅವರಿಗೆ ಗೋಚರವಾಗಿದ್ದು, ನಂತರ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು, ಸುತ್ತ ಮುತ್ತಲ ಗ್ರಾಮದ ಜನತೆ ತಂಡೋಪ ತಂಡವಾಗಿ ದೇವಾಲಯಕ್ಕೆ ಆಮಿಸಿ ದೇವಿಯ…

ಹಳೇಬೀಡು, ಹನಿಕೆ, ಹಗರೆಯಲ್ಲಿ ಉಪಮಾರುಕಟ್ಟೆ ನಿರ್ಮಾಣ ಭರವಸೆ
ಹಾಸನ

ಹಳೇಬೀಡು, ಹನಿಕೆ, ಹಗರೆಯಲ್ಲಿ ಉಪಮಾರುಕಟ್ಟೆ ನಿರ್ಮಾಣ ಭರವಸೆ

October 13, 2018

ಬೇಲೂರು: ತಾಲೂಕಿನ ಹಳೇ ಬೀಡು, ಹನಿಕೆ, ಹಗರೆ ಸೇರಿದಂತೆ ವಿವಿಧ ಭಾಗದಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲವಾಗುವಂತೆ ಉಪ ಕೃಷಿ ಮಾರುಕಟ್ಟೆ ನಿರ್ಮಾಣ ಹಾಗೂ ವಾರದ ಸಂತೆಯ ಸ್ಥಳದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಇಲ್ಲಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಲ್ಲಿನ ಎಪಿಎಂಸಿ ಆವರಣದಲ್ಲಿ 3.5 ಕೋಟಿ ಅನುದಾನದಲ್ಲಿ ಮಾರುಕಟ್ಟೆ ನಿರ್ಮಿಸಲಾ ಗುತ್ತಿದೆ. ಹನಿಕೆ ಉಪ ಮಾರುಕಟ್ಟೆ ಪ್ರಾಂಗಣ ದಲ್ಲಿ ಜಾನುವಾರುಗಳಿಗೆ…

ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ
ಹಾಸನ

ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ

October 13, 2018

ಹಾಸನ: ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಡಿವೈ ಎಫ್‍ಐ ನೇತೃತ್ವದಲ್ಲಿ ವ್ಯಾಪಾರಸ್ಥರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು. ಹಾಸನ ನಗರದ ಎನ್.ಆರ್ ವೃತ್ತ ಮತ್ತು ಪ್ರವಾಸಿ ಮಂದಿರದ ರಸ್ತೆ ಬದಿ ಯಲ್ಲಿ ಹತ್ತಾರು ವರ್ಷಗಳಿಂದಲೂ ಆರ್ಥಿಕವಾಗಿ ಹಿಂದುಳಿದ ಬಡವರು ಟೀ-ಕಾಫಿ, ಕ್ಯಾಂಟೀನ್, ಪಾನಿಪುರಿ ಗಾಡಿ, ಚಪ್ಪಲಿ ರಿಪೇರಿ, ತಂಪು ಪಾನಿಯ ಮಾರಾಟ, ಸಣ್ಣ-ಪುಟ್ಟ ಬಟ್ಟೆ ಅಂಗಡಿ ಸೇರಿದಂತೆ ಇನ್ನಿತರೆ ವ್ಯಾಪಾರ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಣ್ಣ-ಪುಟ್ಟ ವ್ಯಾಪಾರವೇ ಈ ಜನರ ಜೀವನಾಧಾರವಾಗಿದೆ. ಆದರೆ…

ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ: ಹೆಚ್.ಡಿ.ರೇವಣ್ಣ
ಹಾಸನ

ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ: ಹೆಚ್.ಡಿ.ರೇವಣ್ಣ

October 12, 2018

ಹಾಸನ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪೂರ್ವ ಯೋಜನೆ ಸಿದ್ಧಪಡಿಸಿ ಅದಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಾಮಾಜಿಕ ಅರಣ್ಯ, ರೇಷ್ಮೆ, ಮೀನುಗಾರಿಕೆ, ನಗರಾಭಿವೃದ್ಧಿ, ಕುಡಿಯುವ ನೀರು ಸರಬರಾಜು ಸೇರಿದಂತೆ ಎಲ್ಲಾ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಗೆ ಜಾರಿಯಾಗಬೇಕು. ಆ…

ಹೊಳೆನರಸೀಪುರದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಸಚಿವ ರೇವಣ್ಣ ಚಾಲನೆ
ಹಾಸನ

ಹೊಳೆನರಸೀಪುರದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಸಚಿವ ರೇವಣ್ಣ ಚಾಲನೆ

October 12, 2018

ಹೊಳೆನರಸೀಪುರ: ಹಸಿದು ಬಂದ ವರಿಗೆಲ್ಲ ಊಟ-ತಿಂಡಿ ವಿತರಿಸಲು ‘ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಸಾರ್ವಜನರಿಕರು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಲೋಕೋ ಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸಲಹೆ ನೀಡಿದರು. ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿ ರುವ ಪಶು ಆಸ್ಪತ್ರೆ ಸಮೀಪ ನಿರ್ಮಾಣ ವಾಗಿರುವ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.ಹೊಳೆನರಸೀಪುರ ಜನತೆಯ ಬಹುದಿನಗಳ ಬೇಡಿಕೆ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾ ಕಾಂಕ್ಷೆಯ ಯೋಜನೆ `ಇಂದಿರಾ ಕ್ಯಾಂಟೀನ್’ ಗೆ ಚಾಲನೆ ನೀಡಲಾಗಿದೆ. ಕ್ಯಾಂಟೀನ್ ಸಮರ್ಪಕವಾಗಿ…

ಅಕ್ರಮ ಕಸಾಯಿಖಾನೆಗಳಿಗೆ ಬೀಗ ಮುದ್ರೆ ನಗರಸಭೆ, ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆ
ಹಾಸನ

ಅಕ್ರಮ ಕಸಾಯಿಖಾನೆಗಳಿಗೆ ಬೀಗ ಮುದ್ರೆ ನಗರಸಭೆ, ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆ

October 12, 2018

ಅರಸೀಕೆರೆ:  ನಗರದ ವಿವಿಧೆಡೆ ಅನ ಧಿಕೃತವಾಗಿ ನಡೆಯುತ್ತಿದ್ದ ಕಸಾಯಿ ಖಾನೆ ಗಳನ್ನು ನಗರಸಭೆ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ಬಂದ್ ಮಾಡಿದರು.ನಗರಸಭೆ ಪೌರಾಯುಕ್ತ ಪರಮೇ ಶ್ವರಪ್ಪ, ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರಂಗಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ನಗರದ ಮಟನ್ ಮಾರ್ಕೇಟ್, ಸುನ್ನೀ ಚೌಕ , ಮುಜಾವರ್ ಮೊಹಲ್ಲಾ ಮತ್ತು ಹಾಸನ ರಸ್ತೆ ಬಲಭಾಗದಲ್ಲಿರುವ ಒಟ್ಟು 9 ಅನಧಿಕೃತ ಕಸಾಯಿ ಖಾನೆಗಳಿಗೆ ಬೀಗ ವನ್ನು ಹಾಕಿ ಮಾಲಿಕರ ಮೇಲೆ ದೂರನ್ನು ದಾಖಲಿಸಿಕೊಳ್ಳಲಾಯಿತು. ಕಾರ್ಯಾ…

ಕುರಿಗಾಹಿಗಳು ಆಧುನಿಕ ಯಂತ್ರ ಬಳಸಲು ಸಲಹೆ
ಹಾಸನ

ಕುರಿಗಾಹಿಗಳು ಆಧುನಿಕ ಯಂತ್ರ ಬಳಸಲು ಸಲಹೆ

October 12, 2018

ಅರಸೀಕೆರೆ:  ‘ಕುರಿ ಉಣ್ಣೆಯನ್ನು ಕತ್ತರಿಸಲು ಆಧುನಿಕ ಯಂತ್ರಗಳನ್ನು ಬಳಸು ವುದರಿಂದ ಉತ್ತಮ ಗುಣಮಟ್ಟ ದೊಂದಿಗೆ ಕಂಬಳಿ ನೇಯಲು ಅನುಕೂಲವಾಗುತ್ತದೆ. ಕುರಿಗಾಹಿಗಳು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು’ ಎಂದು ಕುರಿ ಮತ್ತು ಉಣ್ಣೆ ಅಭಿ ವೃದ್ಧಿ ನಿಗಮದ ಸಹಾಯಕ ನಿದೇರ್ಶಕ ಡಾ.ಸುರೇಶ್ ಸಲಹೆ ನೀಡಿದರು. ತಾಲೂಕಿನ ಬಸವರಾಜಪುರದಲ್ಲಿ ಕರ್ನಾ ಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಹಾಸನ ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಕುರಿಗಾಹಿಗಳಿಗೆ ಏರ್ಪಡಿಸಿದ…

ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ
ಹಾಸನ

ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

October 11, 2018

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಗರಸಭೆ ಸಭಾಂಗಣದಲ್ಲಿಂದು ನಗರ ವ್ಯಾಪ್ತಿ ಜನತೆಯ ಕುಂದು ಕೊರತೆಗಳ ಕುರಿತು ಅಹವಾಲು ಸ್ವೀಕರಿಸಿದರು. ಹಾಸರ ನಗರಸಭೆ ನೇತೃತ್ವದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ 100ಕ್ಕೂ ಅಧಿಕ ಮಂದಿ ಪಾಲ್ಗೊಂಡು, ವೈಯಕ್ತಿಕ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗ್ನೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ನ್ಯಾಯಸಮ್ಮತ ಬೇಡಿಕೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಅಧಿಕಾರಿಗಳು ಇನ್ನಷ್ಟು ಜನಪರವಾಗಿ ಕಾರ್ಯ ನಿರ್ವಹಿಸಬೇಕು….

ಹಾಸನದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಹಾಸನ

ಹಾಸನದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

October 11, 2018

ಹಾಸನ: ಎಸ್‍ಸಿ/ಎಸ್‍ಟಿ ವಿದ್ಯಾ ರ್ಥಿಗಳಿಗೆ ಮಾರಕವಾಗಿರುವ ಸರ್ಕಾ ರದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತದ ಆವರಣದಲ್ಲ ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿ ವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಯಿಂದ ರಾಜ್ಯಾದ್ಯಂತ ತೆರೆದಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸಿ ಬರುವ ಎಲ್ಲಾ…

ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವು
ಹಾಸನ

ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವು

October 11, 2018

ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ತಾಲೂಕಿನ ಕಲ್ಲಹಳ್ಳಿ ಗೇಟ್ ಹತ್ತಿರ ಕಾರೂಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿ ದ್ದಾರೆ. ಬೆಂಗಳೂರಿನ ಕಲಾಸಿಪಾಳ್ಯದ ಮಹಮದ್ ಫಾರುಕ್ (60) ಮೃತಪಟ್ಟವರು. ಕೇರಳದ ಕಾಸರಗೂಡಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಇವರ ಕಾರು ರಸ್ತೆ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಮಹಮ್ಮದ್ ಫಾರುಕ್‍ರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ…

1 84 85 86 87 88 133
Translate »