ಕೊಡಗು

ಮಳೆ ಆರ್ಭಟ ತಗ್ಗಿದೆ… ಮುಂದೇನು ಎಂಬ ಚಿಂತೆ ಕಾಡಿದೆ
ಕೊಡಗು

ಮಳೆ ಆರ್ಭಟ ತಗ್ಗಿದೆ… ಮುಂದೇನು ಎಂಬ ಚಿಂತೆ ಕಾಡಿದೆ

August 31, 2018

ಮಡಿಕೇರಿ: ಕೊಡಗಿನಲ್ಲಿ ಆರ್ಭಟವನ್ನೇ ಸೃಷ್ಟಿಸಿದ ಮಹಾಮಳೆಯ ರೌದ್ರ ನರ್ತನ ತಗ್ಗಿದೆ. ಕುಗ್ಗಿದ ಮನಸ್ಸುಗಳು ಹಿಗ್ಗುವ ಬದಲು ಮುಂದೇನು ಎನ್ನುವ ಚಿಂತೆಯಲ್ಲಿ ಮುಳುಗಿವೆ. ಕಣ್ಮರೆಯಾದ ಊರು ಹೇಗಿರಬಹುದು? ನಾವು ಸಾಕಿದ ಪ್ರಾಣಿಗಳು ಏನಾದವು? ಬದುಕು ಕಟ್ಟಿಕೊಟ್ಟ ಮನೆ ಉಳಿದಿದೆಯೇ? ಎನ್ನುವ ಕುತೂಹಲದ ನೋವು ನಿರಾಶ್ರಿತರನ್ನು ಕಾಡಲು ಆರಂಭಿಸಿದೆ. ಪರಿಹಾರ ಕೇಂದ್ರಗಳಲ್ಲಿ ಊಟ, ಬಟ್ಟೆ, ಹೊದಿಕೆ ಮತ್ತಿತರ ವಸ್ತುಗಳೇನೋ ಸಿಗುತ್ತಿವೆ. ಆದರೆ ಇದು ಎಷ್ಟು ದಿನ ಎಂಬ ಚಿಂತೆ ಎಲ್ಲರನ್ನೂ ಚುಚ್ಚುತ್ತಿದೆ. ಬಹುತೇಕ ಕಾಫಿ ತೋಟಗಳು ಮಣ್ಣಿನಡಿ ಸಿಲುಕಿ ಸರ್ವನಾಶವಾಗಿವೆ….

ಇಂದು ಉದ್ಯೋಗ ಮೇಳ
ಕೊಡಗು

ಇಂದು ಉದ್ಯೋಗ ಮೇಳ

August 31, 2018

ಮಡಿಕೇರಿ:  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಆಗಸ್ಟ್ 31 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವೆರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆ
ಕೊಡಗು

ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆ

August 31, 2018

ಸೋಮವಾರಪೇಟೆ:  ಅಸ್ಸಾಂ ಮೂಲದ ಯುವತಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಅಸ್ಸಾಂ ಮೂಲಕ ಕಾರ್ಮಿಕ ಷಾಆಲಿ ಅವರ ಮಗಳು ರುಕಿಯಾ ಬೇಗಂ(20) ಆತ್ಮಹತ್ಯೆ ಮಾಡಿ ಕೊಂಡವಳು. ಕಿರಗಂದೂರು ಗ್ರಾಮದ ಕಾಫಿ ಬೆಳೆಗಾರ ಶಿವಕುಮಾರ್ ಅವರ ಲೈನ್‍ಮನೆ ಯಲ್ಲಿ ವಾಸವಿದ್ದ ಕಾರ್ಮಿಕ ಕುಟುಂಬದ ಸದ ಸ್ಯರು ಎಂದಿನಂತೆ ಬುಧವಾರ ಕೆಲಸಕ್ಕೆ ಹೋಗಿ ದ್ದರು. ಆದರೆ ರುಕಿಯಾ ಹೋಗಿರಲಿಲ್ಲ ಎನ್ನ ಲಾಗಿದ್ದು, ಸಂಜೆ ಪೋಷಕರು ಮನೆಗೆ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಸೋಮವಾರ…

ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ: ಕೊಡಗಿಗೆ 2 ಸಾವಿರ ಕೋಟಿ ಬಿಡುಗಡೆಗೆ ಮನವಿ
ಕೊಡಗು

ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ: ಕೊಡಗಿಗೆ 2 ಸಾವಿರ ಕೋಟಿ ಬಿಡುಗಡೆಗೆ ಮನವಿ

August 30, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ನಷ್ಟ ಉಂಟಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ನಿಯೋಗವು ಆಗಸ್ಟ್ 30 ರಂದು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವರು, ಅತಿವೃಷ್ಟಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಜನ, ಜಾನುವಾರು ಹಾನಿ, ತೋಟಗಾರಿಕೆ, ಕಾಫಿ, ಕರಿಮೆಣಸು ಸೇರಿ ದಂತೆ ಹಲವು ಕೃಷಿ ಹಾಗೂ…

ಗ್ರಾಮೀಣ ಭಾಗದ ಜನರ ಬದುಕು ಅತಂತ್ರ ಒಪ್ಪೊತ್ತಿನ ಊಟಕ್ಕೂ ಕೈಚಾಚುವ ದುರ್ಗತಿ
ಕೊಡಗು

ಗ್ರಾಮೀಣ ಭಾಗದ ಜನರ ಬದುಕು ಅತಂತ್ರ ಒಪ್ಪೊತ್ತಿನ ಊಟಕ್ಕೂ ಕೈಚಾಚುವ ದುರ್ಗತಿ

August 30, 2018

ಮಡಿಕೇರಿ:  ಕೊಡಗು ಜಿಲ್ಲೆಯನ್ನೇ ತಲ್ಲಣಗೊಳಿಸಿದ ಪ್ರಕೃತಿ ವಿಕೋಪದಿಂದಾಗಿ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕೂ ಕೈ ಚಾಚುವ ದುರ್ಗತಿ ಬಂದೊದಗಿದೆ. ಜಿಲ್ಲೆಯ ಸುಮಾರು 32 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಸ್ಥರ ಬದುಕು ಕುರುಡಾಗಿದೆ. ಮಹಾಮಳೆಯ ದಾಳಿಗೆ ಸಿಲುಕಿದ ಗ್ರಾಮಗಳಲ್ಲಿ ಮಡಿಕೇರಿ ನಗರದ ಸಮೀಪದಲ್ಲಿರುವ ಉಡೋತ್‍ಮೊಟ್ಟೆ ಗ್ರಾಮ ಕೂಡ ಒಂದು. ಇಲ್ಲಿ ಹೆಚ್ಚಿನ ಸಂಖ್ಯೆಯ ಲ್ಲಿರುವ ಕಾರ್ಮಿಕ ವರ್ಗ ತಮ್ಮ ಬದುಕಿ ಗಾಗಿ ತೋಟದ ಕೆಲಸವನ್ನೇ ಅವಲಂಭಿಸಿದ್ದರು. ಆದರೆ, ಮಹಾಮಳೆ ತಂದೊಡ್ಡಿರುವ ದುರಂತ ಅಧ್ಯಾಯದಿಂದ…

ಕುಶಾಲನಗರ ಪರಿಹಾರ ಕೇಂದ್ರದ ನಿರಾಶ್ರಿತರ ಪ್ರತಿಭಟನೆ
ಕೊಡಗು

ಕುಶಾಲನಗರ ಪರಿಹಾರ ಕೇಂದ್ರದ ನಿರಾಶ್ರಿತರ ಪ್ರತಿಭಟನೆ

August 30, 2018

ಸಂಜೆ 4 ಗಂಟೆಗೆ ಮಧ್ಯಾಹ್ನದ ಊಟ, ಅರೆಬೆಂದ ಅನ್ನ. 600 ಮಂದಿಗೆ ಕೇವಲ ನಾಲ್ವರು ಅಡುಗೆಯವರು, 3 ಶೌಚಾಲಯ. ಮತ್ತೇ ಮಡಿಕೇರಿ ಸೇವಾ ಭಾರತಿಗೆ ಸ್ಥಳಾಂತರಿಸುವಂತೆ ಆಗ್ರಹ ಕುಶಾಲನಗರ:  ಮಡಿಕೇರಿ ಮತ್ತು ಸುಂಟಿಕೊಪ್ಪದಿಂದ ಇಲ್ಲಿನ ವಾಲ್ಮೀಕಿ ಭವನಕ್ಕೆ ಸ್ಥಳಾಂತರಗೊಂಡಿರುವ ನಿರಾಶ್ರಿತರು ಇಂದು ರಾತ್ರಿ ಪ್ರತಿಭಟನೆ ನಡೆಸಿದರು. ಮಡಿಕೇರಿಯ ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರನ್ನು ಮಂಗಳವಾರ ಹಾಗೂ ಸುಂಟಿಕೊಪ್ಪದ ವಿವಿಧ ಕೇಂದ್ರಗಳಲ್ಲಿದ್ದ ನಿರಾಶ್ರಿತರನ್ನು ಇಂದು ಕುಶಾಲನಗರದ ವಾಲ್ಮೀಕಿ ಭವನಕ್ಕೆ ಜಿಲ್ಲಾಡಳಿತ ಸ್ಥಳಾಂತರಿಸಿತ್ತು. ಈ ಪರಿಹಾರ ಕೇಂದ್ರದಲ್ಲಿ…

ಕಾವೇರಿ ನದಿಗೆ ಹಾರಿ ಯುವಕ ಆತ್ಮಹತ್ಯೆ
ಕೊಡಗು

ಕಾವೇರಿ ನದಿಗೆ ಹಾರಿ ಯುವಕ ಆತ್ಮಹತ್ಯೆ

August 30, 2018

ಕುಶಾಲನಗರ:  ಇಲ್ಲಿನ ಟೋಲ್ ಗೇಟ್ ಬಳಿ ತುಂಬಿ ಹರಿಯುತ್ತಿ ರುವ ಕಾವೇರಿ ನದಿಗೆ ಹಾರಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕ ರಣ ಬುಧವಾರ ನಡೆದಿದೆ. ಈತ ಸಮೀಪದ ಕೊಪ್ಪ ಗ್ರಾಮದ ನಿವಾಸಿ ಲೋಕೇಶ್ (27) ಎಂದು ತಿಳಿದು ಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದರು. ಆದರೆ ಸಂಜೆವರೆಗೂ ಯುವಕನ ಮೃತದೇಹ ಪತ್ತೆಯಾಗಿಲ್ಲ. ಯುವಕ ನದಿಗೆ ಹಾರುವ ದೃಶ ಗೇಟ್ ಬಳಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ…

ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ: ಮನೆಗೆ ಹಿಂತಿರುಗಿದ ಸಂತ್ರಸ್ತರಿಗೆ ಸ್ವಚ್ಛತೆಯ ಸವಾಲು
ಕೊಡಗು

ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ: ಮನೆಗೆ ಹಿಂತಿರುಗಿದ ಸಂತ್ರಸ್ತರಿಗೆ ಸ್ವಚ್ಛತೆಯ ಸವಾಲು

August 28, 2018

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಸುರಿದ ಮರಣ ಮಳೆಯಿಂದ ಪ್ರವಾಹ ಮತ್ತು ಭಾರೀ ಭೂ ಕುಸಿತ ಸಂಭವಿಸಿದ್ದು, ಸಾವಿರಾರು ಮಂದಿ ತಮ್ಮ ಮನೆ, ಮಠ, ಜಾನುವಾರುಗಳನ್ನು ಕಳೆದುಕೊಂಡು ಕೊಡಗಿನ ವಿವಿಧೆಡೆ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ತಂಡೋಪತಂಡವಾಗಿ ನಿಧಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೇನು ಅವರು ಅನುಭವಿಸುವ ತೊಂದರೆ ಮತ್ತು ಹತಾಶೆ ಗಳು ಮುಂದುವರೆದಿವೆ. ಮನೆಯತ್ತ ಸಾಗಿದವರಿಗೆ ಮತ್ತೊಂದು ರೀತಿಯ ಸಮಸ್ಯೆ…

ಪುನರ್ವಸತಿ ಕಲ್ಪಿಸಿದರೆ ನದಿ ದಡ ಬಿಟ್ಟು ಹೋಗಲು ಸಿದ್ಧ
ಕೊಡಗು

ಪುನರ್ವಸತಿ ಕಲ್ಪಿಸಿದರೆ ನದಿ ದಡ ಬಿಟ್ಟು ಹೋಗಲು ಸಿದ್ಧ

August 28, 2018

ಕರಡಿಗೋಡು ನಿವಾಸಿಗಳಿಂದ ಗ್ರಾಪಂಗೆ ಅರ್ಜಿ ಸಲ್ಲಿಕೆ ಸಿದ್ದಾಪುರ: ಕರಡಿಗೋಡು ಬಳಿ ಕಾವೇರಿ ನದಿ ದಡದಲ್ಲಿ ವಾಸವಾಗಿ ರುವ 100ಕ್ಕೂ ಹೆಚ್ಚು ಕುಟುಂಬಗಳು ಪಂಚಾಯತಿ ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಿದರೆ ನದಿ ದಡ ಬಿಟ್ಟು ಹೋಗಲು ಸಿದ್ಧ ಎಂದು ಸಿದ್ದಾಪುರ ಗ್ರಾಮ ಪಂಚಾ ಯತಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ನದಿ ದಡದಲ್ಲಿ ಜೀವನ ನಡೆಸುತ್ತಿದ್ದು, ಪ್ರತಿ ವರ್ಷ ಮಳೆಯ ಪ್ರವಾಹ ಸಂದರ್ಭ ಮನೆಗಳಿಗೆ ನೀರು ನುಗ್ಗಿ ಸಂಕಷ್ಟದ ಜೀವನ ನಡೆಸುತ್ತಿ ದ್ದೇವೆ. ಶಾಶ್ವತ ಸೂರು ಕಲ್ಪಿಸುವಂತೆ ಹಲವು…

ನೆರೆ ಸಂತ್ರಸ್ತ ಮಹಿಳೆ ಹೃದಯಾಘಾತದಿಂದ ಸಾವು
ಕೊಡಗು

ನೆರೆ ಸಂತ್ರಸ್ತ ಮಹಿಳೆ ಹೃದಯಾಘಾತದಿಂದ ಸಾವು

August 28, 2018

ಗುಡ್ಡೆಹೊಸೂರು: ಮಡಿಕೇರಿ ತಾಲೂಕಿನ ಹಾಲೇರಿ ಕಾಡನಕೊಲ್ಲಿ ನಿವಾಸಿ ಮಣಿಯಪ್ಪನ ದಿ.ಪೂವಯ್ಯ ಅವರ ಪತ್ನಿ ಚಂದ್ರಾವತಿ(65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಡಿಕೇರಿ ಸುತ್ತಮುತ್ತ ನಡೆದ ಜಲಪ್ರಳಯದಲ್ಲಿ ತಮ್ಮ ಮನೆ ಮತ್ತು 8 ಎಕರೆ ಕಾಫಿ ತೋಟ ಕಳೆದುಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ವಾಸಕ್ಕೆ ಇದ್ದ ಒಂದೇ ಮನೆ ಮತ್ತು ಜಾಗ ಹಾಗೂ ತನ್ನ ಪತಿಯನ್ನು ಕಳೆದುಕೊಂಡಿದ್ದ ಚಂದ್ರಾವತಿ ಅತೀವ ನೋವಿನಿಂದ ಇದೀಗ ಹೃದಯಾಘಾತವಾಗಿ ಇಂದು ಬಸವನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ. ತನ್ನ ತಾಯಿ, ತಂದೆ, ಮನೆ ಆಸ್ತಿ ಎಲ್ಲವನ್ನು ಕಳೆದುಕೊಂದ 25…

1 134 135 136 137 138 187
Translate »