ಕೊಡಗು

ಕುಂಬಾರಗುಂಡಿ ರಸ್ತೆ ಸಂಪರ್ಕ ಕಡಿತ ಸಂಚಾರ ಅಸ್ತವ್ಯಸ್ತ, ರಸ್ತೆ ನಿರ್ಮಾಣಕ್ಕೆ ಒತ್ತಾಯ
ಕೊಡಗು

ಕುಂಬಾರಗುಂಡಿ ರಸ್ತೆ ಸಂಪರ್ಕ ಕಡಿತ ಸಂಚಾರ ಅಸ್ತವ್ಯಸ್ತ, ರಸ್ತೆ ನಿರ್ಮಾಣಕ್ಕೆ ಒತ್ತಾಯ

September 2, 2018

ಸಿದ್ದಾಪುರ:  ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿ ಹೋಗಿದ್ದು, ಸಂಚಾರ ಕಡಿತಗೊಂಡಿದೆ. ನೆಲ್ಯಹುದಿಕೇರಿ 3ನೇ ವಾರ್ಡ್‍ನಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಕಾರ್ಮಿ ಕರು, ವಿದ್ಯಾರ್ಥಿಗಳು ಕುಂಬಾರ ಗುಂಡಿಗೆ ಹಳ್ಳ ಕೊಳ್ಳಗಳಂತ್ತಾಗಿರುವ ರಸ್ತೆಯಲ್ಲಿ ಎರಡು ಕಿಲೋಮೀಟರ್ ನಡೆದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ವರ್ಷಗಳಿಂದಲೂ ಅಭಿವೃದ್ಧಿ ಕಾಣದ ಗ್ರಾಮ ದಲ್ಲಿ ಇತ್ತೀಚೆಗಷ್ಟೇ ವಿವಿಧ ಯೋಜನೆಯಿಂದ ಗ್ರಾಪಂ ಮೂಲಕ ಒಂದು ಕಿ.ಮೀ.ರಷ್ಟು ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು ಇದೀಗ ಈ ರಸ್ತೆ ಸಂಪೂರ್ಣ ಹಾನಿಯಾಗಿದೆ….

ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ನೋಡಲ್ ಅಧಿಕಾರಿಗಳ ನೇಮಕ
ಕೊಡಗು

ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ನೋಡಲ್ ಅಧಿಕಾರಿಗಳ ನೇಮಕ

September 1, 2018

ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾಗಿ ಮಾನವ ಪ್ರಾಣಹಾನಿ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ, ಬೆಳೆಹಾನಿ ಆಗಿದ್ದು, ಈ ಬಗ್ಗೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿವಿಧ ಕಡೆಯ ಸಮುದಾಯ ಭವನಗಳಲ್ಲಿ ತೆರೆಯಲಾಗಿದೆ. ಮುಂದುವರೆದು ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಜಿಲ್ಲೆಯಲ್ಲಿ ತುರ್ತಾಗಿ ಪರಿಹಾರ ವಿತರಣೆ, ಮೂಲ ಸೌಕರ್ಯಗಳ ಪುನರ್ ನಿರ್ಮಾಣ, ಹಾನಿ ಸಮೀಕ್ಷೆ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿರುವುದರಿಂದ…

ಕೊಡಗು ರಸ್ತೆಗಳ ಪುನರ್ ನಿರ್ಮಾಣಕ್ಕೆ ಸೇನೆಯ ತಾಂತ್ರಿಕ ನೆರವು
ಕೊಡಗು

ಕೊಡಗು ರಸ್ತೆಗಳ ಪುನರ್ ನಿರ್ಮಾಣಕ್ಕೆ ಸೇನೆಯ ತಾಂತ್ರಿಕ ನೆರವು

September 1, 2018

ಮಡಿಕೇರಿ:  ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಭಾರೀ ಮಳೆಗೆ ಉಂಟಾದ ಪ್ರಾಕೃತಿಕ ವಿಕೋಪಗಳಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಹಲವು ರಸ್ತೆಗಳು ಅತ್ಯಂತ ಗಂಭೀರ ಸ್ವರೂಪದ ಹಾನಿಗೀಡಾಗಿದ್ದು, ಇವುಗಳನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೇನೆಯ ತಾಂತ್ರಿಕ ನೆರವನ್ನು ಪಡೆಯಲಾಗುತ್ತಿದೆ. ಈ ದಿಸೆಯಲ್ಲಿ ಈಗಾಗಲೆ ಬಾರ್ಡರ್ ರೋಡ್ ಆರ್ಗನೈಸೇಷನ್‍ನ ಮೂರು ಮಂದಿ ತಂತ್ರಜ್ಞರ ತಂಡ ಜಿಲ್ಲೆಗೆ ಆಗಮಿಸಿದ್ದು, ಭೂ ಕುಸಿತ ಹಾಗೂ ಪ್ರವಾಹದಿಂದ ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿರುವ ರಸ್ತೆಗಳ ಪರಿಶೀಲನಾ ಕಾರ್ಯವನ್ನು ಸ್ಥಳೀಯ…

ಇಂದು ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಉದ್ಘಾಟನೆ
ಕೊಡಗು

ಇಂದು ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಉದ್ಘಾಟನೆ

September 1, 2018

ಮಡಿಕೇರಿ: ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 1 ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ನಡೆಯಲಿದೆ. ಶಾಸಕರಾದ ಅಪ್ಪಚ್ಚು ರಂಜನ್, ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾ ಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಮನ್ ಡಿ.ಪೆನ್ನೇ ಕರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಕ್ಕಳಿಗೆ ಉತ್ತಮ ನಡತೆ ಕಲಿಸುವುದು ಪೋಷಕರ ಕರ್ತವ್ಯ
ಕೊಡಗು

ಮಕ್ಕಳಿಗೆ ಉತ್ತಮ ನಡತೆ ಕಲಿಸುವುದು ಪೋಷಕರ ಕರ್ತವ್ಯ

September 1, 2018

ವಿರಾಜಪೇಟೆ: ಮಕ್ಕಳಿಗೆ ಶಿಕ್ಷಣ ದೊಂದಿಗೆ ಉತ್ತಮ ಗುಣ-ನಡತೆಯನ್ನು ಕಲಿಸುವುದು ಪೋಷಕರ ಕರ್ತವ್ಯವಾಗಿದೆ ಎಂದು ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಿದ್ಯಾಸಂಸ್ಥೆಯ ವ್ಯವಸ್ಥಾ ಪಕರಾದ ಮದುಲೈ ಮುತ್ತು ಹೇಳಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ‘ಪೋಷ ಕರ-ಶಿಕ್ಷಕರ ಸಂಘದ ವಾರ್ಷಿಕ ಮಹಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಫೋನ್ ದೂರ ಇಟ್ಟು ಶಿಸ್ತು, ಛಲದಿಂದ ವಿದ್ಯೆ ಕಲಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾ ಗಬೇಕು. ಪೋಷಕರು ವಿದ್ಯಾರ್ಥಿಗಳಿಗೆ ವಾಹನ ಚಾಲನೆ ಮಾಡಲು ಕೊಡಬೇಡಿ ಎಂದರಲ್ಲದೆ ಮುಂದಿನ ವರ್ಷದಿಂದ…

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಗಿಗೆ 25 ಲಕ್ಷ ಎಲ್ಲಾ ಶಾಸಕರಿಗೂ ಸ್ಪೀಕರ್ ಪತ್ರ
ಕೊಡಗು

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಗಿಗೆ 25 ಲಕ್ಷ ಎಲ್ಲಾ ಶಾಸಕರಿಗೂ ಸ್ಪೀಕರ್ ಪತ್ರ

September 1, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಉಂಟಾದ ಅತಿವೃಷ್ಟಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮನೆ, ಆಸ್ತಿ-ಪಾಸ್ತಿ ಕಳೆದು ಕೊಂಡಿರುವುದಲ್ಲದೆ ಸಾರ್ವಜನಿಕ ರಸ್ತೆ, ಸೇತುವೆಯ ಸಂಪರ್ಕ ವನ್ನು ಕಳೆದುಕೊಂಡಿದ್ದು, ಈ ಬಗ್ಗೆ ಪ್ರತಿಯೊಬ್ಬ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 25 ಲಕ್ಷವನ್ನು ನೀಡುವಂತೆ, ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡ ಹಿನ್ನೆಲೆ ರಮೇಶ್ ಕುಮಾರ್ ಅವರು ಎಲ್ಲಾ ಶಾಸಕರುಗಳಿಗೆ ಪತ್ರ ಬರೆದು ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ….

ಮಡಿಕೇರಿ-ಸಂಪಾಜೆ, ಮಡಿಕೇರಿ-ಸೋಮವಾರಪೇಟೆ ರಸ್ತೆ ಸರಿಪಡಿಸುವ ಬಗ್ಗೆ ಡಿಸಿ ಸಮಾಲೋಚನೆ
ಕೊಡಗು

ಮಡಿಕೇರಿ-ಸಂಪಾಜೆ, ಮಡಿಕೇರಿ-ಸೋಮವಾರಪೇಟೆ ರಸ್ತೆ ಸರಿಪಡಿಸುವ ಬಗ್ಗೆ ಡಿಸಿ ಸಮಾಲೋಚನೆ

September 1, 2018

ಮಡಿಕೇರಿ: ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಹಾಗೂ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಸರಿಪಡಿಸುವ ನಿಟ್ಟಿನಲ್ಲಿ ಗಡಿ ರಸ್ತೆ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿ ನಿಯರ್‍ಗಳೊಂದಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಚರ್ಚೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರ ವಾರ ಸಮಾಲೋಚನೆ ನಡೆಸಿದ ಜಿಲ್ಲಾಧಿ ಕಾರಿ ಅವರು ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಹಾಗೂ ಮಡಿಕೇರಿ-ಸೋಮ ವಾರಪೇಟೆ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಯಲ್ಲಿ ವಾಹನಗಳ ಓಡಾಟಕ್ಕೆ ಉತ್ತಮ ರಸ್ತೆ ನಿರ್ಮಾಣ…

ಪ್ರವಾಹದಿಂದ ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟು ಜೀವನ ಛಿದ್ರ
ಕೊಡಗು

ಪ್ರವಾಹದಿಂದ ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟು ಜೀವನ ಛಿದ್ರ

September 1, 2018

 23 ವರ್ಷದ ತಷ್ಮಾ ಮುತ್ತಪ್ಪ ಸರ್ಕಾರಿ ಕೆಲಸಕ್ಕಾಗಿ ಪರದಾಟ ಕುಶಾಲನಗರ: ಕೊಡಗಿನಲ್ಲಿ ಸುರಿದ ಮರಣ ಮಳೆಯಿಂದ ಪ್ರವಾಹ ಸಂಭವಿಸಿ ಅಲ್ಲಿನ ಜನರು ಮನೆ, ಮಠ, ಜಾನುವಾರುಗಳನ್ನು ಕಳೆದುಕೊಂಡಿದ್ದಲ್ಲದೆ, ಕೆಲವರು ತಮ್ಮ ಜೀವನವನ್ನೇ ನಾಶಮಾಡಿಕೊಂಡಿದ್ದಾರೆ. ಅವರಲ್ಲಿ ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ತಷ್ಮಾ ಒಬ್ಬರು. ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ತಷ್ಮಾ ಮುತ್ತಪ್ಪ ಅವರು ಮಡಿಕೇರಿಯಲ್ಲಿದ್ದ ಮನೆಯನ್ನು ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ. ಅವರು ತಮ್ಮ ಜೀವನವನ್ನು ಪುನರ್ ನಿರ್ಮಿಸಿಕೊಳ್ಳಲು ಸಹಾಯ ಕೋರಿ ಕೆಲಸಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆಗಸ್ಟ್ 15…

ಆಹಾರ ಇಲಾಖೆಯ ಉಪನಿರ್ದೇಶಕರಾಗಿಎಸ್.ಸದಾಶಿವಯ್ಯ ಅಧಿಕಾರ ಸ್ವೀಕಾರ
ಕೊಡಗು

ಆಹಾರ ಇಲಾಖೆಯ ಉಪನಿರ್ದೇಶಕರಾಗಿಎಸ್.ಸದಾಶಿವಯ್ಯ ಅಧಿಕಾರ ಸ್ವೀಕಾರ

September 1, 2018

ಮಡಿಕೇರಿ: ಆಹಾರ ಇಲಾಖೆಯ ನೂತನ ಉಪನಿರ್ದೇ ಶಕರಾಗಿ ಎಸ್.ಸದಾಶಿವಯ್ಯ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್.ಸದಾಶಿವಯ್ಯ ಅವರು ಈ ಹಿಂದೆ ರಾಮನಗರ ಜಿಲ್ಲೆ ಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಆಹಾರ ಇಲಾಖೆ ಉಪನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟ ಸ್ವಾಮಿ ಅವರು ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.

ಮದುವೆ ಭಾಗ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದ ಯುವತಿಗೆ ಕಂಕಣ ಭಾಗ್ಯ
ಕೊಡಗು

ಮದುವೆ ಭಾಗ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದ ಯುವತಿಗೆ ಕಂಕಣ ಭಾಗ್ಯ

August 31, 2018

ಮಡಿಕೇರಿ:  ಪ್ರಾಕೃತಿಕ ವಿಕೋಪದಿಂದ ಸಪ್ತಪದಿ ತುಳಿಯುವ ಭಾಗ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಪ್ರೀತಿಯ ಪುತ್ರಿಯ ವಿವಾಹ ಸಮಾರಂಭ ವನ್ನು ಪೂರ್ವ ನಿರ್ಧರಿತ ಮುಹೂರ್ತದಲ್ಲೆ ನಡೆಸುವ ಮೂಲಕ ಸಂಕಷ್ಟದ ನಡುವೆಯೂ ಬಡ ದಂಪತಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಗರದ ಸಮುದ್ರ ಕಲ್ಯಾಣ ಮಂಟಪದಲ್ಲಿ ಮಡಿಕೇರಿ ತಾಲೂಕಿನ ಅರೆ ಕಾಡು ಗ್ರಾಮದ ಧನಂಜಯ್ ಮತ್ತು ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಗಳನ್ನು ಕಳೆದುಕೊಂಡ ಹಟ್ಟಿಹೊಳೆಯ ಪದ್ಮಿನಿ-ಉಮೇಶ್ ದಂಪತಿಗಳ ಪುತ್ರಿ ಕುಸುಮಾ ಅವರನ್ನು ವಿವಾಹವಾಗುವ ಮೂಲಕ, ಕಷ್ಟಗಳ ಸರಮಾಲೆಯ ನಡುವೆ ಸಂತಸದ ಶುಭಘಳಿಕೆ ಕೂಡಿ…

1 133 134 135 136 137 187
Translate »