ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ನೋಡಲ್ ಅಧಿಕಾರಿಗಳ ನೇಮಕ
ಕೊಡಗು

ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ನೋಡಲ್ ಅಧಿಕಾರಿಗಳ ನೇಮಕ

September 1, 2018

ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾಗಿ ಮಾನವ ಪ್ರಾಣಹಾನಿ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ, ಬೆಳೆಹಾನಿ ಆಗಿದ್ದು, ಈ ಬಗ್ಗೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿವಿಧ ಕಡೆಯ ಸಮುದಾಯ ಭವನಗಳಲ್ಲಿ ತೆರೆಯಲಾಗಿದೆ.

ಮುಂದುವರೆದು ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಜಿಲ್ಲೆಯಲ್ಲಿ ತುರ್ತಾಗಿ ಪರಿಹಾರ ವಿತರಣೆ, ಮೂಲ ಸೌಕರ್ಯಗಳ ಪುನರ್ ನಿರ್ಮಾಣ, ಹಾನಿ ಸಮೀಕ್ಷೆ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಕಾಯ್ದೆ 2005ರ ನಿಯಮ 30(2)ರ ಅಡಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ 13 ವಸತಿ ಗೃಹಗಳನ್ನು ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಲಾ ಗಿದೆ. ಪ್ರಸ್ತುತ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲಿನ ಹಾನಿಗೊಳಗಾದ ಪ್ರದೇಶದ ಸಂತ್ರಸ್ತರ ಮಕ್ಕಳಿಗೆ ನಗರದಲ್ಲಿರುವ ವಿವಿಧ ಕಾಲೇಜುಗಳಲ್ಲಿ ಶಿಕ್ಷಣ ಮುಂದು ವರೆಸಲು ವ್ಯವಸ್ಥೆ ಮಾಡಲಾಗಿದೆ.

ಅದರಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮಡಿಕೇರಿ ತಾಲ್ಲೂಕಿನ ಗ್ರಾಮೀಣ ಭಾಗಗಳಿಂದ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ಸೌಲಭ್ಯಗಳನ್ನು ಒದಗಿಸಲು ಕೋರಿರುವ ಹಿನ್ನೆಲೆ ಸಂತ್ರಸ್ತ ವಿದ್ಯಾರ್ಥಿ ಗಳು ಕಾಲೇಜಿಗೆ ಹೋಗಿ ಬರಲು ಅನುಕೂಲವಾಗುವಂತೆ ವಸತಿಯ ಅವಶ್ಯಕತೆ ಇರುವುದರಿಂದ ನಗರದ ಸುತ್ತ್ತಮುತ್ತಲ ಸಂತ್ರಸ್ತರಾದ ಕುಟುಂಬದ ಜೊತೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ನಗರ ವ್ಯಾಪ್ತಿಯ ಕಾವೇರಿ ಹಾಲ್ ಹತ್ತಿರವಿರುವ ಹೊಟೇಲ್ ರಾಜ್ ವಸತಿ ಗೃಹದಲ್ಲಿ 60 ವಿದ್ಯಾರ್ಥಿನಿಯರು ತಂಗಲು ವ್ಯವಸ್ಥೆ ಮಾಡಲಾಗಿದೆ, ಈ ವಸತಿ ಗೃಹದ ಮೇಲ್ವಿಚಾರಕರಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಡಾ.ಅನುಪಮ ಸಭಾಪತಿ ಹಾಗೂ ನೋಡಲ್ ಅಧಿಕಾರಿ ಯಾಗಿ ಹಿರಿಯ ಗಣಿ ಮತ್ತು ಭೂ ವಿಜ್ಞಾನಿಯಾದ ಬಿ.ರೇಷ್ಮಾ ಅವರನ್ನು ನಿಯೋಜಿಸಲಾಗಿದೆ.

ಹಾಗೆಯೇ ನಗರದ ರಾಜಸೀಟು ರಸ್ತೆ ಬಳಿ ಇರುವ ಹೊಟೇಲ್ ಕಾವೇರಿ ಇನ್ ವಸತಿ ಗೃಹದಲ್ಲಿ 60 ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಮಾಡಲಾಗಿದ್ದು, ಈ ವಸತಿ ಗೃಹದ ಮೇಲ್ವಿಚಾರಕರಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ ಪ್ರಸಾದ್ ಹಾಗೂ ನೋಡಲ್ ಅಧಿಕಾರಿಯಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೇವರಾಜು ಅವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

Translate »