ಕೊಡಗು

ಸೋಮವಾರಪೇಟೆ; ಮತ್ತೆ ಭೂ ಕುಸಿತ ಭೀತಿ
ಕೊಡಗು

ಸೋಮವಾರಪೇಟೆ; ಮತ್ತೆ ಭೂ ಕುಸಿತ ಭೀತಿ

August 28, 2018

ಸೋಮವಾರಪೇಟೆ: ಈಗಾಗಲೇ ಮಕ್ಕಂದೂರು, ಮೂವತೊಕ್ಲು, ಮೇಘತಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂ ಕುಸಿತ ಸಂಭವಿಸಿ ಸಾಕಷ್ಟು ಹಾನಿಯಾದ ಬೆನ್ನಲ್ಲೇ, ಇದೀಗ ಶಾಂತಳ್ಳಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಭೂ ಕುಸಿತ ಉಂಟಾಗುತ್ತಿರುವ ಕುರಿತು ಗ್ರಾಮಸ್ಥರು ತಿಳಿಸಿದ್ದಾರೆ. ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ, ಬಾಚಳ್ಳಿ ಮತ್ತು ಮಲ್ಲಳ್ಳಿ ಸಮೀಪ ಕೆಲವೆಡೆ ಭೂ ಕುಸಿತ ಉಂಟಾಗುತ್ತಿದ್ದು, ಹಲವು ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ….

ಈ ಬಾರಿ ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವ
ಕೊಡಗು

ಈ ಬಾರಿ ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವ

August 28, 2018

ವಿರಾಜಪೇಟೆ: ಕೊಡಗಿನಾದ್ಯಂತ ಪ್ರಕೃತಿ ವಿಕೋಪದ ಪ್ರವಾಹದಿಂದಾಗಿ ಈ ವರ್ಷ ವಿರಾಜಪೇಟೆಯಲ್ಲಿ ನಡೆ ಯುವ ಐತಿಹಾಸಿಕ ಗೌರಿ-ಗಣೇಶೋತ್ಸವನ್ನು ಸರಳ ರೀತಿಯಾಗಿ ಆಚರಿಸಲಾಗು ವುದು ಎಂದು ಗೌರಿ-ಗಣೇಶ ನಾಡ ಹಬ್ಬ ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ನಾಯಕ್ ತಿಳಿಸಿದ್ದಾರೆ. ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬ ಒಕ್ಕೂಟದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಸಾಯಿನಾಥ್, ವೀರಾಜಪೇಟೆ ತಾಲೂಕಿನಾದ್ಯಂತ ಈ ವರ್ಷದ ಗೌರಿ-ಗಣೇಶೋತ್ಸವವನ್ನು ಅತೀ ಸರಳರೀತಿ ಆಚರಿಸುವುದರೊಂದಿಗೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಮಳೆಯಿಂದ ಮನೆ ಕಳೆದುಕೊಂಡು ನೊಂದ…

ಚೇರಂಬಾಣೆಯಿಂದ ತಾಳತ್‍ಮನೆಗೆ ಸಂತ್ರಸ್ತರ ಸ್ಥಳಾಂತರ: ಸೌಲಭ್ಯಗಳಿಲ್ಲದೇ ಸಂತ್ರಸ್ತರ ಪರದಾಟ
ಕೊಡಗು

ಚೇರಂಬಾಣೆಯಿಂದ ತಾಳತ್‍ಮನೆಗೆ ಸಂತ್ರಸ್ತರ ಸ್ಥಳಾಂತರ: ಸೌಲಭ್ಯಗಳಿಲ್ಲದೇ ಸಂತ್ರಸ್ತರ ಪರದಾಟ

August 27, 2018

ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆ ಪ್ರೌಢಶಾಲಾ ಆವರಣದಲ್ಲಿ ಕಳೆದ ಒಂಬತ್ತು ದಿನಗಳಿಂದ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರನ್ನು ಭಾನುವಾರ ದಿಢೀರಾಗಿ ತಾಳತ್ತಮನೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದರಿಂದ ತೊಂದರೆ ಉಂಟಾಗಿದೆ ಎಂದು ಎರಡನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ದಿನೇಶ್ ಹಾಗೂ ಕಾರ್ತಿಕ್ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಚೇರಂಬಾಣೆ ಪ್ರೌಢಶಾಲೆಯಿಂದ ಸಂತ್ರಸ್ತರನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದ್ದು, ತಾಳತ್ತಮನೆಯ ಸರ್ಕಾರಿ ಶಾಲೆಗೆ ತೆರಳಿದ ಸಂತ್ರಸ್ತರು ಯಾವೊಂದು ವ್ಯವಸ್ಥೆಯು ಇಲ್ಲದೆ ಸಮಸ್ಯೆಯಲ್ಲಿ ಸಿಲುಕಿರುವ ಬಗ್ಗೆ ಮದೆನಾಡು ಗ್ರಾಮಪಂಚಾಯಿತಿ ಅಧ್ಯಕ್ಷರ ಹಾಗೂ ರೆವಿನ್ಯೂ ಅಧಿಕಾರಿಗಳ ಗಮನಕ್ಕೆ…

ಕೊಡಗಿಗೆ 12 ತಂತ್ರಜ್ಞರೊಂದಿಗೆ ಎ.ಹೆಚ್.ವಿಶ್ವನಾಥ್ ಭೇಟಿ
ಕೊಡಗು

ಕೊಡಗಿಗೆ 12 ತಂತ್ರಜ್ಞರೊಂದಿಗೆ ಎ.ಹೆಚ್.ವಿಶ್ವನಾಥ್ ಭೇಟಿ

August 27, 2018

ಜಿಲ್ಲೆ ಪುನರ್‍ನಿರ್ಮಾಣ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರ ಮಡಿಕೇರಿ: ಸತತ ಮಳೆಯಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ಊಹಾಪೋಹದ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಶಾಸಕ ಎ.ಹೆಚ್. ವಿಶ್ವನಾಥ್ ನೇತೃತ್ವ ದಲ್ಲಿ 12 ತಂತ್ರಜ್ಞರ ತಂಡ ಮಡಿಕೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಮಳೆಯ ರುದ್ರನರ್ತನದಿಂದ ಕಂಗೆಟ್ಟ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಕಾರ್ಯ ಹೇಗೆ ನಡೆಯಬೇಕು? ಈಗಿನ ಪರಿಸ್ಥಿತಿಗೆ ಏನು ಕಾರಣ? ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗ…

ಸಮನ್ವಯ ಸಮಿತಿಯಲ್ಲಿ ಸದಸ್ಯತ್ವಕ್ಕೆ ಆಗ್ರಹ
ಕೊಡಗು

ಸಮನ್ವಯ ಸಮಿತಿಯಲ್ಲಿ ಸದಸ್ಯತ್ವಕ್ಕೆ ಆಗ್ರಹ

August 27, 2018

ಮಡಿಕೇರಿ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸದಸ್ಯ ಸ್ಥಾನ ನೀಡಲೇಬೇಕು. ಅವರು ಬೇಡ ಇವರು ಬೇಡ ಎಂದು ಸಿದ್ದರಾಮಯ್ಯ ಹಠ ಹಿಡಿದಿರೋದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲಾ 22 ಮಿತ್ರ ಪಕ್ಷಗಳ ಅಧ್ಯಕ್ಷರೂ ಸಮನ್ವಯ ಸಮಿತಿಯ ಸದಸ್ಯರಾಗಿದ್ದರು. ಹೀಗಿರುವಾಗ ಎರಡು ಪಕ್ಷಗಳು ಸೇರಿರುವ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರು ಸದಸ್ಯರಾಗಿರಲೇ ಬೇಕು…

ರಾಜ್ಯ ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 102 ಕೋಟಿ ರೂ.
ಕೊಡಗು

ರಾಜ್ಯ ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 102 ಕೋಟಿ ರೂ.

August 27, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾ ಗಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಒಂದು ದಿನದ ವೇತನ 102 ಕೋಟಿ ರೂ.ವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ರಾಮು ತಿಳಿಸಿದ್ದಾರೆ. ನಗರದ ಹೋಟೆಲ್‍ವೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ…

ಮನೆ ಇಲ್ಲ… ತೋಟವೂ ಹೋಯಿತು… ಮುಂದೇನು? ಇಗ್ಗೋಡ್ಲು ಬೆಳೆಗಾರರ ಕಣ್ಣೀರ ಕಥೆ
ಕೊಡಗು

ಮನೆ ಇಲ್ಲ… ತೋಟವೂ ಹೋಯಿತು… ಮುಂದೇನು? ಇಗ್ಗೋಡ್ಲು ಬೆಳೆಗಾರರ ಕಣ್ಣೀರ ಕಥೆ

August 27, 2018

ಸೋಮವಾರಪೇಟೆ: ತಮ್ಮದೇ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು, ಸ್ವಂತ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕುಟುಂಬ ಇದೀಗ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ನಿಂತಿದೆ. ಮನೆಯಿಲ್ಲ, ತೋಟವಿಲ್ಲ, ಮುಂದೇನೆಂಬ ಬಗ್ಗೆ ಗೊತ್ತಿಲ್ಲದ ಈ ಕುಟುಂಬ ಉಟ್ಟ ಬಟ್ಟೆ ಯಲ್ಲೇ ಮನೆಯಿಂದ ಹೊರಬಂದ ಪರಿಣಾಮ ಜೀವ ಮಾತ್ರ ಉಳಿದಿದೆ. ಮಿಕ್ಕಿ ದೆಲ್ಲವೂ ಮಣ್ಣುಪಾಲಾಗಿದೆ. ಇಂತಹ ನತದೃಷ್ಟ ಕುಟುಂಬಗಳು ತಾಲೂಕಿನ ಮಾದಾಪುರ ಸಮೀಪದ ಇಗ್ಗೋ ಡ್ಲಿನಲ್ಲಿದ್ದವು. ಇದೀಗ ಇಲ್ಲವಾಗಿವೆ. ಇಗ್ಗೋಡ್ಲು ಗ್ರಾಮದ ಜಗ್ಗಾರಂಡ ಕಾವೇರಪ್ಪ-ಫ್ಯಾನ್ಸಿ, ಜಗ್ಗಾರಂಡ ದೇವಯ್ಯ-ನಳಿನಿ ಮತ್ತು ರೀತ್‍ಕುಮಾರ್ ಅವರ…

ತೀವ್ರ ಹಾನಿ ಪ್ರದೇಶಕ್ಕೆ ಪ್ರವಾಸಿಗರ ಭೇಟಿ, ಕ್ರಮಕ್ಕೆ ಸೂಚನೆ
ಕೊಡಗು

ತೀವ್ರ ಹಾನಿ ಪ್ರದೇಶಕ್ಕೆ ಪ್ರವಾಸಿಗರ ಭೇಟಿ, ಕ್ರಮಕ್ಕೆ ಸೂಚನೆ

August 27, 2018

ಮಡಿಕೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ, ಭೂ ಕುಸಿತ ಮತ್ತು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದ್ದು, ಅಪಾಯದ ಮಟ್ಟದಲ್ಲಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿನ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳಲ್ಲಿ ಆಗಸ್ಟ್ 31 ರವರೆಗೆ ಪ್ರವಾಸಿಗರ ವಾಸ್ತವ್ಯ ವನ್ನು ರದ್ದುಪಡಿಸಲು ಈ ಹಿಂದೆ ಆದೇಶಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿನ ಕೆಲವು ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ…

ನೆರೆ ಸಂತ್ರಸ್ತರಿಗೆ ಆದಿಚುಂಚನಗಿರಿ ಮಠ ನೆರವು
ಕೊಡಗು

ನೆರೆ ಸಂತ್ರಸ್ತರಿಗೆ ಆದಿಚುಂಚನಗಿರಿ ಮಠ ನೆರವು

August 27, 2018

ಮಡಿಕೇರಿ:  ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಹಾಮಳೆಯ ಆರ್ಭಟದಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪಗಳಿಂದ ನಲುಗಿರುವ ಗ್ರಾಮಗಳಲ್ಲಿನ ಪರಿಹಾರ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಶ್ರೀ ಆದಿಚುಂಚನಗಿರಿ ಮಠ ಕೈಜೋಡಿಸಿ ಶ್ರಮಿಸಲಿದೆಯೆಂದು ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಮಡಿಕೇರಿಯ ಗೌಡ ಸಮಾಜದ ಸಭಾಂಗಣದಲ್ಲಿ ಶ್ರೀಮಠದಿಂದ ಆಯೋಜಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿ, ಕೊಡಗಿನಲ್ಲಿ ಭಾರೀ ಮಳೆಯಿಂದ ಪ್ರಾಕೃ…

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಕೊಡಗು

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

August 27, 2018

ಸೋಮವಾರಪೇಟೆ:  ಜೀವನ ದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ಸಂಜೆ ಸಮೀಪದ ಯಡವಾರೆ ಗ್ರಾಮದಲ್ಲಿ ಸಂಭವಿಸಿದೆ. ಯಡವಾರೆ ಗ್ರಾಮ ಸಜ್ಜಳ್ಳಿ ನಿವಾಸಿ ನಾಗವೇಣಿ ಎಂಬವರ ಪತಿ ಕಲ್ಲಗದ್ದೆ ಕೆ. ಬಾಲಕೃಷ್ಣ (70) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕುತ್ತಿಗೆ ಭಾಗಕ್ಕೆ ಕೋವಿ ಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನಡೆಯಿತು. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು…

1 135 136 137 138 139 187
Translate »