ಈ ಬಾರಿ ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವ
ಕೊಡಗು

ಈ ಬಾರಿ ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವ

August 28, 2018

ವಿರಾಜಪೇಟೆ: ಕೊಡಗಿನಾದ್ಯಂತ ಪ್ರಕೃತಿ ವಿಕೋಪದ ಪ್ರವಾಹದಿಂದಾಗಿ ಈ ವರ್ಷ ವಿರಾಜಪೇಟೆಯಲ್ಲಿ ನಡೆ ಯುವ ಐತಿಹಾಸಿಕ ಗೌರಿ-ಗಣೇಶೋತ್ಸವನ್ನು ಸರಳ ರೀತಿಯಾಗಿ ಆಚರಿಸಲಾಗು ವುದು ಎಂದು ಗೌರಿ-ಗಣೇಶ ನಾಡ ಹಬ್ಬ ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ನಾಯಕ್ ತಿಳಿಸಿದ್ದಾರೆ.

ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬ ಒಕ್ಕೂಟದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಸಾಯಿನಾಥ್, ವೀರಾಜಪೇಟೆ ತಾಲೂಕಿನಾದ್ಯಂತ ಈ ವರ್ಷದ ಗೌರಿ-ಗಣೇಶೋತ್ಸವವನ್ನು ಅತೀ ಸರಳರೀತಿ ಆಚರಿಸುವುದರೊಂದಿಗೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಮಳೆಯಿಂದ ಮನೆ ಕಳೆದುಕೊಂಡು ನೊಂದ ನಿರಾಶ್ರಿತರಿಗೆ ಸೂಕ್ತ ರೀತಿಯಲ್ಲಿ ವಾಸಕ್ಕೆ ಮನೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಲಾಗು ವುದು ಎಂದರು.

ಒಕ್ಕೂಟದ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಮಾತನಾಡಿ, ವಿರಾಜಪೇಟೆ ಯಲ್ಲಿ ಐತಿಹಾಸಿಕ ಗೌರಿ-ಗಣೇಶ ಹಬ್ಬವನ್ನು ಪ್ರತಿ ವರ್ಷ ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿದ್ದೆವು. ಆದರೆ ಈ ವರ್ಷ ಎಡ ಬಿಡದೆ ಸುರಿಯುತ್ತಿರುವ ಮಹಾಮಳೆ ಯಿಂದಾಗಿ ಕೊಡಗಿನಲ್ಲಿ ಜೀವಹಾನಿ ಸೇರಿ ದಂತೆ ಅನೇಕರು ಮನೆ ಆಸ್ತಿ ಕಳೆದು ಕೊಂಡಿರುವುದರಿಂದ ಗಣೇಶೋತ್ಸವವನ್ನು ಸರಳ ರೀತಿ ಆಚರಿಸುವುದರೋಂದಿಗೆ ಮನೋ ರಂಜನೆ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣವನ್ನು ನಿರಾಶ್ರಿತರಿಗೆ ನೀಡುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಗೌರಿ-ಗಣೇಶ ನಾಡ ಹಬ್ಬ ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ಸನ್ನಿ ಕಾರ್ಯಪ್ಪ, ಖಜಾಂಚಿ ಬಿ.ಎಸ್.ಪ್ರದೀಪ್ ರೈ, ಗೌರವ ಸಲಹೆಗಾರರಾದ ಕೆ.ಬಿ.ಹರ್ಷ ವರ್ಧನ್, ಎನ್.ಪಿ.ದಿನೇಶ್, ಕಿಶೋರ್, ಸುನೇಶ್, ಮನೋಹರ್ ಇತರರು ಉಪಸ್ಥಿತರಿದ್ದರು.

Translate »