ರೈತರ 2 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ ಎರಡು ತಿಂಗಳಿನಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಣೆ: ಸಚಿವ ಶಿವಶಂಕರ ರೆಡ್ಡಿ ಭರವಸೆ
ಮೈಸೂರು

ರೈತರ 2 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ ಎರಡು ತಿಂಗಳಿನಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಣೆ: ಸಚಿವ ಶಿವಶಂಕರ ರೆಡ್ಡಿ ಭರವಸೆ

August 28, 2018

ಚಾಮರಾಜನಗರದಲ್ಲಿ ಕೃಷಿ ಕಾಲೇಜು ಪ್ರಾರಂಭ
ಚಾಮರಾಜನಗ:  ‘ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಈ ಆದೇಶ ಹೊರ ಬಿದ್ದಿದೆ. ಈಗ ಎರಡನೇ ಹಂತದಲ್ಲಿ ರೈತರ ಖಾಸಗಿ ಬ್ಯಾಂಕ್‍ಗಳಲ್ಲಿ ಪಡೆದಿ ರುವ ಎರಡು ಲಕ್ಷ ರೂ. ವರೆಗಿನ ಬೆಳೆ ಸಾಲ ಮನ್ನಾ ಮಾಡಲು ತೀರ್ಮಾನಿಸ ಲಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ರೈತರಿಗೆ ಋಣ ಮುಕ್ತ ಪತ್ರ ನೀಡಲಾಗು ವುದು’ ಎಂದು ಕೃಷಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ಭರವಸೆ ನೀಡಿದರು.

ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ನೂತನ ಕೃಷಿ ಮಹಾ ವಿದ್ಯಾಲಯವನ್ನು (ಕೃಷಿ ಕಾಲೇಜು) ಉದ್ಘಾಟಿಸಿ ಅವರು ಮಾತ ನಾಡಿದರು. ರಾಜ್ಯ ಸರ್ಕಾರ ಬಹಳ ಬದ್ಧತೆಯಿಂದ ರೈತರಿಗೆ ನೀಡಿದ್ದ ಭರವಸೆ ಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈಗಾಗಲೇ ರೈತರ ಸಾಲ ಮನ್ನಾ ಎಂದು ಘೋಷಿಸಿ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಸಂಕಷ್ಟದಲ್ಲಿ ಇರುವುದನ್ನು ಅರಿತು ರೈತರು ಖಾಸಗಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಬೆಳೆ ಸಾಲ ವನ್ನು 2 ಲಕ್ಷ ರೂ. ವರೆಗೆ ಮನ್ನಾ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ಸಂಬಂಧಪಟ್ಟ ರೈತರಿಗೆ ಋಣ ಮುಕ್ತ ಪತ್ರ ನೀಡಲಾಗುವುದು ಎಂದು ರೈತರಿಗೆ ಅಭಯ ನೀಡಿದರು.

ರೈತರ ಸಾಲವನ್ನು ಮನ್ನಾ ಮಾಡಿದ್ದು ದೊಡ್ಡ ಹೆಮ್ಮೆ ಎಂದು ಹೇಳುವುದಿಲ್ಲ. ರೈತರಿಗೆ ಅಗತ್ಯವಾಗಿ ಬೇಕಾಗಿರುವ ಅನುಕೂಲಗಳು ಹಾಗೂ ಯೋಜನೆ ಗಳನ್ನು ಜಾರಿಗೊಳಿಸುವುದು ಸರ್ಕಾರದ ಮುಂದಿದೆ ಎಂದ ಕೃಷಿ ಸಚಿವರು, ಬೇಸಾಯ ಪದ್ಧತಿಯಲ್ಲಿ ಸಾಕಷ್ಟು ಬದಲಾ ವಣೆಗಳನ್ನು ತರಬೇಕಾಗಿದೆ ಎಂದರು.

ರಾಜ್ಯ ಸರ್ಕಾರ ರೈತರ ಪರವಾಗಿದೆ. ರೈತರ ಬಗ್ಗೆ ಬದ್ಧತೆ ಇಟ್ಟುಕೊಂಡಿದೆ. ರೈತ ರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಆಗಬೇ ಕಾಗಿದೆ. ರೈತರಿಗೆ ಕೃಷಿ ಬಗ್ಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ರೈತರಿಗೆ ನೆಮ್ಮದಿ ಇಲ್ಲದ್ದಂತಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ- ಮಾರುಕಟ್ಟೆ ವ್ಯವಸ್ಥೆ ಹಾಗೂ ಸಂಸ್ಕರಣ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಪುಟ್ಟ ರಂಗಶೆಟ್ಟಿ, ಎನ್.ಮಹೇಶ್, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಆರ್.ನರೇಂದ್ರ, ಸಿ.ಎಸ್.ನಿರಂಜನ್‍ಕುಮಾರ್, ಮಾಜಿ ಶಾಸಕರಾದ ಎ.ಆರ್.ಕೃಷ್ಣ ಮೂರ್ತಿ, ಎಸ್.ಬಾಲರಾಜು, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷೆ ಜೆ.ಯೋಗೇಶ್, ಸದಸ್ಯ ರಾದ ಚನ್ನಪ್ಪ, ಸದಾಶಿವಮೂರ್ತಿ, ಕೆರೆ ಹಳ್ಳಿ ನವೀನ್, ಶಶಿಕಲಾ ಸೋಮ ಲಿಂಗಪ್ಪ, ಆರ್.ಬಾಲರಾಜು, ಸಿ.ಎನ್. ಬಾಲರಾಜು, ಮರಗದ ಮಣಿ, ಲೇಖಾ, ಬೊಮ್ಮಯ್ಯ, ಉಮಾವತಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮಾಜಿ ಸದಸ್ಯೆ ಕಾವೇರಿ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯ ಮಹದೇವಶೆಟ್ಟಿ, ಹರದನಹಳ್ಳಿ ಗ್ರಾಪಂ ಅಧ್ಯಕ್ಷ ಸುಬ್ಬಶೆಟ್ಟಿ, ಜಿಪಂ ಸಿಇಓ ಡಾ.ಕೆ. ಹರೀಶ್‍ಕುಮಾರ್, ಕೃಷಿ ವಿವಿ ಕುಲಪತಿ ಡಾ.ಎಂ.ಎಸ್.ನಟರಾಜು, ಆಡಳಿತ ಮಂಡಳಿ ಸದಸ್ಯರಾದ ಕೆ.ಎನ್.ಶ್ರೀಕಾಂತ್, ಪ್ರೊ.ಶಕುಂತಲಾ ಶ್ರೀಧರ್, ಸಂಶೋಧನಾ ನಿರ್ದೇಶಕ ಡಾ.ಷಡಕ್ಷರಿ, ಗ್ರಂಥಪಾಲಕ ಡಾ.ದೇವರಾಜ್, ಹಣಕಾಸು ನಿಯಂತ್ರ ಣಾಧಿಕಾರಿ ವಿಜಯ್‍ಕುಮಾರ್, ಆಸ್ತಿ ಅಧಿಕಾರಿ ಎಂ.ಎನ್.ದೇವರಾಜ, ಚಾ.ನಗರ ಕೃಷಿ ಮಹಾವಿದ್ಯಾಲಯದ ವಿಶೇಷಧಿ ಕಾರಿ ಡಾ.ಎಸ್.ಎನ್.ವಾಸುದೇವನ್, ಮುಖ್ಯಸ್ಥೆ ಡಾ.ಚಂದ್ರಕಲಾ ಹಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಯೋಚಿಸಿದೆ. ಈಗಾಗಲೇ ಇದು ಆಂದ್ರಪ್ರದೇಶದಲ್ಲಿ ಜಾರಿಗೊಂಡಿದೆ. ನೀರನ್ನು ಕಡಿಮೆ ಬಳಕೆ ಮಾಡುವ ಇಸ್ರೇಲ್ ಮಾದರಿಯನ್ನು ಜಾರಿಗೊಳಿಸಲು ಯೋಜನೆ ಸರ್ಕಾರದ ಮುಂದಿದೆ.
-ಎನ್.ಹೆಚ್.ಶಿವಶಂಕರರೆಡ್ಡಿ, ಕೃಷಿ ಸಚಿವರು

ಆರ್ಥಿಕ ವ್ಯವಸ್ಥೆಯು ಕೃಷಿ ಮೇಲೆ ನಿಂತಿದೆ. ಕೈಗಾರಿಕೆ ಹಾಗೂ ಸೇವಾ ವಲಯ ಮುಂದಕ್ಕೆ ಬರುತ್ತಿದ್ದು, ಕೃಷಿ ವಲಯ ಹಿನ್ನಡೆಯಲ್ಲಿ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕೃಷಿ ನಮ್ಮ ದೇಶದ ಬದುಕು, ಸಂಸ್ಕøತಿ, ಭವಿಷ್ಯವಾಗಿದೆ. ಹಾಗಾಗಿ, ಕೃಷಿ ಉಳಿಯಬೇಕು, ಕೃಷಿಕರು ಉಳಿಯಬೇಕು.
-ಎನ್.ಮಹೇಶ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು

ಜಿಲ್ಲೆಯ ಎಲ್ಲಾ ಕೆರೆಗಳಲ್ಲಿ ನೀರಿದೆ. ಜಿಲ್ಲೆಯಲ್ಲಿ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಹೀಗಾಗಿ, ಜಿಲ್ಲೆಗೆ ಕೃಷಿ ಕಾಲೇಜಿನ ಅವಶ್ಯಕತೆ ಇತ್ತು. ಇದಕ್ಕಾಗಿ ಡಾ.ಮಹದೇವಪ್ಪ ಮೊದಲ ಬಾರಿಗೆ ಪ್ರಯತ್ನಿಸಿದ್ದರು. ನಾನೂ ಸಹ ಕೃಷ್ಣ ಭೈರೆಗೌಡ ಅವರಿಗೆ ಪತ್ರ ಬರೆದಿದ್ದೆ. ಸಂಸದ ಆರ್.ಧ್ರುವನಾರಾಯಣ್ ಅವರ ಶ್ರಮದಿಂದ ಕಾಲೇಜು ಮಂಜೂರಾಯಿತು.
-ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ

ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭಿಸಬೇಕು ಎಂಬುದು ನನ್ನ ಬಹು ದಿನದ ಆಸೆ ಆಗಿತ್ತು. ಈ ಆಸೆ ಇಂದು ಈಡೇರಿತು. ಇದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿ ಕೃಷಿ ಕಾಲೇಜು ಆರಂಭವಾಗಲು ಕಾರಣರಾದ ಎಲ್ಲರಿಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಕೃಷಿ ಕಾಲೇಜಿಗೆ ಸ್ವಂತ ಕಟ್ಟಡ ಕಟ್ಟಲು ಬೇಕಾಗಿರುವ ಅನುದಾನವನ್ನು ಕೃಷಿ ಸಚಿವರು ಬಿಡುಗಡೆಗೊಳಿಸಿಕೊಡ ಬೇಕು. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲು ಸಚಿವರು ಗಮನ ಹರಿಸಬೇಕು.
-ಆರ್.ಧ್ರುವನಾರಾಯಣ, ಸಂಸದ

‘ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಸಿಎಂ ಬದಲು’
ಚಾಮರಾಜನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಮುಖ್ಯಮಂತ್ರಿ ಬದಲಾಗಬಹುದು ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರ್‍ರೆಡ್ಡಿ ಹೇಳಿದರು.
ತಾಲೂಕಿನ ಹೊಂಡರಬಾಳು ಗ್ರಾಮದ ಬಳಿ ಇರುವ ಅಮೃತಭೂಮಿಗೆ ಭೇಟಿ ನೀಡಿದ ವೇಳೆ ಸಿದ್ದರಾಮಯ್ಯ ನಾನೇ ಮತ್ತೆ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಹೇಳಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಎರಡು ಪಕ್ಷಗಳ (ಕಾಂಗ್ರೆಸ್, ಜೆಡಿಎಸ್) ಸದಸ್ಯರ ಒಳಗೊಂಡ ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಮುಖ್ಯಮಂತ್ರಿ ಬದಲಾಗಬಹುದು ಅಷ್ಟೇ ಎಂದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಉದ್ದೇಶವಾಗಿತ್ತು. ದೇಶದ ಹಿತ ದೃಷ್ಟಿಯಿಂದ ಕೇಂದ್ರದಲ್ಲೂ ಬಿಜೆಪಿಯನ್ನು ಅಧಿಕಾರದಿಂದ ತೆಗೆಯುವುದು ನಮ್ಮ ಮುಂದಿನ ಗುರಿ ಎಂದರು.

ಬಿಜೆಪಿಯವರು ಯಾವ ಕಾಲದಲ್ಲಿ ಸಾಲಮನ್ನಾ ಮಾಡಿದ್ದಾರೆ? ಅವರದು (ಬಿಜೆಪಿ) ಬರೀ ಮಾತು ಅಷ್ಟೇ. ಕೃತಿಯಲ್ಲಿ ಯಾವುದೂ ಇಲ್ಲ. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದರು, ಅದರಿಂದ ಆದ ಪ್ರಯೋಜನ ಏನು? ಎಂದು ಶಿವಶಂಕರ್ ರೆಡ್ಡಿ ಪ್ರಶ್ನಿಸಿದರು.

Translate »