ಕೊಡಗು

10 ದಿನವಾದರೂ ಮೂವತ್ತೊಕ್ಲುವಿನ  ಉತ್ತಪ್ಪ ಇನ್ನೂ ಪತ್ತೆ ಇಲ್ಲ
ಕೊಡಗು

10 ದಿನವಾದರೂ ಮೂವತ್ತೊಕ್ಲುವಿನ  ಉತ್ತಪ್ಪ ಇನ್ನೂ ಪತ್ತೆ ಇಲ್ಲ

August 26, 2018

ಸೋಮವಾರಪೇಟೆ: ಕಳೆದ 10 ದಿನಗಳ ಹಿಂದೆ ಸಂಭವಿಸಿದ ಭೂ ಕುಸಿತ ದಿಂದಾಗಿ ಸಮಾಧಿಯಾಗಿ ಮನೆಯೊಳಗೆ ಸಿಲುಕಿದ್ದಾರೆ ಎನ್ನಲಾಗುತ್ತಿರುವ ಮೂವತ್ತೊಕ್ಲುವಿನ ಮುಕ್ಕಾಟಿರ ಉತ್ತಪ್ಪ(ಸಾಬು) ಅವರ ಸಣ್ಣ ಸುಳಿವೂ ಸಹ ಲಭ್ಯವಾಗಿಲ್ಲ. ಕಳೆದ ಆ.16ರಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದ ಭಾರೀ ಭೂ ಕುಸಿತಕ್ಕೆ ಉತ್ತಪ್ಪ ಅವರ ಮನೆ ಸಂಪೂರ್ಣ ಮುಚ್ಚಿ ಹೋಗಿದ್ದು, ಮನೆಯಿದ್ದ ಸ್ಥಳದಲ್ಲೀಗ ಭಾರೀ ಗಾತ್ರದ ಬಂಡೆ, ಬರೀ ಕೆಸರಿದೆ. ಆ ಪ್ರದೇಶದಲ್ಲಿ ಮನೆ ಎಂಬುದು ಇತ್ತು ಎಂಬ ಊಹೆಯೂ ಆಗದಷ್ಟರ ಮಟ್ಟಿಗೆ ಸ್ಥಳ ಬದಲಾವಣೆಯಾಗಿದ್ದು, ಮಣ್ಣಿನೊಳಗೆ…

ಜಿಲ್ಲಾಡಳಿತದ ಪೂರ್ವ ನಿಗದಿ ಪ್ರಕಾರವೇ ರಕ್ಷಣಾ ಸಚಿವರು ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ
ಕೊಡಗು

ಜಿಲ್ಲಾಡಳಿತದ ಪೂರ್ವ ನಿಗದಿ ಪ್ರಕಾರವೇ ರಕ್ಷಣಾ ಸಚಿವರು ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ

August 26, 2018

ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ ಘಟನೆಗೆ ಸಂಬಂಧಪಟ್ಟಂತೆ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಕ್ಷಣಾ ಇಲಾಖೆ, ರಕ್ಷಣಾ ಮಂತ್ರಿಗಳು ಕೊಡಗು ಭೇಟಿ ವೇಳೆ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮೇಲೆ ಕೋಪಗೊಂಡಿದ್ದರು ಎಂದು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದ್ದು, ಅದಕ್ಕಾಗಿ ಸ್ಪಷ್ಟನೆ ನೀಡುತ್ತಿರುವುದಾಗಿ ತಿಳಿಸಿದೆ. ಜಿಲ್ಲಾ…

ಕೇಂದ್ರ ರಕ್ಷಣಾ ಸಚಿವರಿಂದ ನಾನು ರಾಜಕೀಯ ವ್ಯವಸ್ಥೆ ಕಲಿಯಬೇಕಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು
ಕೊಡಗು

ಕೇಂದ್ರ ರಕ್ಷಣಾ ಸಚಿವರಿಂದ ನಾನು ರಾಜಕೀಯ ವ್ಯವಸ್ಥೆ ಕಲಿಯಬೇಕಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು

August 26, 2018

ಮಡಿಕೇರಿ:  ಮೂರು ಬಾರಿ ಶಾಸಕನಾಗಿ ಜನರಿಂದ ಆಯ್ಕೆಯಾಗಿರುವ ನಾನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಅವರಿಂದ ರಾಜಕೀಯ ವ್ಯವಸ್ಥೆಯನ್ನು ಕಲಿಯಬೇಕಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ. ಶುಕ್ರವಾರ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆದ ವೇಳೆ ರಕ್ಷಣಾ ಸಚಿವರು ಸಾ.ರಾ. ಮಹೇಶ್ ವಿರುದ್ಧ ಕಿಡಿಕಾರಿದ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದಿಂದ ಹೊರಬಿದ್ದಿರುವ ಸ್ಪಷ್ಟನೆಗೆ ಸಾ.ರಾ.ಮಹೇಶ್ ಗರಂ ಆಗಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಅವರು ಸೈನಿಕರ ಜೊತೆ ಸಭೆಗೆ…

ನಿರಾಶ್ರಿತರಿಗೆ 50 ಸಾವಿರ ಆಹಾರ ಕಿಟ್ ವಿತರಣೆಗೆ ಚಾಲನೆ
ಕೊಡಗು

ನಿರಾಶ್ರಿತರಿಗೆ 50 ಸಾವಿರ ಆಹಾರ ಕಿಟ್ ವಿತರಣೆಗೆ ಚಾಲನೆ

August 26, 2018

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ಥರಾಗಿ ರುವ 50 ಸಾವಿರ ಕುಟುಂಬಗಳಿಗೆ ‘ವಿಶೇಷ ಅನ್ನಭಾಗ್ಯ ಯೋಜನೆ ಯಡಿ ಆಹಾರ ಕಿಟ್’ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ವಿತರಣೆ ಮಾಡಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಸಾಂಕೇತಿಕವಾಗಿ ನಡೆದ ‘ಆಹಾರ ಕಿಟ್’ ವಿತರಿಸಿ ಮಾತನಾಡಿದ ಸಚಿವರು, ನೆರೆಗೆ ಸಿಲುಕಿ ಸಂತ್ರಸ್ಥರಾಗಿರುವ ಕುಟುಂಬಗಳಿಗೆ 15 ದಿನದಲ್ಲಿ ತಾತ್ಕಾಲಿಕ ಪಡಿತರ ಚೀಟಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಆಹಾರ ಕಿಟ್‍ನಲ್ಲಿ 10 ಕೆ.ಜಿ ಅಕ್ಕಿ,…

ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು
ಕೊಡಗು

ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು

August 25, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಇದುವರೆಗೆ ಒಟ್ಟು 10 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ನಾಲ್ವರು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದೆ. ನಾಪತ್ತೆಯಾಗಿರುವವರ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕಿ ನೀಲಮಣಿ ರಾಜು ತಿಳಿಸಿದರು. ಮಡಿಕೇರಿಯ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕೃತಿ ವಿಕೋಪಕ್ಕೆ ತುತ್ತಾದವರ ನೆರವಿಗಾಗಿ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿಗಳ ಒಂದು ದಿನದ…

ಮುಳುಗಿದ ಬದುಕಲಿ ಚಿಗುರಿದ ಆಶಾಕಿರಣ
ಕೊಡಗು

ಮುಳುಗಿದ ಬದುಕಲಿ ಚಿಗುರಿದ ಆಶಾಕಿರಣ

August 25, 2018

ಇಬ್ಬರು ಯುವತಿಯರಿಗೆ ನಿಗದಿತ ದಿನದಂದೇ ವಿವಾಹ ಸಚಿವ ಸಾ.ರಾ.ಮಹೇಶ್, ಸೇವಾ ಭಾರತಿ ನೆರವು ಮಡಿಕೇರಿ:  ಮಹಾಮಳೆಯ ವಕ್ರದೃಷ್ಠಿಗೆ ತುತ್ತಾಗಿ ಮನೆ ಮಾತ್ರವಲ್ಲದೆ ಮದುವೆಯೂ ಅತಂತ್ರಗೊಂಡು ಮಡಿಕೇರಿಯ ನಿರಾಶ್ರಿತರ ಶಿಬಿರ ಸೇರಿದ್ದ ಇಬ್ಬರು ಹೆಣ್ಣು ಮಕ್ಕಳ ಬಾಳಲ್ಲಿ ಹೊಸ ಆಶಾಕಿರಣ ಉದಯಿ ಸಿದೆ. ಆರ್‍ಎಸ್‍ಎಸ್ ಅಂಗಸಂಸ್ಥೆ ಸೇವಾ ಭಾರತಿಯ ಆಶ್ರಯದಲ್ಲಿರುವ ರಂಜಿತಾ ಮತ್ತು ಮಂಜುಳಾ ಅವರು ಮದುವೆಯ ದಿನ ನಿಗದಿಪಡಿಸಿರುವ ಶುಭ ಘಳಿಗೆಯ ಲ್ಲಿಯೇ ವಿವಾಹ ಮಾಡಲು ಸೇವಾ ಭಾರತಿ ನಿರ್ಧರಿಸಿದೆ. ನಗರದ ಓಂಕಾರೇಶ್ವರ ದೇವಾ ಲಯದಲ್ಲಿ ಆರತಕ್ಷತೆ…

ಕೇಂದ್ರ ರಕ್ಷಣಾ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ
ಕೊಡಗು

ಕೇಂದ್ರ ರಕ್ಷಣಾ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ

August 25, 2018

ಕುಶಾಲನಗರ: ಇಲ್ಲಿನ ನೆರೆ ಪೀಡಿತ ಪ್ರದೇಶಗಳನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲಿಸಿದರು. ಕೊಡಗಿಗೆ ಆಗಮಿಸಿದ ಕೇಂದ್ರ ಸಚಿವರನ್ನು ಜಿಲ್ಲಾಡಳಿತದ ವತಿಯಿಂದ ಹಾರಂಗಿ ಹೆಲಿಪ್ಯಾಡ್ ನಲ್ಲಿ ಬರಮಾಡಿ ಕೊಳ್ಳಲಾಯಿತು. ಹಾರಂಗಿ ಜಲಾಶಯ ಹಾಗೂ ಹಿನ್ನೀರು ಪ್ರದೇಶ ವೀಕ್ಷಣೆ ಮಾಡಿದ ನಂತರ ಹಾರಂಗಿಯಿಂದ ಗುಡ್ಡೆಹೊಸೂರು ಮಾರ್ಗವಾಗಿ ಮಡಿಕೇರಿಗೆ ತೆರಳಿದರುಈ ಸಂದರ್ಭ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮಾನ್ ಪಣ್ಣೇಕರ್, ನೀರಾವರಿ…

ನಿರಾಶ್ರಿತರ ಶಿಬಿರದಲ್ಲಿ ಮೊಳಗುತ್ತಿದೆ ಸಂಗೀತ, ನೃತ್ಯ
ಕೊಡಗು

ನಿರಾಶ್ರಿತರ ಶಿಬಿರದಲ್ಲಿ ಮೊಳಗುತ್ತಿದೆ ಸಂಗೀತ, ನೃತ್ಯ

August 25, 2018

ಮಡಿಕೇರಿ: ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿ ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ ಮನದಲ್ಲಿರುವ ದುಗುಡ ದೂರ ಮಾಡಿ, ವಾಸ್ತವ ಬದುಕಿನತ್ತ ಕರೆತರಲು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಮುಂದಾಗಿದ್ದಾರೆ. ಶಿಬಿರಗಳಲ್ಲಿ ಸಂಗೀತ, ನೃತ್ಯ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ನೋವಿನಲ್ಲಿ ನಗು ಮೂಡುವಂತೆ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆ ಹಿಂದೆಂದೂ ಕಂಡು ಕೇಳರಿ ಯದಂತಹ ಪ್ರಕೃತಿ ವಿಕೋಪಕ್ಕೆ ಮೈಯೊಡ್ಡಿ, ಅಪಾರ ಪ್ರಮಾಣದ ಹಾನಿಗೆ ತುತ್ತಾಗಿದೆ. ಇದ ರಿಂದ ಕೊಡಗಿನ ಭೂಪಟದ ಚಿತ್ರಣವೇ ಬದಲಾಗಿದೆ. ಗ್ರಾಮ-ಗ್ರಾಮಗಳ ನಡುವೆ…

ಪ್ರಧಾನಿ ಮೋದಿ ಕೊಡಗಿಗೆ ಭೇಟಿ ನೀಡಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ
ಕೊಡಗು

ಪ್ರಧಾನಿ ಮೋದಿ ಕೊಡಗಿಗೆ ಭೇಟಿ ನೀಡಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

August 24, 2018

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದಾಗಿ 5 ರಿಂದ 6 ಸಾವಿರ ಮಂದಿ ನಿರಾಶ್ರಿತರಾಗಿ ರುವುದು ಅತ್ಯಂತ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಪ್ರಧಾನ ಮಂತ್ರಿಗಳು ಕೇರಳಕ್ಕೆ ಭೇಟಿ ನೀಡಿದಂತೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಘೋಷಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಆಗ್ರಹಿಸಿದರು. ವಿವಿಧ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ನಂತರ…

ವೃದ್ಧ ದಂಪತಿ ಸೇರಿ ಮೂವರ ರಕ್ಷಣೆ
ಕೊಡಗು

ವೃದ್ಧ ದಂಪತಿ ಸೇರಿ ಮೂವರ ರಕ್ಷಣೆ

August 24, 2018

ಮಡಿಕೇರಿ:  ಮಹಾ ಮಳೆಯಿಂದ ಸಂತ್ರಸ್ಥರಾದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಗುರುವಾರವೂ ಮುಂದು ವರೆದಿದ್ದು, ಲೈನ್‍ಮನೆಯೊಂದರಲ್ಲಿ ಸಿಲು ಕಿದ್ದ ವೃದ್ಧ ದಂಪತಿಗಳನ್ನು ಎನ್‍ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಹೆಮ್ಮೆತ್ತಾಳು ಸಮೀಪದ ಕಾಂಡನಕೊಲ್ಲಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕವಿಲ್ಲದೆ ತೋಟದ ಲೈನ್ ಮನೆಯಲ್ಲಿ ಪಳನಿ ಮತ್ತು ಶಾಂತ ದಂಪತಿಗಳು ಕಳೆದು 4 ದಿನಗಳಿಂದ ಸಿಲುಕಿಕೊಂಡ್ಡಿದ್ದರು. ಮೊಬೈಲ್ ಸಂಪರ್ಕ ವ್ಯವಸ್ಥೆಯಿಲ್ಲದ್ದರಿಂದಾಗಿ ಈ ವೃದ್ಧ ದಂಪತಿಗಳಿಗೆ ಯಾರನ್ನೂ ಸಂಪರ್ಕಸಲು ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೆ ತೀವ್ರ ಅನಾರೋಗ್ಯ ಮತ್ತು…

1 136 137 138 139 140 187
Translate »