ಕೇಂದ್ರ ರಕ್ಷಣಾ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ
ಕೊಡಗು

ಕೇಂದ್ರ ರಕ್ಷಣಾ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ

August 25, 2018

ಕುಶಾಲನಗರ: ಇಲ್ಲಿನ ನೆರೆ ಪೀಡಿತ ಪ್ರದೇಶಗಳನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲಿಸಿದರು.

ಕೊಡಗಿಗೆ ಆಗಮಿಸಿದ ಕೇಂದ್ರ ಸಚಿವರನ್ನು ಜಿಲ್ಲಾಡಳಿತದ ವತಿಯಿಂದ ಹಾರಂಗಿ ಹೆಲಿಪ್ಯಾಡ್ ನಲ್ಲಿ ಬರಮಾಡಿ ಕೊಳ್ಳಲಾಯಿತು. ಹಾರಂಗಿ ಜಲಾಶಯ ಹಾಗೂ ಹಿನ್ನೀರು ಪ್ರದೇಶ ವೀಕ್ಷಣೆ ಮಾಡಿದ ನಂತರ ಹಾರಂಗಿಯಿಂದ ಗುಡ್ಡೆಹೊಸೂರು ಮಾರ್ಗವಾಗಿ ಮಡಿಕೇರಿಗೆ ತೆರಳಿದರುಈ ಸಂದರ್ಭ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮಾನ್ ಪಣ್ಣೇಕರ್, ನೀರಾವರಿ ಇಲಾಖಾಧಿಕಾರಿ ಗಳು ಹಾಗೂ ಸೇನಾಧಿಕಾರಿಗಳು ಇದ್ದರು.

ಡಿಜಿಪಿ ಭೇಟಿ : ಕಾವೇರಿ ಕಣಿವೆ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯಕ್ಕೆ ಶುಕ್ರವಾರ ಡಿಜಿಪಿ ನೀಲಮಣಿ ರಾಜು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭ ಡಿವೈಎಸ್ಪಿ ಮುರುಳೀಧರ್, ಸಿಐ ಕ್ಯಾತೇಗೌಡ, ಎಸ್ ಐ ಜಗದೀಶ್, ನವೀನ್ ಗೌಡ ಇದ್ದರು.

Translate »