ಪಕ್ಷೇತರ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಈಡೇರಿಸಲು ವಿಫಲನಾದರೆ ಅಂದೇ ರಾಜೀನಾಮೆ: ಯೋಗಾನಂದ
ಮೈಸೂರು

ಪಕ್ಷೇತರ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಈಡೇರಿಸಲು ವಿಫಲನಾದರೆ ಅಂದೇ ರಾಜೀನಾಮೆ: ಯೋಗಾನಂದ

August 25, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆ 58ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಯೋಗಾನಂದ ತಾವು ಗೆಲುವು ಸಾಧಿಸಿದರೆ ವಾರ್ಡ್‍ಗೆ ಏನೇನು ಮಾಡಲು ಸಾಧ್ಯ ಎಂಬ ಬಗ್ಗೆ ಪ್ರಣಾಳಿಕೆ ಮೂಲಕ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆಯ ವಿವರಗಳನ್ನು ನೀಡಿದ ಅವರು, ವಾರ್ಡ್‍ನ ಅಭಿವೃದ್ಧಿಗೆ ಖರ್ಚಾಗುವ ಮೊತ್ತದ ವಿವರಗಳನ್ನು ನೇರವಾಗಿ ವಾರ್ಡ್‍ನ ಸಾರ್ವಜನಿಕರೆಲ್ಲರಿಗೂ ತಿಳಿಯುವ ಹಾಗೆ ಮಾಡುವುದು. ತಮ್ಮ ಕಚೇರಿಯಲ್ಲಿ ಸಾರ್ವಜನಿಕರು ನೀಡುವ ದೂರುಗಳಿಗೆ 10-15 ದಿನಗಳಲ್ಲಿ ಪರಿಹಾರ ನೀಡುವುದು. ಜನರಿಂದಲೇ ವಾರ್ಡ್ ಅಭಿವೃದ್ಧಿ ಕುರಿತು ಅಭಿಪ್ರಾಯ ಸಂಗ್ರಹ. ಪ್ರಣಾಳಿಕೆಯಲ್ಲಿ ತಿಳಿಸಿರುವ ಭರವಸೆಗಳನ್ನು ಈಡೇರಿಸಲು ವಿಫಲವಾದ ದಿನವೇ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

Translate »