ಮುಳುಗಿದ ಬದುಕಲಿ ಚಿಗುರಿದ ಆಶಾಕಿರಣ
ಕೊಡಗು

ಮುಳುಗಿದ ಬದುಕಲಿ ಚಿಗುರಿದ ಆಶಾಕಿರಣ

August 25, 2018
  • ಇಬ್ಬರು ಯುವತಿಯರಿಗೆ ನಿಗದಿತ ದಿನದಂದೇ ವಿವಾಹ
  • ಸಚಿವ ಸಾ.ರಾ.ಮಹೇಶ್, ಸೇವಾ ಭಾರತಿ ನೆರವು

ಮಡಿಕೇರಿ:  ಮಹಾಮಳೆಯ ವಕ್ರದೃಷ್ಠಿಗೆ ತುತ್ತಾಗಿ ಮನೆ ಮಾತ್ರವಲ್ಲದೆ ಮದುವೆಯೂ ಅತಂತ್ರಗೊಂಡು ಮಡಿಕೇರಿಯ ನಿರಾಶ್ರಿತರ ಶಿಬಿರ ಸೇರಿದ್ದ ಇಬ್ಬರು ಹೆಣ್ಣು ಮಕ್ಕಳ ಬಾಳಲ್ಲಿ ಹೊಸ ಆಶಾಕಿರಣ ಉದಯಿ ಸಿದೆ. ಆರ್‍ಎಸ್‍ಎಸ್ ಅಂಗಸಂಸ್ಥೆ ಸೇವಾ ಭಾರತಿಯ ಆಶ್ರಯದಲ್ಲಿರುವ ರಂಜಿತಾ ಮತ್ತು ಮಂಜುಳಾ ಅವರು ಮದುವೆಯ ದಿನ ನಿಗದಿಪಡಿಸಿರುವ ಶುಭ ಘಳಿಗೆಯ ಲ್ಲಿಯೇ ವಿವಾಹ ಮಾಡಲು ಸೇವಾ ಭಾರತಿ ನಿರ್ಧರಿಸಿದೆ. ನಗರದ ಓಂಕಾರೇಶ್ವರ ದೇವಾ ಲಯದಲ್ಲಿ ಆರತಕ್ಷತೆ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ತಲಾ 50 ಸಾವಿರ ರೂಪಾಯಿಗಳ ನೆರವು ನೀಡಿದ್ದಾರೆ. ಅದರೊಂದಿಗೆ ರೋಟರಿ ಸಂಸ್ಥೆ ಹಾಗೂ ಹಲವು ದಾನಿಗಳು ಕೂಡ ವಿವಿಧ ರೂಪದ ನೆರವಿನ ಆಸರೆ ಒದಗಿಸಿದ್ದಾರೆ.
ಅಂದು ಆಗಿದ್ದೇನು?: ಕಳೆದ 7 ದಿನಗಳ ಹಿಂದೆ ಸುರಿದ ಮರಣ ಮಳೆಗೆ ಇಡೀ ಮಕ್ಕಂ ದೂರು ಗ್ರಾಮವೇ ತತ್ತರಿಸಿ ಹೋಗಿತ್ತು. ಈ ಭಾಗದ ಮೇಘತ್ತಾಳು ಮತ್ತು ಹೆಮ್ಮೆತ್ತಾಳು ಗ್ರಾಮಗಳು ಭೂಕುಸಿತದಿಂದ ನಾಮಾವಶೇಷಗೊಂಡವು. ಕ್ಷಣಕ್ಷಣಕ್ಕೂ ಬೆಟ್ಟ ಕುಸಿಯುತ್ತಿದ್ದುದರಿಂದ ಊರಿಗೆ ಊರೇ ಸ್ಥಳಾಂತರಗೊಂಡಿತು. ಈ ಪೈಕಿ ಮಕ್ಕಂದೂರು ರಾಟೆಮನೆ ಪೈಸಾರಿ ನಿವಾಸಿ ಗಳದ ಸುಮಿತ್ರ – ಸಂಜೀವ ದಂಪತಿ ಕುಟುಂಬ ಹಾಗೂ ಬೇಬಿ ಮತ್ತು ಮಕ್ಕಳ ಕುಟುಂಬವೂ ಸೇರಿತ್ತು. ವಿಪರ್ಯಾಸವೆಂದರೆ ಈ ಎರಡು ಬಡ ಕುಟುಂಬಗಳು ತಮ್ಮ ಮನೆಗಳ ಹೆಣ್ಣು ಮಕ್ಕಳ ವಿವಾಹಕ್ಕೆ ದಿನವನ್ನು ಕೂಡ ಗೊತ್ತು ಮಾಡಿದ್ದರು. ಈ ಪೈಕಿ ಬೇಬಿ ಅವರ ಮಗಳು ಮಂಜುಳಾ ಅವರ ವಿವಾಹ ಆಗಸ್ಟ್ 26ರಕ್ಕೆ ನಿಗಧಿಯಾಗಿತ್ತಲ್ಲದೆ, ಮಕ್ಕಂ ದೂರು ವಿಎಸ್‍ಎಸ್‍ಎನ್ ಸಭಾಂಗಣ ದಲ್ಲಿ ಮದುವೆ ನಡೆಯಬೇಕಿತ್ತು.

ಆದರೆ ಭೂ ಕುಸಿತದಿಂದ ಮನೆ, ಮದುವೆಗೆ ಮಾಡಿಟ್ಟ ಚಿನ್ನ, ಬಟ್ಟೆ ಎಲ್ಲವೂ ಭೂ ಸಮಾಧಿ ಯಾಗಿತ್ತು. ಉಟ್ಟ ಬಟ್ಟೆಯಲ್ಲೇ ಬಡ ಕುಟುಂಬ ಎಲ್ಲವನ್ನು ಕಳೆದುಕೊಂಡು ನಿರಾಶ್ರಿ ತರ ಶಿಬಿರ ಸೇರಿತ್ತು. ತಂಗಿಯ ಮದುವೆ ಯನ್ನು ಅದ್ದೂರಿಯಾಗಿ ಮಾಡುವ ಕನಸು ಕಂಡಿದ್ದ ಅವರ ಅಣ್ಣ, ಅಣ್ಣು ಕುಸಿದು ಹೋಗಿದ್ದ. ದಾಂಪತ್ಯ ಬದುಕಿಗೆ ದಿನ ಎಣಿಸು ತ್ತಿದ್ದ ಮಧುಮಗಳು ಮಂಜುಳಾ ನಿರಾಶ್ರಿತರ ಕೇಂದ್ರದಲ್ಲಿ ತನ್ನ ಬದುಕು ಹೀಗಾಯಿತ್ತಲ್ಲಾ ಎಂದು ಕೊರಗುತ್ತಾ ದಿನ ದೂಡುತ್ತಿದ್ದಳು.

ಇತ್ತ ಸೆಪ್ಟೆಂಬರ್ 12 ರಂದು ನಿಗಧಿ ಯಾಗಿದ್ದ ಸುಮಿತ್ರ-ಸಂಜೀವಾ ದಂಪತಿಗಳ ಪುತ್ರಿ ರಂಜಿತಾ ವಿವಾಹವೂ ಅತಂತ್ರವಾ ಯಿತು. ಭೂ ಸಮಾಧಿಯಾದ ಮನೆಯೊಳಗೆ ಮಧುಮಗಳು ರಂಜಿತಾಳ ವಿವಾಹದ ಕನಸುಗಳು ಕೂಡ ನುಚ್ಚುನೂರಾಗಿತ್ತು. ಬಡ ಕುಟುಂಬಗಳು ತುತ್ತು ಅನ್ನಕ್ಕೂ ಪರಿ ತಪಿಸುತ್ತಾ ರಾತ್ರಿ ಬೆಳಗಾಗುವುದರೊಳಗೆ ನಿರ್ಗತಿಕರಾಗಿ ನಿರಾಶ್ರಿತರ ಕೇಂದ್ರ ಸೇರಿದವು. ಹೀಗೆ ಬಂದ ಕುಟುಂಬಗಳಿಗೆ ಸೇವಾ ಭಾರತಿ ಸಂಸ್ಥೆ ಆಶ್ರಯ ನೀಡಿತು.

2 ಬಡ ಕುಟುಂಬಗಳ ಹೆಣ್ಣು ಮಕ್ಕಳು ಮನೆ ಕಳೆದುಕೊಂಡಿದ್ದಲ್ಲದೆ ವಿವಾಹವೂ ಅತಂತ್ರವಾದ ಬಗ್ಗೆ “ಮೈಸೂರು ಮಿತ್ರ” ಆ.22 ರಂದು ಸವಿಸ್ತಾರವಾಗಿ ವರದಿ ಮಾಡಿತ್ತು.

ಆ ಬಳಿಕ ಹಲವು ಸಂಘ ಸಂಸ್ಥೆಗಳು ನೆರವು ನೀಡಲು ಮುಂದಾದವು. ಸೇವಾ ಭಾರತಿ ಸಂಸ್ಥೆ ಈ ಬಡ ಹೆಣ್ಣು ಮಕ್ಕಳು ವಿವಾಹ ವನ್ನು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ನಿಗಧಿಪಡಿಸಿದ ದಿನದಲ್ಲೇ ನಡೆಸಲು ತೀರ್ಮಾನಿಸಿತು. ಸಚಿವ ಸಾ.ರಾ. ಮಹೇಶ್ ಆರ್ಥಿಕ ಸಹಾಯ ನೀಡಿದ್ದಾರೆ. ಓಂಕಾರೇಶ್ವರ ಸನ್ನಿಧಿಯಲ್ಲಿ ಈ ಹೆಣ್ಣು ಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ನಿಗದಿ: ಮಕ್ಕಂದೂರು ರಾಟೆಮನೆ ಪೈಸಾರಿ ನಿವಾಸಿ ಬೇಬಿ ಅದರ ಪುತ್ರಿ ಮಂಜುಳಾ ಅವರ ವಿವಾಹ ಆ.26ರ ಭಾನು ವಾರ ಬೆಳಿಗ್ಗೆ ಮಡಿಕೇರಿಯ ಓಂಕಾರೇ ಶ್ವರ ಸನ್ನಿಧಿಯಲ್ಲಿ ನಡೆಯಲಿದೆ. ನಗರದ ಗೆಜ್ಜೆಸಂಗಪ್ಪ ಕಲ್ಯಾಣ ಮಂಟಪದಲ್ಲಿ ಊಟೋಪಚಾರದ ವ್ಯವಸ್ಥೆ ಏರ್ಪಡಿಸ ಲಾಗಿದೆ. ಮಂಜುಳಾ ಕೇರಳ ಕೂತುಪರುಂಬು ನಿವಾಸಿ ರಜೀಶ್ ಅವರನ್ನು ವರಿಸಲಿದ್ದಾರೆ.

ಸುಮಿತ್ರಾ -ಸಂಜೀವಾ ದಂಪತಿಗಳು ಪುತ್ರಿ ರಂಜಿತಾಳ ವಿವಾಹ ಸೆ.12 ರಂದು ಓಂಕಾರೇಶ್ವರ ದೇವಾಲಯದಲ್ಲಿ ನೆರವೇರ ಲಿದೆ. ಕೇರಳ ಕಣ್ಣೂರು ಜಿಲ್ಲೆಯ ರಂಜಿತ್ ಎಂಬವರನ್ನು ರಂಜಿತಾ ವರಿಸಲಿ ದ್ದಾರೆ. ಈ ಎರಡು ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸೇವಾ ಭಾರತಿ ಆಸರೆಯಾಗಿ ನಿಂತಿದೆ.

Translate »