ಕೊಡಗು

ಕೊಡಗಿನಲ್ಲಿ 4 ಸಾವಿರ ಮಂದಿ ನಾಪತ್ತೆ
ಕೊಡಗು

ಕೊಡಗಿನಲ್ಲಿ 4 ಸಾವಿರ ಮಂದಿ ನಾಪತ್ತೆ

August 22, 2018

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿರುವ ಭೂ ಕುಸಿತ ಹಾಗೂ ಪ್ರವಾಹದಿಂದಾಗಿ ಸುಮಾರು 4 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ನೀಡಿದೆ ಎನ್ನಲಾಗಿದೆ. ಗುಡ್ಡಗಳು ಕುಸಿದು, ಪ್ರವಾಹ ಬಂದ ವೇಳೆ ಬಹುತೇಕರು ರಕ್ಷಣೆಗಾಗಿ ಎತ್ತರವಾದ ಬೆಟ್ಟದ ಮೇಲೆ ಹತ್ತಿದ್ದರು. ಮತ್ತೆ ಹಲವರು ತಮಗೆ ತೋಚಿದ ದಿಕ್ಕಿನಲ್ಲಿ ಸಾಗಿ ಪ್ರವಾಹದ ಹೊಡೆತದಿಂದ ತಪ್ಪಿಸಿಕೊಂಡಿದ್ದರು. ಅವರಲ್ಲಿ 4 ಸಾವಿರ ಮಂದಿಯ ವಿವರಗಳು ಲಭ್ಯವಾಗುತ್ತಿಲ್ಲ. ಅವರುಗಳು ಸುರಕ್ಷಿತವಾಗಿ ಹೊರ ಊರುಗಳಲ್ಲಿರುವ ತಮ್ಮ ಸಂಬಂಧಿಕರ ಮನೆ ಸೇರಿರಲೂಬಹುದು ಎಂದು ಅಂದಾಜಿಸಲಾಗಿದೆ….

ಅಳಿಯನ ಮನೆಯತ್ತ ಮಾವನ ಆಗಮನ!
ಕೊಡಗು

ಅಳಿಯನ ಮನೆಯತ್ತ ಮಾವನ ಆಗಮನ!

August 21, 2018

ಗೋಣಿಕೊಪ್ಪಲು: ವಿಪರೀತ ಮಳೆ, ಗಾಳಿಯಿಂದ ಸಿಲುಕಿ ನರಕ ಯಾತನೆ ಅನುಭವಿಸಿದ ಹೆಬ್ಬಟ್ಟಗೇರಿ, ಮುಕ್ಕೋಡ್ಲು ಗ್ರಾಮದ ವಯೋವೃದ್ದ ಚಂದ್ರು ಎಂಬಾತ ಮೂರು ದಿನಗಳ ಕಾಲ ಕಾಡಿನಲ್ಲಿ ನಡೆದುಕೊಂಡೇ ಬಂದು, ಮುಖ್ಯರಸ್ತೆ ತಲುಪಿದ ನಂತರ ಸಿಕ್ಕಿದ ಟ್ರಕ್ ನಲ್ಲಿ ತನ್ನ ಅಳಿಯನ ಊರು ದೇವರಪುರಕ್ಕೆ ಆಗಮಿಸಿದ್ದಾರೆ. ವಯೋವೃದ್ಧನೊಂದಿಗೆ ಹೆಬ್ಬಟ್ಟಗೇರಿಯ ಅಕ್ಕಪಕ್ಕದ 40 ನಿವಾಸಿಗಳು ಸಹ ಆಗಮಿಸಿದ್ದು, ದೇವರಪುರದ ಅಂಬುಕೋಟೆಯಲ್ಲಿರುವ ಚಂದ್ರುವಿನ ಅಳಿಯ ವಿವೇಕ್ ಅವರ ಮನೆಯಲ್ಲಿ ಸದ್ಯಕ್ಕೆ ಆಶ್ರಯ ಪಡೆದಿದ್ದಾರೆ. ದಿಢೀರನೇ ಮನೆಗೆ ಆಗಮಿಸಿದ ಮಾವ ಹಾಗೂ 40 ಮಂದಿಗೆ…

ಬೆಟ್ಟ-ಗುಡ್ಡ ಅಗೆದು ರೆಸಾರ್ಟ್ ನಿರ್ಮಿಸಿದ್ದೇ ಕೊಡಗಿನ ದುರಂತಕ್ಕೆ ಕಾರಣ : ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಮತ
ಕೊಡಗು

ಬೆಟ್ಟ-ಗುಡ್ಡ ಅಗೆದು ರೆಸಾರ್ಟ್ ನಿರ್ಮಿಸಿದ್ದೇ ಕೊಡಗಿನ ದುರಂತಕ್ಕೆ ಕಾರಣ : ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಮತ

August 21, 2018

ಮಡಿಕೇರಿ:  ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿರುವುದು, ಬೆಟ್ಟ ಗುಡ್ಡಗಳನ್ನು ಅಗೆದು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಿಸಿರುವುದು ಕೊಡಗಿನ ಈಗಿನ ದುರಂತಗಳಿಗೆ ಕಾರಣವೆಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗೆ ವೀರಯೋಧರನ್ನು ನೀಡಿರುವ ನಾಡಾದ ಕೊಡಗಿನಲ್ಲಿ ಮಹಾಮಳೆಯಿಂದ ಉಂಟಾಗಿರುವ ಅಪಾರ ಹಾನಿಯಿಂದಾಗಿ ಯೋಧರ ಸಹಕಾರ ದಿಂದಲೆ ರಕ್ಷಣಾ ಕಾರ್ಯಗಳಿಗೆ ಮೊರೆ ಹೋಗಿರುವುದು ವಿಷಾದಕರವೆಂದರು. ಕೊಡಗಿನ ಜನರು ಯಾವತ್ತೂ ಸರ್ಕಾರದಿಂದ ಭಿಕ್ಷೆ ಬೇಡಿದವರಲ್ಲ. ಕಾವೇರಿ ನದಿ ನೀರನ್ನು ಬಳಕೆ ಮಾಡುವ ಪ್ರದೇಶಗಳ…

ಮುಕ್ಕೋಡ್ಲುವಿನ 80 ಮಂದಿ ರಕ್ಷಣೆ ಸ್ಥಳೀಯ ಯುವಕರ ಸಾಹಸ
ಕೊಡಗು

ಮುಕ್ಕೋಡ್ಲುವಿನ 80 ಮಂದಿ ರಕ್ಷಣೆ ಸ್ಥಳೀಯ ಯುವಕರ ಸಾಹಸ

August 21, 2018

ಸೋಮವಾರಪೇಟೆ: ಕಳೆದ 5 ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಸಂತ್ರಸ್ತರಾಗಿದ್ದ ಮುಕ್ಕೋಡ್ಲು ಗ್ರಾಮದ ಸುಮಾರು 80 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಾದಾಪುರದ ಇಗ್ಗೋಡ್ಲು ಮತ್ತು ಹಮ್ಮಿಯಾಲದ ಹಚ್ಚಿನಾಡು ಮಾರ್ಗ ವಾಗಿ ಮುಕ್ಕೋಡ್ಲು ತಲುಪಿದ ತಲಾ 30 ರಷ್ಟಿದ್ದ ಯುವಕರ ತಂಡ ಗ್ರಾಮದೊಳಗೆ ಸಿಲುಕಿದ್ದ ಜನರನ್ನು ಹರಸಾಹಸಪಟ್ಟು ರಕ್ಷಿಸಿ ದರು. ಜಲಪ್ರಳಯದಿಂದ ಮುಕ್ಕೋಡ್ಲು ಗ್ರಾಮದಲ್ಲಿ ಭಾರೀ ಬೆಟ್ಟಗಳು ಕುಸಿದಿದ್ದು, ರಸ್ತೆಗಳು ಸಂಪೂರ್ಣ ನಾಶವಾಗಿವೆ. ರಸ್ತೆ ಬದಿಯ ಗುಡ್ಡಗಳು ಕುಸಿದು ಭಾರೀ ಮರಗಳು ನೆಲಕ್ಕುರುಳಿದ್ದರೆ, ಕೆಲವೆಡೆ ರಸ್ತೆಗಳೇ ಕೊಚ್ಚಿ…

ಕೊಡಗಿನ ಜೊತೆ ಮಂಡ್ಯಗೆ ಅವಿನಾಭಾವ ಸಂಬಂಧ; ಸಚಿವ ಸಿ.ಎಸ್.ಪುಟ್ಟರಾಜು
ಕೊಡಗು

ಕೊಡಗಿನ ಜೊತೆ ಮಂಡ್ಯಗೆ ಅವಿನಾಭಾವ ಸಂಬಂಧ; ಸಚಿವ ಸಿ.ಎಸ್.ಪುಟ್ಟರಾಜು

August 21, 2018

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿರುವ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿವೆ ಎಂದು ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಪ್ರಕೃತಿ ವಿಕೋಪದಿಂದ ರಸ್ತೆಗಳು ಹಾನಿಯಾಗಿದ್ದು, ಸದ್ಯ ಮಳೆ ಹಾನಿಯಿಂದ ತೊಂದರೆಯಾಗಿ ರುವ ಎರಡು ಜಿ.ಪಂ.ವ್ಯಾಪ್ತಿಯಲ್ಲಿ ತ್ವರಿತವಾಗಿ ಗ್ರಾಮೀಣ ರಸ್ತೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಿದೆ. ರಸ್ತೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ತಕ್ಷಣವೇ 50 ಲಕ್ಷ ರೂ.ವನ್ನು ಜಿ.ಪಂ.ಗೆ…

ಮಹಾಮಳೆಗೆ ಕೊಚ್ಚಿಹೋದ ಬೆಳೆಗಾರನ ಬದುಕು
ಕೊಡಗು

ಮಹಾಮಳೆಗೆ ಕೊಚ್ಚಿಹೋದ ಬೆಳೆಗಾರನ ಬದುಕು

August 21, 2018

ಮಡಿಕೇರಿ: ಕಳೆದ ನಾಲ್ಕೈದು ದಶಕಗಳಿಂದ ಇರುವ ಎರಡು ಏಕರೆ ಭೂಮಿಯಲ್ಲಿ ಕಾಫಿ, ಕರಿಮೆಣಸು ಕೃಷಿ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದ ಶಿವರಾಂ ಅವರು ಇಂದು ಮನೆ, ತೋಟಗಳಿಲ್ಲದೆ ಬರಿಗೈಯಲ್ಲಿ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದ ಪುನರ್ವಸತಿ ಕೇಂದ್ರದಲ್ಲಿದ್ದಾರೆ. ಬೆವರು ಹರಿಸಿ ನೆಟ್ಟು ಬೆಳೆಸಿದ ಕಾಫಿ ತೋಟದ ಮೇಲೆ ಗುಡ್ಡಕ್ಕೆ ಗುಡ್ಡವೆ ಕುಸಿದು ನಿಂತಿದೆ. ಮನೆ, ತೋಟ ಎಲ್ಲಿ, ಹೋಗುವ ದಾರಿ ಎಲ್ಲಿ ಎನ್ನುವುದೇ ತಿಳಿಯದ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಪುನರ್ವಸತಿ ಕೇಂದ್ರಕ್ಕೆ ಭೇಟಿಯನ್ನಿತ್ತ ವಿಧಾನ ಪರಿಷತ್ತಿನ…

ಕೊಡಗಿನ ನೆರೆ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಗೋಳು ಶೌಚಾಲಯ, ಸ್ನಾನಗೃಹ ಕೊರತೆಯಿಂದ ನಲುಗಿದ ಜೀವಗಳು
ಕೊಡಗು

ಕೊಡಗಿನ ನೆರೆ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಗೋಳು ಶೌಚಾಲಯ, ಸ್ನಾನಗೃಹ ಕೊರತೆಯಿಂದ ನಲುಗಿದ ಜೀವಗಳು

August 21, 2018

ಮಡಿಕೇರಿ:  ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆ ಇಂದಿಗೂ ಮಹಾ ಪ್ರಳಯದ ಕರಾಳ ಛಾಯೆಯಿಂದ ಹೊರಬಂದಿಲ್ಲ. ವರುಣನ ಹೊಡೆತದಿಂದ ಸಂಪೂರ್ಣ ಮಂಡಿಯೂರಿರುವ ಕೊಡಗಿನಲ್ಲಿ ಅತೀ ಹೆಚ್ಚು ಹಾನಿಗೆ ತುತ್ತಾಗಿರುವ ಮಡಿಕೇರಿ ತಾಲೂಕು ಮತ್ತು ಸುತ್ತ-ಮುತ್ತಲಿನ ಗ್ರಾಮಗಳಿಂದ ನಿರಾಶ್ರಿತರ ಕೇಂದ್ರಗಳತ್ತ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭೂ ಕುಸಿತ, ಪ್ರವಾಹ ಮತ್ತು ಪಕೃತಿ ವಿಕೋಪಗಳಿಂದ ಮನೆ, ಗ್ರಾಮ, ಊರು ತೊರೆದವರನ್ನು ಸಮೀಪದ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ದಾಖಲಿಸಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ನಿರಾಶ್ರಿತ ಕೇಂದ್ರಗಳಲ್ಲಿ ಅಂದಾಜು 7…

ಸೇನೆಗೇ ಸವಾಲಾದ ಸೈನಿಕರ ನಾಡು
ಕೊಡಗು, ಮೈಸೂರು

ಸೇನೆಗೇ ಸವಾಲಾದ ಸೈನಿಕರ ನಾಡು

August 20, 2018

ಮಡಿಕೇರಿ: ಭಾರತೀಯ ಸೇನೆಗೆ ಹಲವಾರು ಸೈನಿಕರು ಹಾಗೂ ಸೇನಾಧಿಕಾರಿಗಳನ್ನು ಕೊಡುಗೆ ನೀಡಿದ ಸೈನಿಕರ ನಾಡು ಕೊಡಗು ಇದೀಗ ಸೇನೆಗೇ ಸವಾಲಾಗಿ ಪರಿಣಮಿಸಿದೆ. ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ವೇರ್ಪಟ್ಟು ಮನೆ ಹಾಗೂ ಗುಡ್ಡಗಳು ಕುಸಿದ ಪರಿಣಾಮ ಪ್ರಾಣ ಉಳಿಸಿಕೊಳ್ಳಲು ಬೆಟ್ಟವೇರಿ ಕಳೆದ 4 ದಿನಗಳಿಂದ ಕುಳಿತು ರಕ್ಷಣೆಗಾಗಿ ಅಂಗಲಾಚುತ್ತಿರುವ ಜನರ ರಕ್ಷಿಸಲು ಕೊಡಗಿಗೆ ಬಂದಿರುವ ಸೇನಾ ಪಡೆಗೆ ಇಲ್ಲಿನ ಭೌಗೋಳಿಕ ಪರಿಸ್ಥಿತಿ ತಿಳಿಯದೇ ಭಾರೀ ಸವಾಲು ಎದುರಾಗಿದೆ. ಇಂದೂ ಕೂಡ ಮಳೆ ಸುರಿದ ಪರಿಣಾಮ ಉಂಟಾದ…

ಸಿಎಂಗೆ ಕರೆ ಮಾಡಿ, ಕೊಡಗಿನ ಮಾಹಿತಿ ಪಡೆದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್
ಕೊಡಗು

ಸಿಎಂಗೆ ಕರೆ ಮಾಡಿ, ಕೊಡಗಿನ ಮಾಹಿತಿ ಪಡೆದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

August 20, 2018

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟಕದ ಕೊಡಗು ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಭಾನುವಾರ ಮಾಹಿತಿ ಪಡೆದುಕೊಂಡಿದ್ದಾರೆ. `ಪ್ರವಾಹ ಪರಿ ಸ್ಥಿತಿ ಕುರಿತು ಕರ್ನಾಟಕ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಜನರನ್ನು ರಕ್ಷಣೆ ಮಾಡುವುದು ಮತ್ತು ಪರಿಹಾರ ಕಾರ್ಯಗಳಲ್ಲಿ ಸಾಧ್ಯವಾದಷ್ಟು ನೆರವನ್ನು ನಾವು ನೀಡುತ್ತೇವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ…

ಕಾಂಗ್ರೆಸ್ ಶಾಸಕರು, ಸಂಸದರ 1  ತಿಂಗಳ ವೇತನ ಪ್ರವಾಹ ಸಂತ್ರಸ್ತರಿಗೆ
ಕೊಡಗು

ಕಾಂಗ್ರೆಸ್ ಶಾಸಕರು, ಸಂಸದರ 1  ತಿಂಗಳ ವೇತನ ಪ್ರವಾಹ ಸಂತ್ರಸ್ತರಿಗೆ

August 20, 2018

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಂಸದರು, ಶಾಸಕರು ಒಂದು ತಿಂಗಳ ವೇತನ ವನ್ನು ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಕ್ಕೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಭಾನುವಾರ ಹೇಳಿದ್ದಾರೆ. ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಭಾಗವಹಿ ಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡಲು 1 ತಿಂಗಳ ವೇತನ ನೀಡುವ ತೀರ್ಮಾನ ತೆಗೆದು ಕೊಳ್ಳಲಾಗಿದೆ. ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ…

1 138 139 140 141 142 187
Translate »