ಕೊಡಗು

ಕುಶಾಲನಗರ ಭಾಗಶಃ ಜಲಾವೃತ ರಕ್ಷಣಾ ಪಡೆಗಳಿಂದ ಹಲವರ ರಕ್ಷಣೆ
ಕೊಡಗು

ಕುಶಾಲನಗರ ಭಾಗಶಃ ಜಲಾವೃತ ರಕ್ಷಣಾ ಪಡೆಗಳಿಂದ ಹಲವರ ರಕ್ಷಣೆ

August 18, 2018

ಮಡಿಕೇರಿ: ಆಶ್ಲೇಷಾ ಮಳೆ ಆರ್ಭಕ್ಕೆ ಸಿಲುಕಿ ನಲುಗಿ ಹೋಗಿರುವ ಕುಶಾಲನಗರದಲ್ಲಿ ಶುಕ್ರವಾರ ಕೂಡ ಪ್ರವಾಹ ಮಂದೂವರೆದಿದೆ. ಪಟ್ಟಣದಲ್ಲಿ ಶುಕ್ರವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಜಿಲ್ಲೆಯ ತಲಾಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಇದ್ದ ಪರಿಣಾಮ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಈ ಹಿನ್ನೆಲೆ ಯಲ್ಲಿ ನೀರಿನಲ್ಲಿ ಮುಳುಗಿರುವ ನೂರಾರು ಮನೆಗಳ ಜನರು ತೀವ್ರ ಆತಂಕವನ್ನು ಹೊಂದಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ 296 ಮನೆಗಳು, ಎರಡು ಅಂಗನ ವಾಡಿಗಳು ನೀರಿನಲ್ಲಿ ಮುಳುಗಿದ್ದು, 6ಕ್ಕೂ ಹೆಚ್ಚಿನ ಮನೆಗಳು ನೀರಿನಲ್ಲಿ ಕುಸಿದು ಬಿದ್ದಿವೆ….

ಕೊಡಗಿನ ಜನರ ರಕ್ಷಣೆಗಾಗಿ ಸಚಿವರ ಮುಂದೆ ಕಣ್ಣೀರಿಟ್ಟ ವೀಣಾ ಅಚ್ಚಯ್ಯ
ಕೊಡಗು

ಕೊಡಗಿನ ಜನರ ರಕ್ಷಣೆಗಾಗಿ ಸಚಿವರ ಮುಂದೆ ಕಣ್ಣೀರಿಟ್ಟ ವೀಣಾ ಅಚ್ಚಯ್ಯ

August 18, 2018

ಮಡಿಕೇರಿ: ಸಂಕಷ್ಟದಲ್ಲಿ ಸಿಲುಕಿರುವ ಕೊಡಗಿನ ಜನರನ್ನು ರಕ್ಷಿಸಿ ಎಂದು ಸಚಿವರ ಮುಂದೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕಣ್ಣೀರಿಟ್ಟರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಇಂದು ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ಸಂದರ್ಭದಲ್ಲಿ ವೀಣಾ ಅಚ್ಚಯ್ಯ ಅವರು, ಮಳೆ ಅನಾಹುತದಿಂದ ಕೊಡಗಿನ ಜನರು ಪಡುತ್ತಿರುವ ಕಷ್ಟಗಳನ್ನು ವಿವರಿಸಿದರಲ್ಲದೇ, ರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಯದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ…

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ:  ಜಲಪ್ರಳಯದಿಂದ ತತ್ತರಿಸಿದ ಕಾವೇರಿ ನಾಡು
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ: ಜಲಪ್ರಳಯದಿಂದ ತತ್ತರಿಸಿದ ಕಾವೇರಿ ನಾಡು

August 15, 2018

ಸಂಚಾರಕ್ಕೆ ಮುಕ್ತವಾಗಿಲ್ಲ ಮಡಿಕೇರಿ-ಮಂಗಳೂರು ಹೆದ್ದಾರಿ ಮಡಿಕೇರಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಆಶ್ಲೇಷಾ ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಸಂಪೂರ್ಣ ಸ್ಥಬ್ಧಗೊಂಡಿದೆ. ಕಳೆದ 24 ಗಂಟೆಗೆ ಅವಧಿಯಲ್ಲಿ ಜಿಲ್ಲೆಯಾದ್ಯಂತ 20 ಇಂಚಿಗೂ ಅಧಿಕ ಮಳೆ ಸುರಿದ ಹಿನ್ನಲೆ ಯಲ್ಲಿ ಕೊಡಗು ಜಿಲ್ಲೆಯ ಸ್ಥಿತಿ ವಿಷಮಕ್ಕೆ ತಿರುಗಿದೆ. ನಗರ, ಪಟ್ಟಣ ಸಹಿತ ಗ್ರಾಮೀಣ ಭಾಗಗಳು ಜಲ ಪ್ರಳಯಕ್ಕೆ ತುತ್ತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯೊಂದಿಗೆ ಬಿರುಗಾಳಿಯೂ ಬೀಸುತ್ತಿದ್ದು, ಪ್ರಕೃತಿ ವಿಕೋಪಗಳಿಗೆ ಎಣೆಯಿಲ್ಲದಂತಾಗಿದೆ. ಕಾವೇರಿ, ಲಕ್ಷಣ ತೀರ್ಥ ನದಿಗಳು ಸೇರಿದಂತೆ ಉಪನದಿಗಳು,…

ಬಿರುಗಾಳಿ ಮಳೆಗೆ ಕಾವೇರಿ ತವರು ತತ್ತರ
ಕೊಡಗು

ಬಿರುಗಾಳಿ ಮಳೆಗೆ ಕಾವೇರಿ ತವರು ತತ್ತರ

August 14, 2018

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಮರೋಪಾದಿಯಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. 6 ಜೆಸಿಬಿ ಯಂತ್ರಗಳು ಸುರಿಯುವ ಮಳೆಯ ನಡುವೆಯೇ ಹೆದ್ದಾರಿ ಸಂಚಾರ ಸುಗಮಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದರೆ, ಮಳೆ ಯಿಂದಾಗಿ ಮತ್ತಷ್ಟು ಮಣ್ಣು ಹೆದ್ದಾರಿಗೆ ಬಿದ್ದ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಮಡಿಕೇರಿ-ಮಂಗಳೂರು ಕಡೆಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ದಿನವಿಡಿ ಹೆದ್ದಾರಿಯಲ್ಲೇ ಕಾಲ ಕಳೆಯುವಂತಾಗಿದೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಒಟ್ಟು 4 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಅಂತರ್ಜಲ ಉಕ್ಕೇರಿದ್ದರಿಂದಾಗಿ ಹೆದ್ದಾರಿ ಯ ತಡೆಗೋಡೆ ಕುಸಿತಗೊಂಡಿದೆ….

ರಾಜ್ಯದಲ್ಲಿ ವಾಸ್ತುದೋಷ ಸರ್ಕಾರ
ಕೊಡಗು

ರಾಜ್ಯದಲ್ಲಿ ವಾಸ್ತುದೋಷ ಸರ್ಕಾರ

August 14, 2018

ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ‘ವಾಸ್ತು’ ಪ್ರಕಾರವಾಗಿ ನಡೆಯುತ್ತಿದ್ದು, ಇದೊಂದು ವಾಸ್ತುದೋಷವಿರುವ ಸರ್ಕಾರ ಎಂದು ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ. ಕೊಡಗು ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಆರ್.ಅಶೋಕ್, ಮಡಿಕೇರಿಗೆ ಆಗಮಿಸಿ ಪಟ್ಟಣ ಪಂಚಾಯ್ತಿ ಚುನಾವಣೆಗಳ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಸೂಪರ್ ಸಿಎಂ ಹೆಚ್.ಡಿ.ರೇವಣ್ಣ ನಿಂಬೆಹಣ್ಣು ಇಟ್ಟು ಕೊಂಡು ವಿಧಾನಸಭೆ ಪ್ರವೇಶ ಮಾಡುತ್ತಾರೆ. ಈ ಸರ್ಕಾರದಲ್ಲಿ ರಾಹುಕಾಲದಲ್ಲಿ ಮಸೂದೆಗಳು…

ಬಿಲ್ಲವ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ
ಕೊಡಗು

ಬಿಲ್ಲವ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ

August 14, 2018

ವಿರಾಜಪೇಟೆ: ಬಿಲ್ಲವ ಸೇವಾ ಸಂಘ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸಂಘದ ಸದಸ್ಯರುಗಳ ಪರಸ್ಪರ ಸಹಕಾರ, ಉತ್ತೇಜನ ಸಂಘದ ಬೆಳವಣಿಗೆಯೊಂದಿಗೆ ಸಮುದಾಯದ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆದು ಮುನ್ನಡೆಯಲು ಸಾಧ್ಯವಾಗು ತ್ತದೆ ಎಂದು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ರಾಜ ಹೇಳಿದರು. ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ವಿರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಬಿಲ್ಲವ ಸಂಘದ ವಾರ್ಷಿಕ ಮಹಾ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್…

ಚೆಕ್‍ಬೌನ್ಸ್: ಬಿಎಸ್‍ಎನ್‍ಎಲ್ ಉದ್ಯೋಗಿಗೆ ಶಿಕ್ಷೆ
ಕೊಡಗು

ಚೆಕ್‍ಬೌನ್ಸ್: ಬಿಎಸ್‍ಎನ್‍ಎಲ್ ಉದ್ಯೋಗಿಗೆ ಶಿಕ್ಷೆ

August 14, 2018

ವಿರಾಜಪೇಟೆ: ಹಣಕಾಸು ಸಂಸ್ಥೆಗೆ ಚೆಕ್ ನೀಡಿ ಚೆಕ್‍ಬೌನ್ಸ್ ಮಾಡಿದ ಆರೋಪದ ಮೇರೆಗೆ ಇಲ್ಲಿನ ಬಿಎಸ್‍ಎನ್‍ಎಲ್ ಉದ್ಯೋಗಿ ಕೆ.ಆರ್.ಬೇಬಿ ಎಂಬಾಕೆಗೆ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶ ಶಿವಾನಂದಲಕ್ಷ್ಮಣ ಅಂಚಿ ಅವರು ಆರು ತಿಂಗಳು ಸಜೆ, ಚೆಕ್ ಬೌನ್ಸ್‍ನ ಹಣ ರೂ. 3 ಲಕ್ಷ ಜೊತೆಗೆ ಅದರ ವೆಚ್ಚ ಸೇರಿಸಿ ಪಾವತಿಸುವಂತೆ ತೀರ್ಪು ನೀಡಿದ್ದಾರೆ. ಕೆ.ಆರ್.ಬೇಬಿ ಎಂಬುವರು ತಾ:1-4-2010 ರಂದು ವಿರಾಜಪೇಟೆಯ ಮೂಕಾಂಬಿಕ ಹಣಕಾಸು ಸಂಸ್ಥೆಯಿಂದ ರೂ. 3 ಲಕ್ಷ ಸಾಲ ಪಡೆದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ…

ತಟ್ಟೆಕೆರೆ ಹಾಡಿ ಗಿರಿಜನರ ಪ್ರತಿಭಟನೆ
ಕೊಡಗು

ತಟ್ಟೆಕೆರೆ ಹಾಡಿ ಗಿರಿಜನರ ಪ್ರತಿಭಟನೆ

August 14, 2018

ಗೋಣಿಕೊಪ್ಪಲು:  ತಟ್ಟೆಕೆರೆ ಹಾಡಿ ಯಿಂದ ಗಿರಿಜನರು ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿರು ವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ತಟ್ಟೆಕೆರೆ ಹಾಡಿ ನಿವಾಸಿ ಗಳು ನಿಟ್ಟೂರು ಗ್ರಾಮ ಪಂಚಾಯ್ತಿ ಎದುರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಜಮಾ ಯಿಸಿರುವ ಹಾಡಿ ನಿವಾಸಿಗಳು, ನಮ್ಮನ್ನು ಬಲತ್ಕಾರವಾಗಿ ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಆಶ್ವಾಸನೆ ಸಿಗುವವರೆಗೂ ಹೋರಾಟ ನಡೆಸುವು ದಾಗಿ ಪಟ್ಟುಹಿಡಿದು, ಪ್ರತಿಭಟನೆ ಮುಂದುವರೆಸಿದ್ದಾರೆ. ಅರಣ್ಯ ಇಲಾಖೆ ನಿರಂತರವಾಗಿ ಮಾನಸಿಕ ಕಿರುಕುಳ…

ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ  ಹೈ ಅಲರ್ಟ್ ಘೋಷಣೆ
ಕೊಡಗು

ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ  ಹೈ ಅಲರ್ಟ್ ಘೋಷಣೆ

August 13, 2018

ಮಡಿಕೇರಿ: ಕೊಡಗಿನಾದ್ಯಂತ ಇಂದು ಮಳೆಯ ಅಬ್ಬರ ಜೋರಾಗಿತ್ತು, ಅಲ್ಲದೇ ಮುಂದಿನ ಎರಡು ದಿನ ಕೊಡಗು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೊಡಗಿನಲ್ಲಿ ಹೈ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ನಾಳೆ(ಆ.13) ಶಾಲಾ -ಕಾಲೇಜು ಹಾಗೂ ಅಂಗನವಾಡಿ ಕೇಂದ್ರ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಹಾರಂಗಿ ಜಲಾಶಯದ ಒಳಹರಿವು ಇಂದು 35 ಸಾವಿರ ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನದಿಗೆ 25 ಸಾವಿರ ಕ್ಯೂಸೆಕ್…

ಸುರಿಯುವ ಮಳೆಯಿಂದ ತುಂಬಿ ಹರಿಯುವ ನದಿ-ತೊರೆಗಳು :ಶವ ಸಾಗಿಸಲೂ ಗ್ರಾಮಸ್ಥರ ಹೆಣಗಾಟ
ಕೊಡಗು

ಸುರಿಯುವ ಮಳೆಯಿಂದ ತುಂಬಿ ಹರಿಯುವ ನದಿ-ತೊರೆಗಳು :ಶವ ಸಾಗಿಸಲೂ ಗ್ರಾಮಸ್ಥರ ಹೆಣಗಾಟ

August 13, 2018

ಮಡಿಕೇರಿ: ಎಡಬಿಡದೇ ಸುರಿಯುತ್ತಿರುವ ಮಳೆ… ತುಂಬಿ ಹರಿಯುತ್ತಿರುವ ಹೊಳೆ… ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿ…ನೀರಿಗೆ ಮುಳುಗಿದ ಸೇತುವೆ… ಈ ಸೇತುವೆ ಮೇಲೆ ಮೃತದೇಹದ ಅಂತಿಮ ಯಾತ್ರೆ! ಇಂತಹ ಭಯಾನಕ ಮತ್ತು ಹೃದಯ ವಿದ್ರಾವಕ ಚಿತ್ರಣ ಕಂಡುಬಂದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ 1ನೇ ಮೊಣ್ಣಂಗೇರಿ ಗ್ರಾಮದಲ್ಲಿ..!! 1ನೇ ಮೊಣ್ಣಂಗೇರಿ ಗ್ರಾಮ ಕುಗ್ರಾಮ ವಲ್ಲ.. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಪಂಚತಾರಾ ರೆಸಾರ್ಟ್‍ಗಳಿರುವ ಗ್ರಾಮ..! ಆದರೆ ಮಳೆಗಾಲದಲ್ಲಿ 1ನೇ ಮೊಣ್ಣಂಗೇರಿ ಗ್ರಾಮಸ್ಥರ ನೆರವಿಗೆ ಆಡಳಿತ…

1 140 141 142 143 144 187
Translate »