ತಟ್ಟೆಕೆರೆ ಹಾಡಿ ಗಿರಿಜನರ ಪ್ರತಿಭಟನೆ
ಕೊಡಗು

ತಟ್ಟೆಕೆರೆ ಹಾಡಿ ಗಿರಿಜನರ ಪ್ರತಿಭಟನೆ

August 14, 2018

ಗೋಣಿಕೊಪ್ಪಲು:  ತಟ್ಟೆಕೆರೆ ಹಾಡಿ ಯಿಂದ ಗಿರಿಜನರು ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿರು ವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ತಟ್ಟೆಕೆರೆ ಹಾಡಿ ನಿವಾಸಿ ಗಳು ನಿಟ್ಟೂರು ಗ್ರಾಮ ಪಂಚಾಯ್ತಿ ಎದುರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಬೆಳಗ್ಗೆಯಿಂದಲೇ ಜಮಾ ಯಿಸಿರುವ ಹಾಡಿ ನಿವಾಸಿಗಳು, ನಮ್ಮನ್ನು ಬಲತ್ಕಾರವಾಗಿ ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಆಶ್ವಾಸನೆ ಸಿಗುವವರೆಗೂ ಹೋರಾಟ ನಡೆಸುವು ದಾಗಿ ಪಟ್ಟುಹಿಡಿದು, ಪ್ರತಿಭಟನೆ ಮುಂದುವರೆಸಿದ್ದಾರೆ. ಅರಣ್ಯ ಇಲಾಖೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದೆ. ಜಿಲ್ಲಾಧಿಕಾರಿ, ಗಿರಿಜನ ಕಲ್ಯಾಣ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತವಾದ ಆಶ್ವಾಸನೆ ನೀಡಬೇಕು. ನಮ್ಮನ್ನು ಇಲ್ಲಿಂದ ಸ್ಥಳಾಂತರ ಮಾಡುವುದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭ ಆದಿವಾಸಿ ಮುಖಂಡರುಗಳಾದ ಶೈಲೇಂದ್ರ, ಕೆಂಪ, ಗಪ್ಪು ನೇತೃತ್ವದಲ್ಲಿ ಹಲವಾರು ಮಂದಿ ತಟ್ಟೆಕರೆ ಹಾಡಿ ಗಿರಿಜನರು ಪಾಲ್ಗೊಂಡಿದ್ದಾರೆ.

Translate »