ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

August 14, 2018

ಮೈಸೂರು:  ಮೈಸೂರಿನ ಶ್ರೀ ಸ್ಥಾನಿಕವಾಸಿ ಜೈನ್ ಯುವ ಸಂಘಟನೆ ವತಿಯಿಂದ ಹಳ್ಳದಕೇರಿಯ ಮಹಾವೀರ ನಗರದಲ್ಲಿರುವ ಜೈನ್ ಸ್ಥಾನಕ್ ಸಂಸ್ಥೆಯ ಆವರಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.

ಜೈನ್ ಮುನಿ ಡಾ. ಶ್ರೀ ಸಮಕಿತ್‍ಮುನೀಜಿ ಮಹಾರಾಜ್, ಶ್ರೀ ಭವಂತಮುನೀಜಿ ಮಹಾರಾಜ್ ಮತ್ತು ಶ್ರೀ ಜಯವಂತ ಮುನೀಜಿ ಮಹಾರಾಜ್ ಸಾನಿಧ್ಯ ವಹಿಸಿ ದ್ದರು. ಯುವ ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಮಾರ್ ಸ್ವಾಗತಿಸಿದರು. 10ನೇ ತರಗತಿ, 12ನೇ ತರಗತಿ, ಪದವಿ ಮತ್ತು ವೃತ್ತಿಪರ ಶಿಕ್ಷಣಗಳಾದ ಡಿಪ್ಲೋಮಾ, ಬಿ.ಇ., ಎಂಬಿಬಿಎಸ್, ಎಂಬಿಎನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶ್ರೀ ಸ್ಥಾನಕ್‍ವಾಸಿ ಜೈನ ಸಂಘಟನೆ ಅಧ್ಯಕ್ಷ ಬಿ.ಎ. ಕೈಲಾಶ್‍ಚಂದ್ ಜೈನ್ ಸನ್ಮಾನಿಸಿದರು. ಕಾರ್ಯದರ್ಶಿ ಸುಶೀಲ್ ನಂದಾವತ್, ಖಜಾಂಚಿ ರಾಜೇಂದ್ರ ಕುಮಾರ್ ಬನ್ಸಾಲಿ, ಯುವ ಸಂಘಟನೆ ಮಾಜಿ ಅಧ್ಯಕ್ಷರಾದ ಬುದ್‍ಮಲ್ ಬಾಗ್‍ಮಾರ್, ಉಮೇಶ್ ಕೊತಾರಿ, ಜಂಟಿ ಕಾರ್ಯದರ್ಶಿ ರಾಜೇಂದ್ರ ದೇಸ ರಾಲ, ಖಜಾಂಚಿ ಕಿರಣ್ ಸಲೇಚಾ, ಯೋಜನಾ ನಿರ್ದೇಶಕ ಸುನೀಲ್ ಪಟ್ವಾ, ಬಿ.ಕೆ. ದೀಪಕ್ ಕುಮಾರ್ ಜೈನ್ ಮತ್ತಿತರರು ಹಾಜರಿದ್ದರು.

Translate »