ಬಿಲ್ಲವ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ
ಕೊಡಗು

ಬಿಲ್ಲವ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ

August 14, 2018

ವಿರಾಜಪೇಟೆ: ಬಿಲ್ಲವ ಸೇವಾ ಸಂಘ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸಂಘದ ಸದಸ್ಯರುಗಳ ಪರಸ್ಪರ ಸಹಕಾರ, ಉತ್ತೇಜನ ಸಂಘದ ಬೆಳವಣಿಗೆಯೊಂದಿಗೆ ಸಮುದಾಯದ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆದು ಮುನ್ನಡೆಯಲು ಸಾಧ್ಯವಾಗು ತ್ತದೆ ಎಂದು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ರಾಜ ಹೇಳಿದರು.

ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ವಿರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಬಿಲ್ಲವ ಸಂಘದ ವಾರ್ಷಿಕ ಮಹಾ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್ ರಾಜ ಅವರು ಮಾತನಾಡುತ್ತ, ಸಮುದಾಯದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತಾಗ ಬೇಕು. ಇದಕ್ಕಾಗಿ ಬಿಲ್ಲವ ಸಮಾಜ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿ ನಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳ ಲಾಗುತ್ತಿದ್ದು, ಇದರಿಂದ ಸಂಘದ ಬೆಳ ವಣಿಗೆ ಹಾಗೂ ಪ್ರಗತಿ ಹೊಂದಲು ಸಾಧ್ಯ. ಮುಂದೆಯು ಸಂಘಕ್ಕೆ ಸದಸ್ಯರುಗಳ ಸಹಾಯ ಹಸ್ತ ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಲ್ಲಿ ಶೇ.80ಕ್ಕಿಂತಲೂ ಅಧಿಕ ಅಂಕ ಗಳಿಸಿದ 13 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 4 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ 12 ವರ್ಷಗಳ ಸೇವೆ ಸಲ್ಲಿಸಿದ ಬಿ.ಎಸ್.ಚಂದ್ರಶೇಖರ್ ರಾಜ ಅವರು ಮಹಾಸಭೆಗೆ ರಾಜಿನಾಮೆ ಸಲ್ಲಿಸಿ ಇದರ ಅಂಗೀಕಾರದ ನಂತರ ಹೊಸ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿ.ಎಂ.ಗಣೇಶ್ ಆಯ್ಕೆಗೊಂಡರು. ಬಳಿಕ ಹೊಸ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಾರ್ಷಿಕ ಮಹಾಸಭೆಯಲ್ಲಿ ಬಿಲ್ಲವ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ ಯಾದ ಬಿ.ಎಂ.ಗಣೇಶ್ ಮಾತನಾಡಿ, ಬಿಲ್ಲವ ಸೇವಾ ಸಂಘದ ಸರ್ವತೋಮುಖದ ಬೆಳವಣಿಗೆ- ಅಭಿವೃದ್ಧಿಗೆ ಸಂಘದ ಆಡಳಿತ ಮಂಡಳಿಯೊಂದಿಗೆ ಪ್ರತಿಯೊಬ್ಬ ಸದಸ್ಯರುಗಳು ಸಹಕರಿಸಬೇಕು. ಅಧ್ಯಕ್ಷ ಪದವಿ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಯಿಂದ ಕೂಡಿದ್ದು, ಸಂಘದ ವತಿಯಿಂದ ಶಿಕ್ಷಣ ಹಾಗೂ ಕ್ರೀಡೆಗೆ ಒತ್ತು ನೀಡಿ ಸಂಘ ದಿಂದ ಮುಂದೆಯೂ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಬಿ.ಎಸ್.ಜನಾರ್ಧನ್, ಖಜಾಂಚಿ ಬಿ.ಕೆ. ರಾಮಣ್ಣ, ಪದಾಧಿಕಾರಿಗಳಾದ ಪುರುಷೋತ್ತಮ, ಬಿ.ಎಲ್.ಹರೀಶ್, ಬಿ.ಕೆ.ರಮೇಶ್, ಭರತ್, ನಾರಾಯಣ, ಬಿ.ಎಸ್.ಸೋಮಪ್ಪ, ರೂಪಾ, ಕಿರಣ್, ರಾಜಾ, ಅನಿತಾ ಮುಂತಾದವರು ಉಪಸ್ಥಿತ ರಿದ್ದರು. ಸಂಘದ ಸಹ ಕಾರ್ಯದರ್ಶಿ ಬಿ.ಎಂ.ಸತೀಶ್ ಸ್ವಾಗತಿಸಿ ನಿರೂಪಿಸಿ ದರು. ಸಂಘದ ಮಹಿಳಾ ವಿಭಾಗದ ಪವಿತ್ರಾ ಸುಂದರ ವಂದಿಸಿದರು.

Translate »