ಕೊಡಗು

ಲಘು ವಾಹನಗಳಿಗೆ ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರ ಮುಕ್ತ
ಕೊಡಗು

ಲಘು ವಾಹನಗಳಿಗೆ ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರ ಮುಕ್ತ

August 11, 2018

ಮಡಿಕೇರಿ: ಕೆಲವೆಡೆ ಬಿರುಕು ಬಿಟ್ಟಿದ್ದರೂ ಕೂಡ ಮಡಿಕೇರಿ-ಮಂಗ ಳೂರು ಹೆದ್ದಾರಿಯನ್ನು ಅನಿವಾರ್ಯ ಕಾರಣಗಳಿಂದಾಗಿ ಪ್ರಯಾಣಿಕ ಮತ್ತು ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಅಧಿಕ ಭಾರ ಹೊತ್ತ ಲಾರಿಗಳು, ಶಿಪ್ಪಿಂಗ್ ಕಾರ್ಗೋ, ಮಲ್ಟಿ ಆಕ್ಸಿಲ್, ಲಾಂಗ್ ಚಾಸೀಸ್ ಮತ್ತು ಬುಲ್ಲೆಟ್ ಟ್ಯಾಂಕರ್ ಗಳ ಸಂಚಾರವನ್ನು ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ನಿಷೇಧಿಸಲಾಗಿದೆ. ಅಡುಗೆ ಅನಿಲ, ಪೆಟ್ರೋಲ್ ಉತ್ಪನ್ನ, ಪಡಿತರ ಹಾಗೂ ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಹೆದ್ದಾರಿ ಸಂಚಾರ ಮುಕ್ತವಾಗಿರಲಿದೆ. ಹೆದ್ದಾರಿ ಕುಸಿದಿರುವ ಸ್ಥಳದಲ್ಲಿ ತಾತ್ಕಾಲಿಕ ದುರಸ್ಥಿ ಮಾಡಲಾಗಿದ್ದು, ಬೃಹತ್…

ವಿಷ ಪ್ರಾಶನದಿಂದ ಹಸು, ಕರು ಸಾವು
ಕೊಡಗು

ವಿಷ ಪ್ರಾಶನದಿಂದ ಹಸು, ಕರು ಸಾವು

August 11, 2018

ನಾಪೋಕ್ಲು:  ಬೇತು ಗ್ರಾಮದ ನಿವಾಸಿ ಚೋಕಿರ ಪ್ರಭು ಪೂವಪ್ಪ ಮತ್ತು ಗಣೇಶ್‍ರವರಿಗೆ ಸೇರಿದ 3 ಹಸು, ಕರುಗಳು ಇಂದು ಆಕಸ್ಮಿಕವಾಗಿ ನಗರಕ್ಕೆ ದಾರಿ ತಪ್ಪಿ ಬಂದು ನಗರದಲ್ಲಿ ವಿಷ ಪ್ರಾಶನದಿಂದ ಸತ್ತು ಬಿದ್ದಿರುವ ದೃಶ್ಯ ಜನರ ಮನ ಕಲುಕುವಂತಿತ್ತು. ಇಂದು ಬೆಳಗ್ಗೆ ಕೊಟ್ಟಿಗೆಯಿಂದ ತಪ್ಪಿಸಿ ಕೊಂಡ ಹಸು, ಕರುಗಳು ಸುಮಾರು ಅರ್ಧ ಕಿ.ಮೀ. ದೂರದ ನಾಪೋಕ್ಲು ನಗರಕ್ಕೆ ಬಂದಿದ್ದು, ಮದ್ಯಾಹ್ನದವರೆಗೂ ಗಾಬರಿ ಯಿಂದ ಅಲ್ಲಿ ಇಲ್ಲಿ ತಿರುಗಿಕೊಂಡಿದ್ದ ಹಸು ಕರುಗಳು ನಂತರ ನಗರದ ಬಾರ್ ಒಂದರ ಬಳಿಯಲ್ಲಿ…

ಬೈಕ್‍ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಸಾವು
ಕೊಡಗು

ಬೈಕ್‍ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಸಾವು

August 11, 2018

ಮಡಿಕೇರಿ: ಬೈಕ್‍ನಲ್ಲಿ ಮನೆಗೆ ತೆರಳುವ ಸಂದರ್ಭ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ನಗರದ ಮಂಗಳೂರು ರಸ್ತೆ ನಿವಾಸಿ ಡಿ.ಎಸ್.ರಾಜಾ ಆಲಿಯಾಸ್ ಆರ್ಮುಘ(32) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ. ಆ.8ರ ರಾತ್ರಿ 10 ಗಂಟೆಗೆ ಡಿ.ಎಸ್.ರಾಜಾ ದ್ವಿಚಕ್ರ ವಾಹನದಲ್ಲಿ ಮಂಗಳೂರು ರಸ್ತೆಯ ಕೆಳಭಾಗದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಆಯತಪ್ಪಿ ಕೆಳಕ್ಕೆ ಬಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ…

ಹೊಟೇಲ್‍ನಲ್ಲಿ ನಗದು, ಮೊಬೈಲ್ ಕಳವು
ಕೊಡಗು

ಹೊಟೇಲ್‍ನಲ್ಲಿ ನಗದು, ಮೊಬೈಲ್ ಕಳವು

August 11, 2018

ಮಡಿಕೇರಿ: ಹೊಟೇಲ್ ಒಂದರ ಹೆಂಚು ತೆಗೆದು ಒಳನುಗ್ಗಿದ ಕಳ್ಳರು, ನಗದು ಮತ್ತು ಮೊಬೈಲ್ ಕಳವು ಮಾಡಿರುವ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ. ನಗರಸಭೆ ಸಂಕೀರ್ಣ ಮುಂಭಾಗದಲ್ಲಿರುವ ಹೊಟೇಲ್ ಹಿಂಬದಿಯ ಅಡುಗೆ ಕೋಣೆಯ ಹೆಂಚು ತೆಗೆದು ಒಳನುಗ್ಗಿ 4 ಸಾವಿರ ನಗದು ಮತ್ತು ಬೆಲೆ ಬಾಳುವ ಮೊಬೈಲನ್ನು ಹೊತ್ತೊಯ್ದಿದ್ದಾರೆ. ಪ್ರತಿ ದಿನ ಹೋಟೆಲ್‍ನಲ್ಲಿ ರಾತ್ರಿ ವೇಳೆ ಸಿಬ್ಬಂದಿಗಳು ಮಲಗುತ್ತಿದ್ದರು. ಆದರೆ ಗುರುವಾರ ರಾತ್ರಿ ಹೊಟೇಲ್‍ನಲ್ಲಿ ಯಾರು ಮಲಗಿರಲಿಲ್ಲ. ಈ ಮಾಹಿತಿ ಮತ್ತು ಭಾರಿ ಮಳೆಯ ಲಾಭ ಪಡೆದು…

ವಿದ್ಯಾರ್ಥಿ ಆತ್ಮಹತ್ಯೆ
ಕೊಡಗು

ವಿದ್ಯಾರ್ಥಿ ಆತ್ಮಹತ್ಯೆ

August 11, 2018

ಮಡಿಕೇರಿ:  ಶಾಲಾ ವಿದ್ಯಾರ್ಥಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ತ್ಯಾಗರಾಜ ಕಾಲೋನಿಯಲ್ಲಿ ನಡೆದಿದೆ. ತ್ಯಾಗರಾಜ ಕಾಲೋನಿ ನಿವಾಸಿ ಶರೀಫಾ ಎಂಬವರ ಪುತ್ರ ಜಾಹೀದ್(16) ಎಂಬಾತನೇ ಆತ್ಮಹತ್ಯೆಗೆ ಶರಣಾದ ಬಾಲಕನಾಗಿದ್ದಾನೆ. ಜಾಹೀದ್ ನಗರದ ಸರಕಾರಿ ಫ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಶಾಲೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ಆದರೆ, 9.30ರ ಸಮಯದಲ್ಲಿ ಮನೆಯ ಸಮೀಪವಿರುವ ನೇರಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ಅರಿತ ನಗರ ಪೊಲೀಸರು…

ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್
ಕೊಡಗು

ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್

August 10, 2018

ಮಡಿಕೇರಿ: ಭಾರೀ ಮಳೆ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕುಸಿಯುವ ಹಂತ ತಲುಪಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ಹಾಗೂ ತಾಳತ್ತಮನೆ ಜಂಕ್ಷನ್ ಬಳಿ ರಸ್ತೆಯನ್ನು ಬಂದ್ ಮಾಡಿದ್ದು, ಎಲ್ಲಾ ರೀತಿಯ ವಾಹನಗಳನ್ನು ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆಯ ಮೂಲಕ ಮಡಿಕೇರಿಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ರಸ್ತೆ ಸಂಪೂರ್ಣ ಕಿರಿದಾಗಿದ್ದು ಬಸ್‍ಗಳು, ಸರಕು ತುಂಬಿದ ಲಾರಿಗಳ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಲಾರಿಗೆ…

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ
ಕೊಡಗು

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ

August 10, 2018

ಕುಶಾಲನಗರ:  ಸಮೀಪದ ಗುಡ್ಡೆ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಬೀಟೆ ನಾಟಗಳನ್ನು ಸಾಗಿ ಸುತ್ತಿದ್ದ ವೇಳೆ ಆನೆಕಾಡು ಅರಣ್ಯ ಸಿಬ್ಬಂದಿ ದಾಳಿ ಮಾಡಿ, ಲಕ್ಷಾಂತರ ಮೌಲ್ಯದ ಬೀಟೆ ನಾಟ ಸೇರಿದಂತೆ ವಾಹನವನ್ನು ವಶ ಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮಡಿಕೇರಿ-ಮೈಸೂರು ರಾಜ್ಯ ಹೆದ್ದಾ ರಿಯ ಆನೆಕಾಡು ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಹಾಗೂ ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ರಂಜನ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಾಹನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ…

ಮಳೆ ಹಾನಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವಂತೆ ಎಂಎಲ್‍ಸಿ ಸುನೀಲ್ ಸುಬ್ರಮಣಿ ಆಗ್ರಹ
ಕೊಡಗು

ಮಳೆ ಹಾನಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವಂತೆ ಎಂಎಲ್‍ಸಿ ಸುನೀಲ್ ಸುಬ್ರಮಣಿ ಆಗ್ರಹ

August 10, 2018

ಮಡಿಕೇರಿ: ತೀವ್ರ ಮಳೆ ಯಿಂದಾಗಿ ಕೊಡಗು ಜಿಲ್ಲೆಗೆ ಭಾರೀ ನಷ್ಟ ಸಂಭವಿಸಿದ್ದು, ರಾಜ್ಯ ಸರಕಾರ ಜಿಲ್ಲೆಯ ನೆರವಿಗೆ ಧಾವಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಆಗ್ರಹಿಸಿದ್ದಾರೆ. ಮಳೆಯಿಂದ ಹಾನಿಗೊಳಗಾದ ಮಂಗಳದೇವಿ ನಗರ, ಮಂಗಳೂರು ರಸ್ತೆ, ಮೇಕೇರಿ-ಮೂರ್ನಾಡು ಬೈ ಪಾಸ್ ರಸ್ತೆಯಲ್ಲಿ ವಾಹನ ಸಂಚಾರದ ಸ್ಥಿತಿಗತಿಗಳ ಕುರಿತು ಸುನೀಲ್ ಸುಬ್ರಮಣಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳೊಂದಿಗೆ ಚರ್ಚಿಸಿದ ಸುನೀಲ್ ಸುಬ್ರಮಣಿ, ರಸ್ತೆಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು. ಮಂಗಳೂರು…

ಸ್ಥಳೀಯ ಸಂಸ್ಥೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ
ಕೊಡಗು

ಸ್ಥಳೀಯ ಸಂಸ್ಥೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

August 10, 2018

ಮಡಿಕೇರಿ: ಸೋಮವಾರಪೇಟೆ, ಕುಶಾಲನಗರ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕಾ ಪ್ರಕ್ರಿಯೆಯು ಆಗಸ್ಟ್ 10 ರಿಂದ ಆರಂಭವಾಗಲಿದೆ. ಆಗಸ್ಟ್ 10 ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿ ಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 17 ರಂದು ನಾಮಪತ್ರ ಸಲ್ಲಿ ಸಲು ಕೊನೆ ದಿನವಾಗಿದೆ. ಆಗಸ್ಟ್ 18 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಆಗಸ್ಟ್ 20 ರಂದು ಉಮೇ ದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ, ಆಗಸ್ಟ್ 29…

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ
ಕೊಡಗು

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ

August 10, 2018

ಗೋಣಿಕೊಪ್ಪಲು: ಅಮ್ಮತ್ತಿ-ಸಿದ್ದಾಪುರ ಮುಖ್ಯರಸ್ತೆ ಅಡ್ಡವಾಗಿ ಮರ ಬಿದ್ದು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮ್ಮತ್ತಿಯಿಂದ 1 ಕಿ. ಮೀ. ದೂರದಲ್ಲಿ ಮರವೊಂದು ಅಡ್ಡವಾಗಿ ಬಿದ್ದು, ವಾಹನ ಸಂಚರಿಸದೆ ತೊಂದರೆ ಉಂಟಾಯಿತು. ಸುಮಾರು 1 ಗಂಟೆಗಳ ಕಾಲ ರಸ್ತೆ ಉದ್ದಕ್ಕೂ ವಾಹನಗಳು ಸಾಲಾಗಿ ನಿಂತಿದ್ದವು. ನಂತರ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

1 142 143 144 145 146 187
Translate »