ಕೊಡಗು

ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ
ಕೊಡಗು

ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ

August 9, 2018

ಮಡಿಕೇರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದೆ. ಬಿರುಗಾಳಿ ಸಹಿತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂ ದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನದಿ ತೊರೆಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಕಳೆದ ಒಂದು ವಾರದಿಂದ ಮಳೆ ಕೊಂಚ ಬಿಡುವ ನೀಡಿದ್ದರಿಂದ ಜನತೆ ಅಲ್ಪ ನಿರಾಳರಾಗಿ ನಿಟ್ಟುಸಿರು ಬಿಡುತ್ತಿದ್ದಂತೆಯೇ ಆಶ್ಲೇಷ ಮಳೆ ಆರ್ಭಟ ತೋರಿದ್ದು, ಪ್ರಕೃತಿ ವಿಕೋಪಗಳ ಸರ ಣಿಯೂ ಮುಂದುವರಿದಿದೆ. ಈ ಹಿಂದೆ ಸುರಿದ ಆರಿದ್ರ ಮಳೆಯ ರಭಸಕ್ಕೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ…

ಪ್ರತಿಭಾ ಕಾರಂಜಿ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಕೊಡಗು

ಪ್ರತಿಭಾ ಕಾರಂಜಿ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

August 9, 2018

ವಿರಾಜಪೇಟೆ: ವಿದ್ಯಾರ್ಥಿಗಳ ಪ್ರತಿಭೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರ ಪ್ರತಿಭಾ ಕಾರಂಜಿಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು. ವಿರಾಜಪೇಟೆ ಸಮೀಪದ ಹೆಗ್ಗಳ ರಾಮನಗರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಕಲ್ತೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹೇಶ್ ಗಣಪತಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹಿಂದಿನ ದಿನದಲ್ಲಿ ವಿದ್ಯೆ ಕಲಿಯಲು ಇಷ್ಟು ಸೌಕರ್ಯಗಳಿರಲಿಲ್ಲ ದೂರದ ಊರಿಂದ ನಡೆದು ಶಾಲೆಗೆ ಬರಬೇಕಾಗಿತ್ತು…

1.30 ಲಕ್ಷ ಮೌಲ್ಯದ ಶ್ರೀಗಂಧದ ತುಂಡು ವಶ; ಮೂವರ ಬಂಧನ
ಕೊಡಗು

1.30 ಲಕ್ಷ ಮೌಲ್ಯದ ಶ್ರೀಗಂಧದ ತುಂಡು ವಶ; ಮೂವರ ಬಂಧನ

August 9, 2018

ಕುಶಾಲನಗರ: ಸೋ.ಪೇಟೆ ತಾಲೂ ಕಿನ ಯಲಕನೂರು ಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಗಂಧದ ಮರಗಳನ್ನು ಕಡಿದು ನಾಟಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಅರಣ್ಯ ಸಿಬ್ಬಂ ದಿಗಳು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ಪುರದ ದಿ.ಸುಬ್ರಮಣಿ ಎಂಬುವವರ ಮಗ ಎಸ್. ಸಂಪತ್ (30 ವರ್ಷ) ಸೋಮವಾರ ಪೇಟೆ ಆಡಿನಾಡೂರು ಗ್ರಾಮದ ಬೋಜ ಎಂಬುವವರ ಮಗ ಸುರೇಶ್ (35 ವರ್ಷ), ಆನಂದ್ ಎಂಬುವವರ ಮಗ ರಾಮ(45 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿದಂದ ಸುಮಾರು 1.30…

ಕುಟ್ಟದಲ್ಲಿ ಸಂಭ್ರಮದ ಕಕ್ಕಡ ನಮ್ಮೆ
ಕೊಡಗು

ಕುಟ್ಟದಲ್ಲಿ ಸಂಭ್ರಮದ ಕಕ್ಕಡ ನಮ್ಮೆ

August 8, 2018

ಮಡಿಕೇರಿ: ಕೊಡಗಿನ ಗಡಿ ಭಾಗ ಕುಟ್ಟದಲ್ಲಿ ಕುಟ್ಟ ಕೊಡವ ಸಮಾಜ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 6ನೇ ವರ್ಷದ “ಕಕ್ಕಡ ನಮ್ಮೆ”ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕೊಡವ ಸಮಾಜದಲ್ಲಿ ನಡೆದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಪ್ರತಿಯೊಂದು ಸಂಸ್ಕøತಿ ಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಅಗತ್ಯವಿದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ಮತ್ತು ಪರಿಚಯಿಸುವ ಇಂತಹ ಕಾರ್ಯ ಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು, ಅಲ್ಲದೆ ಮಹಿಳೆಯರು…

ಕುಟ್ಟ ಬಳಿ ಹುಲಿ ದಾಳಿಗೆ ಹಸು ಬಲಿ
ಕೊಡಗು

ಕುಟ್ಟ ಬಳಿ ಹುಲಿ ದಾಳಿಗೆ ಹಸು ಬಲಿ

August 8, 2018

ಗೋಣಿಕೊಪ್ಪಲು: ದಕ್ಷಿಣ ಕೊಡ ಗಿನ ಕುಟ್ಟ ಪಂಚಾಯ್ತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಹುಲಿ ದಾಳಿ ನಡೆದಿದ್ದು, ಹಸುವೊಂದು ಬಲಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ರೈತ ಮುಂಡುಮಾಡ ಅಯ್ಯಣ್ಣ ಎಂಬುವರ ಹಸು ಕಾಣೆಯಾಗಿತ್ತು. ಈ ಬಗ್ಗೆ ಸಮೀಪದ ತೋಟದಲ್ಲಿ ಹುಡುಕಾಟ ನಡೆಸಿ ದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ರೈತ ಸಂಘದ ಮುಖಂಡ ರಾದ ಅಜ್ಜಮಾಡ ಚಂಗಪ್ಪ, ಅರಣ್ಯ ಹಿರಿಯ ಅಧಿಕಾರಿಗಳಾದ ಡಿಸಿಎಫ್ ಜಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹುಲಿ ದಾಳಿಯ ಬಗ್ಗೆ ಮಾಹಿತಿ…

ಇಬ್ಬರು ಬೇಟೆಗಾರರ ಬಂಧನ
ಕೊಡಗು

ಇಬ್ಬರು ಬೇಟೆಗಾರರ ಬಂಧನ

August 8, 2018

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿ ರಕ್ಷಿತಾರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿಯನ್ನು ಭೇಟಿಯಾಡಲು ಯತ್ನಿಸುತ್ತಿದ್ದ ಇಬ್ಬರು ಬೇಟೆಗಾರರನ್ನು ಭಾಗಮಂಡಲ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮ ನಿವಾಸಿಗಳಾದ ಪದ್ಮಯ್ಯ ಮತ್ತು ರೋಹಿತ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಪದ್ಮಯ್ಯ ಮತ್ತು ರೋಹಿತ್ ಚೇರಂಗಾಲ ಸಮೀಪದ ಕೋಳಿಕಾಡು ಎಂಬಲ್ಲಿ ಕಾಡು ಪ್ರಾಣಿಯನ್ನು ಭೇಟಿಯಾಡಲು ಹೊಂಚು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಾಗಮಂಡಲ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು…

ಕಿಡಿಗೇಡಿಗಳಿಂದ ಕುಡಿಯುವ ನೀರಿಗೆ ಸಂಚಕಾರ
ಕೊಡಗು

ಕಿಡಿಗೇಡಿಗಳಿಂದ ಕುಡಿಯುವ ನೀರಿಗೆ ಸಂಚಕಾರ

August 8, 2018

ಗೋಣಿಕೊಪ್ಪಲು:  ಕಣ್ಣಂಗಾಲ ಗ್ರಾಪಂ ವ್ಯಾಪ್ತಿಯ ದೇವರಮೊಟ್ಟೆ ಪೈಸಾರಿಯ ಸಾರ್ವಜನಿ ಕರ ಕುಡಿಯುವ ನೀರಿನ ಸರಬರಾಜು ಪೈಪ್‍ಲೈನ್ ಅನ್ನು ಆಗಿಂದ್ದಾಗ್ಗೆ ಕಿಡಿಗೇಡಿಗಳು ಒಡೆದು ಹಾಕುತ್ತಿರುವ ಹಿನ್ನಲೆಯಲ್ಲಿ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಈ ಬಗ್ಗೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಅಮ್ಮತ್ತಿ ಉಪ ಠಾಣೆಯ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನಿರಂತರವಾಗಿ ಈ ಭಾಗದ ಜನರನ್ನು ಗುರಿಯಾಗಿ ಇಟ್ಟುಕೊಂಡಿರುವ ಕೆಲವು ಕಿಡಿಗೇಡಿಗಳು ಈ ರೀತಿ ಪೈಪ್ ಲೈನ್‍ಅನ್ನು ಹಾಳು ಮಾಡುತ್ತಿದ್ದು ಈ ಪೈಪ್ ಲೈನ್ ದುರಸ್ಥಿಗಾಗಿ ಸಾಕಷ್ಟು…

ಹಾರಂಗಿ ನಾಲೆಯಲ್ಲಿ ವ್ಯಾನ್ ಮುಳುಗಿ ಸಾವನ್ನಪ್ಪಿದ್ದ ಒಂದೇ  ಕುಟುಂಬದ ನಾಲ್ವರ ಅಂತ್ಯಕ್ರಿಯೆ
ಕೊಡಗು

ಹಾರಂಗಿ ನಾಲೆಯಲ್ಲಿ ವ್ಯಾನ್ ಮುಳುಗಿ ಸಾವನ್ನಪ್ಪಿದ್ದ ಒಂದೇ  ಕುಟುಂಬದ ನಾಲ್ವರ ಅಂತ್ಯಕ್ರಿಯೆ

August 8, 2018

ನಾಪೋಕ್ಲು:  ಕುಶಾಲನಗರದ ಸಮೀಪ ಹಾರಂಗಿ ನಾಲೆಯಲ್ಲಿ ಮುಳುಗಿ ಮೃತ ಪಟ್ಟ ಇಲ್ಲಿನ ಇಂದಿರಾನಗರದ ನಿವಾಸಿ ಪಳನಿಸ್ವಾಮಿ ಮತ್ತು. ಕುಟುಂಬದ ನಾಲ್ವರ ಅಂತ್ಯಕ್ರಿಯೆಯು ನಾಪೋಕ್ಲು ಕಾವೇರಿ ನದಿ ತೀರದ ಹಿಂದು ರುದ್ರಭೂಮಿಯಲ್ಲಿ ಮಧ್ಯಾಹ್ನ ನೆರವೇರಿತು. ಈ ಸಂದರ್ಭದಲ್ಲಿ ನಾಪೋಕ್ಲು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿ ಮೃತರಿಗೆ ಸಂತಾಪ ಸೂಚಿಸಲಾಯಿತು. ಜನಪ್ರತಿನಿಧಿಗಳು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಬೆಳಿಗ್ಗೆ ನಾಪೋಕ್ಲು ವಿನಿಂದ ತಮ್ಮ ತಾಯಿಯ ಊರಾದ ಮುತ್ತಿನ ಮುಳ್ಳುಸೋಗೆ ಗ್ರಾಮಕ್ಕೆ ಪಳನೀಸ್ವಾಮಿ ತಮ್ಮ ಒಮ್ನಿ…

ಬೆಂಗಳೂರಲ್ಲಿ ನಾಳೆ ಸಿಎನ್‍ಸಿ ಸತ್ಯಾಗ್ರಹ
ಕೊಡಗು

ಬೆಂಗಳೂರಲ್ಲಿ ನಾಳೆ ಸಿಎನ್‍ಸಿ ಸತ್ಯಾಗ್ರಹ

August 8, 2018

ಮಡಿಕೇರಿ:  ಸ್ವಾಯತ್ತ ಕೊಡವ ಲ್ಯಾಂಡ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶ್ವ ಆದಿಮಸಂಜಾತ ಜನಾಂಗಗಳ ಹಕ್ಕುಗಳ ದಿನವಾದ ಆ.9ರಂದು ಬೆಂಗಳೂರು ಟೌನ್ ಹಾಲ್ ಮುಂಭಾಗದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವರ ಪ್ರಧಾನ ಭೂ- ರಾಜಕೀಯ ಲ್ಯಾಂಡ್ ಸ್ವಾಯ ತ್ತತೆ ಅನ್ವೇಷಣೆ (ಕೊಡವ ಕ್ವೆಸ್ಟ್ ಫಾರ್ ಅಟೋನಮಿ) ಕೇಂದ್ರಾಡಳಿತ ಪ್ರದೇಶ…

ಕೃಷಿಯಲ್ಲಿರುವ ಕೊಡವ ಸಂಸ್ಕೃತಿ ಉಳಿವಿಗೆ ಸಲಹೆ
ಕೊಡಗು

ಕೃಷಿಯಲ್ಲಿರುವ ಕೊಡವ ಸಂಸ್ಕೃತಿ ಉಳಿವಿಗೆ ಸಲಹೆ

August 7, 2018

ಗೋಣಿಕೊಪ್ಪ: ಈ ನೆಲದ ಕೃಷಿಯಲ್ಲಿ ಕೊಡವ ಸಂಸ್ಕೃತಿ ಅಡಗಿದೆ. ಆಚರಣೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮ ಪೂರ್ವಜರು ಕಷ್ಟ ಪಟ್ಟು ಮಾಡಿಟ್ಟಿರುವ ಈ ಭೂಮಿಯನ್ನು ಪರಂಪರೆಯಂತೆ ಕೃಷಿ ಮಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಯುವ ಪೀಳಿಗೆಗಿದೆ. ಗದ್ದೆಯನ್ನು ಪಾಳು ಬಿಡಬಾರದು. ಕೊಡವ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯು ಕೃಷಿಗೆ ಉತ್ತೇಜನ ನೀಡುವಂತಹ ಬೇಲ್ ನಮ್ಮೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ತಿಳಿಸಿದರು. ಕರ್ನಾಟಕ ಕೊಡವ ಸಾಹಿತ್ಯ…

1 143 144 145 146 147 187
Translate »