ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ
ಕೊಡಗು

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ

August 10, 2018

ಗೋಣಿಕೊಪ್ಪಲು: ಅಮ್ಮತ್ತಿ-ಸಿದ್ದಾಪುರ ಮುಖ್ಯರಸ್ತೆ ಅಡ್ಡವಾಗಿ ಮರ ಬಿದ್ದು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮ್ಮತ್ತಿಯಿಂದ 1 ಕಿ. ಮೀ. ದೂರದಲ್ಲಿ ಮರವೊಂದು ಅಡ್ಡವಾಗಿ ಬಿದ್ದು, ವಾಹನ ಸಂಚರಿಸದೆ ತೊಂದರೆ ಉಂಟಾಯಿತು. ಸುಮಾರು 1 ಗಂಟೆಗಳ ಕಾಲ ರಸ್ತೆ ಉದ್ದಕ್ಕೂ ವಾಹನಗಳು ಸಾಲಾಗಿ ನಿಂತಿದ್ದವು. ನಂತರ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

Translate »