ಮಕ್ಕಳಿಗೆ ಉತ್ತಮ ನಡತೆ ಕಲಿಸುವುದು ಪೋಷಕರ ಕರ್ತವ್ಯ
ಕೊಡಗು

ಮಕ್ಕಳಿಗೆ ಉತ್ತಮ ನಡತೆ ಕಲಿಸುವುದು ಪೋಷಕರ ಕರ್ತವ್ಯ

September 1, 2018

ವಿರಾಜಪೇಟೆ: ಮಕ್ಕಳಿಗೆ ಶಿಕ್ಷಣ ದೊಂದಿಗೆ ಉತ್ತಮ ಗುಣ-ನಡತೆಯನ್ನು ಕಲಿಸುವುದು ಪೋಷಕರ ಕರ್ತವ್ಯವಾಗಿದೆ ಎಂದು ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಿದ್ಯಾಸಂಸ್ಥೆಯ ವ್ಯವಸ್ಥಾ ಪಕರಾದ ಮದುಲೈ ಮುತ್ತು ಹೇಳಿದರು.

ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ‘ಪೋಷ ಕರ-ಶಿಕ್ಷಕರ ಸಂಘದ ವಾರ್ಷಿಕ ಮಹಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಫೋನ್ ದೂರ ಇಟ್ಟು ಶಿಸ್ತು, ಛಲದಿಂದ ವಿದ್ಯೆ ಕಲಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾ ಗಬೇಕು. ಪೋಷಕರು ವಿದ್ಯಾರ್ಥಿಗಳಿಗೆ ವಾಹನ ಚಾಲನೆ ಮಾಡಲು ಕೊಡಬೇಡಿ ಎಂದರಲ್ಲದೆ ಮುಂದಿನ ವರ್ಷದಿಂದ ಕಾಲೇ ಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು. ಈ ವರ್ಷ ಮಳೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ನಮ್ಮ ಸಂಸ್ಥೆಯಿಂದ ಪ್ರತಿ ಯೊಬ್ಬರು ಕೈಲಾದಷ್ಟು ಸಹಾಯಧನ ಮಾಡುವುದಾಗಿ ಸಭೆಗೆ ತಿಳಿಸಿದರು.

ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥ ರಾದ ಮಾರ್ಗರೆಟ್ ಲಸ್ತ್ರಾದೋ ಮಾತ ನಾಡಿ, ವಿದ್ಯಾಸಂಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಕ್ರೀಡೆಗೂ ಪ್ರೋತ್ಸಾಹ ನೀಡುವ ಮೂಲಕ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸುವಂತಾಗ ಬೇಕು ಹಾಗೂ ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಪೋಷಕರು ಎಚ್ಚರ ವಹಿಸಬೇಕು ಎಂದರು.

ಈ ವರ್ಷ ನಿವೃತ್ತಗೊಂಡ ಶಿಕ್ಷಕರಿಗೆ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾ ರ್ಥಿಗಳಿಗೆ ಕಿರುಕಾಣಿಕೆ ನೀಡಿ ಪ್ರೋತ್ಸಾಹಿ ಸಲಾಯಿತು. ವೇದಿಕೆಯಲ್ಲಿ ಪಾಲಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಆಶಾ ಸುಬ್ಬಯ್ಯ, ಕಾಲೇಜಿನ ಪ್ರಾಂಶುಪಾಲ ಐಸಾಕ್ ರತ್ನಾಕರ್, ಸಂತ ಅನ್ನಮ್ಮ ದೇವಾ ಲಯದ ಸಹಾಯಕ ಗುರು ರೋಷನ್ ಬಾಬು, ಸಿಸ್ಟರ್ ಜಾನೆಟ್, ಮತ್ತು ಅನ್ನಮೇರಿ ಉಪಸ್ಥಿತರಿದ್ದರು.

ಪಾಲಕ-ಶಿಕ್ಷಕ ಸಂಘದ ಕಾರ್ಯದರ್ಶಿ ಚಾಲ್ರ್ಸ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕರುಗಳಾದ ಬೆನ್ನಿ ಜೋಸೆಫ್ ಸ್ವಾಗತಿಸಿದರು. ಸಲೋಮಿ ಮತ್ತು ದಿವ್ಯಡೀನಾ ನಿರೂಪಿಸಿದರೆ. ಜೋನಾಥನ್ ವಂದಿಸಿದರು.

Translate »