ಕೊಡಗು

ಹಟ್ಟಿಹೊಳೆ-ಮುಕ್ಕೋಡ್ಲುವಿನಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ
ಕೊಡಗು

ಹಟ್ಟಿಹೊಳೆ-ಮುಕ್ಕೋಡ್ಲುವಿನಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ

September 4, 2018

ಮಡಿಕೇರಿ: ಹಟ್ಟಿಹೊಳೆ-ಮುಕ್ಕೋಡ್ಲು ಮಾರ್ಗದಲ್ಲಿ ಭೂಕುಸಿತದೊಂದಿಗೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿ ಹಾನಿಗೀಡಾದ್ದು, ಈ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಕಂದಾಯ ಹಾಗೂ ಇತರ ಇಲಾಖಾ ಅಧಿಕಾರಿಗಳೊಂದಿಗೆ ತೆರಳಿದ ಅವರು ಹದಗೆಟ್ಟ ರಸ್ತೆ, ವಿದ್ಯುತ್ ಸಮಸ್ಯೆ, ಸಾರ್ವಜನಿಕ ಆಸ್ತಿ ಪಾಸ್ತಿಗಳ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಳಿಕ ಗಾಳಿಬೀಡು ಹಾಗೂ ಕೆ. ನಿಡುಗಣೆ ಗ್ರಾ. ಪಂ. ವ್ಯಾಪ್ತಿಯ ದೇವಸ್ತೂರು ಮತ್ತಿತರ ಕಡೆಗಳಿಗೂ ತೆರಳಿ ಪರಿಸ್ಥಿತಿ ವೀಕ್ಷಿಸಿದ ಜಿಲ್ಲಾಧಿಕಾರಿ, ತ್ವರಿತಗತಿ ಯಲ್ಲಿ ಜನತೆಗೆ…

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ಯಶಸ್ವಿ
ಕೊಡಗು

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ಯಶಸ್ವಿ

September 3, 2018

ಮಡಿಕೇರಿ:  ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾ ನದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ ಗೊಂಡಿದೆ. ದೆಹಲಿಯಿಂದ ತಜ್ಞರನ್ನು ಹೊತ್ತು ಬಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಿಮಾನ ಶುಕ್ರವಾರದಂದು 3 ತಾಸುಗಳಷ್ಟು ನಿಲ್ದಾಣದ ಎಲ್ಲಾ ಭಾಗ ಗಳಿಂದಲೂ ಪರೀಕ್ಷಾರ್ಥ ಪ್ರಯೋಗ ನಡೆಸಿ ಮುಂಬರುವ ವಿಮಾನಯಾನ ಸೇವೆಗೆ ಹಸಿರು ನಿಶಾನೆ ತೋರಿಸಿತು. ಇದಕ್ಕೂ ಮೊದಲು ಪೈಲಟ್, ಸಹ ಪೈಲಟ್ ಸೇರಿದಂತೆ 8 ಜನ ತಜ್ಞರ ತಂಡವನ್ನು ಹೊತ್ತ ಎಎಐನ ತಾಂತ್ರಿಕ ವಿಮಾನ ಗುರುವಾರದಂದು ಮಧ್ಯಾಹ್ನ ದೆಹಲಿಯಿಂದ ಹೊರಟು…

ನೋಡಲಾಗದು ಮಕ್ಕಂದೂರು ಗ್ರಾಮದ ಭೀಕರತೆ
ಕೊಡಗು

ನೋಡಲಾಗದು ಮಕ್ಕಂದೂರು ಗ್ರಾಮದ ಭೀಕರತೆ

September 3, 2018

ಮಡಿಕೇರಿ: ಬಾಯ್ಬಿರಿದು ನಿಂತಿರುವ ಬೆಟ್ಟಗಳು.. ಕುಸಿದು ಬಿದ್ದ ಬೃಹತ್ ಬಂಡೆಗಳು.. ರಸ್ತೆಗಳು ಇತ್ತೆಂಬುದಕ್ಕೆ ಸಾಕ್ಷಿಯನ್ನೇ ಉಳಿಸದ ಮಣ್ಣಿನ ರಾಶಿ. ಕಾಫಿ ತೋಟಗಳಿಂದ ಛಿದ್ರಗೊಂಡು ಹಾರಿ ಹರಡಿಕೊಂಡಿರುವ ಕಾಫಿ ಗಿಡಗಳು. ಎಲ್ಲಿ ನೋಡಿದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಗಳ ಅವಶೇಷಗಳು. ಇದು ಮ್ಕಕಂದೂರು ವ್ಯಾಪ್ತಿಯಲ್ಲಿ ಕಂಡು ಬರುವ ಕರಾಳ ಚಿತ್ರಣ.. ಕಾಫಿ ತೋಟಗಳು, ಗದ್ದೆ ಬಯಲುಗಳ ನಡುವೆ ನೆಲೆ ನಿಂತಿದ್ದ ಮಕ್ಕಂದೂರು ಗ್ರಾಮ ವರುಣನ ಮುನಿಸಿಗೆ ಸಂಪೂರ್ಣ ಧ್ವಂಸಗೊಂಡಿದೆ. ಮಡಿಕೇರಿಯಿಂದ ಮಕ್ಕಂ ದೂರು ಜಂಕ್ಷನ್‍ಗೆ ತೆರಳಿ ಅಲ್ಲಿಂದ ತಂತಿ ಪಾಲದ…

ಅತಿವೃಷ್ಟಿ ಪ್ರದೇಶಗಳಿಗೆ ಶಾಸಕರ ಭೇಟಿ
ಕೊಡಗು

ಅತಿವೃಷ್ಟಿ ಪ್ರದೇಶಗಳಿಗೆ ಶಾಸಕರ ಭೇಟಿ

September 3, 2018

ಮಡಿಕೇರಿ: ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಶನಿವಾರ ಹಟ್ಟಿಹೊಳೆ-ಮುಕ್ಕೊಡ್ಲು ರಸ್ತೆ ಸಂಪರ್ಕ ಕಲ್ಪಿಸುವ ಸಂಬಂಧ ಕಾಮಗಾರಿ ಪರಿಶೀಲನೆ ಮಾಡಿ ದರು. ಹಟ್ಟಿಹೊಳೆ, ಮಾದಾಪುರ, ಮುಕ್ಕೊಡ್ಲು ಮತ್ತಿತರ ಕಡೆಗಳಲ್ಲಿ ಪ್ರವಾಹದಿಂದ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಜಿಲ್ಲಾಧಿಕಾರಿ ಭೇಟಿ: ಅತಿವೃಷ್ಟಿ ಪ್ರದೇಶ ಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸುಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರುವ ಸಂತ್ರಸ್ತರನ್ನು ಭೇಟಿ ನೀಡಿ ಮಾತ ನಾಡಿದರು. ಸಂಪಾಜೆ ಸರ್ಕಾರಿ ಆಸ್ಪತ್ರೆ ಹಾಗೂ ಜೋಡುಪಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ…

ಗೋಣಿಕೊಪ್ಪಲು ಬಳಿ ಗಂಧದ ಮರ ಕಳವು
ಕೊಡಗು

ಗೋಣಿಕೊಪ್ಪಲು ಬಳಿ ಗಂಧದ ಮರ ಕಳವು

September 3, 2018

ಗೋಣಿಕೊಪ್ಪಲು: ರಸ್ತೆ ಬದಿ ಯಲ್ಲಿ ಗಂಧದ ಮರ ಕಡಿದು ಹಾಗೆಯೇ ಬಿಟ್ಟು ಹೋಗಿರುವ ಘಟನೆ ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.ಅಲ್ಲಿನ ಮುಕ್ಕಾಟೀರ ಕಾಶಿ ಎಂಬುವ ವರ ಮನೆ ಎದುರಿನ ರಸ್ತೆ ಬದಿಯಲ್ಲಿದ್ದ ಮರವನ್ನು ಕಳ್ಳತನಕ್ಕೆ ಬಂದಿದ್ದ ಕಳ್ಳರು ಕಡಿದು ಹಾಕಿದ್ದರು. ಆದರೆ, ಒಳಗೆ ಸೇಗು ಇಲ್ಲದ ಕಾರಣ ಹಾಗಯೇ ಬಿಟ್ಟುಹೋಗಿ ದ್ದಾರೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ತಂಡ ಪರಿಶೀಲನೆ ನಡೆಸಿ ತುಂಡುಗಳನ್ನು ವಶಕ್ಕೆ ತೆಗೆದುಕೊಂಡರು. ಶನಿವಾರ ತಡರಾತ್ರಿ…

ಸುಂಟಿಕೊಪ್ಪ ಶಾಲೆಯಲ್ಲಿ ಸ್ವಚ್ಛತಾ ಶಪಥ ದಿನಾಚರಣೆ
ಕೊಡಗು

ಸುಂಟಿಕೊಪ್ಪ ಶಾಲೆಯಲ್ಲಿ ಸ್ವಚ್ಛತಾ ಶಪಥ ದಿನಾಚರಣೆ

September 3, 2018

ಸುಂಟಿಕೊಪ್ಪ:  ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾ ಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೆರವಿನೊಂದಿಗೆ ಸೇರಿ ಶಾಲಾ ಮಕ್ಕಳಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಬೆಳೆ ಸುವ ದಿಸೆಯಲ್ಲಿ ಶನಿವಾರ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಸ್ವಚ್ಚತಾ ಶಪಥ ದಿನ’ ಆಚರಿಸಲಾಯಿತು. ಮಕ್ಕಳಿಗೆ ಸ್ವಚ್ಚತೆ ಕುರಿತ ಸಂದೇಶ ನೀಡಿದ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಸೆ.15ರವರೆಗೆ ಶಾಲಾ ಹಂತ ದಲ್ಲಿ ನಡೆಯುವ ‘ಸ್ವಚ್ಚತಾ ಪಖ್ವಾಡ’ ಕಾರ್ಯ ಕ್ರಮದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ…

ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ
ಕೊಡಗು

ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ

September 2, 2018

ಮಡಿಕೇರಿ:  ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಶನಿವಾರ ನಡೆಯಿತು. ಜಿಲ್ಲಾ ಅಂಚೆ ಕಚೇರಿಯ ಸೂಪರಿಡೆಂಟ್ ಎಸ್.ಆರ್.ನಾಗೇಂದ್ರ ಮಾತನಾಡಿ, ಪ್ರತಿ ಗ್ರಾಮೀಣ ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ್ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯು ಸೆಪ್ಟೆಂಬರ್ 1 ರಿಂದ ರಾಷ್ಟ್ರಾ ದ್ಯಂತ ಆರಂಭಗೊಳ್ಳುತ್ತಿದೆ ಎಂದರು. ಆರ್ಥಿಕ ಸ್ವಾಯತ್ತತೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಸರಳ ವ್ಯವಹಾರ…

ಸಂತ್ರಸ್ತರಿಗೆ ಅವರ ಸ್ವಗ್ರಾಮದಲ್ಲೇ ಪುನರ್ವಸತಿ ಕಲ್ಪಿಸಲು ಸಿಎನ್‍ಸಿ ಆಗ್ರಹ
ಕೊಡಗು

ಸಂತ್ರಸ್ತರಿಗೆ ಅವರ ಸ್ವಗ್ರಾಮದಲ್ಲೇ ಪುನರ್ವಸತಿ ಕಲ್ಪಿಸಲು ಸಿಎನ್‍ಸಿ ಆಗ್ರಹ

September 2, 2018

ಮಡಿಕೇರಿ:  ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನು ಒಳಗೊಂಡ ವಾಯುವ್ಯ ಕೊಡಗಿನ 6 ನಾಡುಗಳ 35 ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದವರಿಗೆ ಅದೇ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ತನ್ನ 24ನೇ ವರ್ಷದ ಸಾರ್ವತ್ರಿಕ ಕೈಲ್‍ಪೊವ್ದ್ ಹಬ್ಬದ ಸಂದರ್ಭ ಹಕ್ಕೊತ್ತಾಯವನ್ನು ಮಂಡಿಸಿದೆ. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸಂಘಟನೆಯ ಪ್ರಮುಖರು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿಯ ಮಂದ್‍ನಲ್ಲಿ ಕೈಲ್ ಮುಹೂರ್ತ ಪ್ರಯುಕ್ತ ಕೃಷಿಯುಪಕರಣ, ಬಂದೂಕುಗಳಿಗೆ…

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ನ್ಯಾಕ್ ತಂಡ ಭೇಟಿ
ಕೊಡಗು

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ನ್ಯಾಕ್ ತಂಡ ಭೇಟಿ

September 2, 2018

ಮಡಿಕೇರಿ:  ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಇತ್ತೀಚೆಗೆ ನ್ಯಾಕ್ ಸದಸ್ಯರು ಭೇಟಿ ನೀಡಿ ಮಾನ್ಯತೆಯನ್ನು ಪರಿಶೀಲಿಸಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಕಾಲೇಜಿನ ಜ್ಯೇಷ್ಠತೆಯನ್ನು ಸಮೀಕ್ಷಿಸಲು ಪೂನಾ ಕೊತ್ರೂಡಿನ ಎಂಐಟಿ ವಲ್ಡ್ ಪೀಸ್ ಯುನಿವರ್ಸಿಟಿಯ ಮುಖ್ಯಸ್ಥರಾದ ಡಾ. ಸುಧೀರ್ ಗೌಹಾನೆ ನೇತೃತ್ವದಲ್ಲಿ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ.ವಿದ್ಯಾಧರ್ ರೆಡ್ಡಿ ಐಲೇನಿ, ಆಂಧ್ರ ಪ್ರದೇಶದ ಶ್ರೀಕಾಕುಲಂನ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಮೈಥಿಲಿ ಅವರನ್ನೊಳಗೊಂಡ ಮೂವರು ಸದಸ್ಯರ ತಂಡ ಆಗಮಿಸಿ…

ವಿದ್ಯುತ್ ಮರು ಸಂಪರ್ಕಕ್ಕೆ ಸೆಸ್ಕ್ ಸಮರೋಪಾದಿ ಕಾರ್ಯಾಚರಣೆ
ಕೊಡಗು

ವಿದ್ಯುತ್ ಮರು ಸಂಪರ್ಕಕ್ಕೆ ಸೆಸ್ಕ್ ಸಮರೋಪಾದಿ ಕಾರ್ಯಾಚರಣೆ

September 2, 2018

ಮಡಿಕೇರಿ: ಜಿಲ್ಲೆಯಲ್ಲಿ ಸಂಭ ವಿಸಿದ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿರುವ ಗ್ರಾಮ ಗಳಿಗೆ ಮರು ಸಂಪರ್ಕ ಕಲ್ಪಿಸುವ ನಿಟ್ಟಿ ನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ(ಸೆಸ್ಕ್) ಸಮರೋಪಾದಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಏ.1 ರಿಂದ ಅದರಲ್ಲೂ ವಿಶೇಷವಾಗಿ ಆಗಸ್ಟ್ 15ರ ಬಳಿಕ ಪ್ರಕೃತಿ ವಿಕೋಪದಿಂದ ವಿದ್ಯುತ್ ವಿತರಣಾ ವ್ಯವ ಸ್ಥೆಯಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ವಿದ್ಯುತ್ ಕಂಬಗಳು ತುಂಡಾಗಿ ಪರಿ ವರ್ತಕಗಳು ವಿಫಲಗೊಂಡು, ವಿದ್ಯುತ್ ಪರಿಕರಗಳು ಮಳೆಯಿಂದ ಕೊಚ್ಚಿ ಹೋಗಿ ಸುಮಾರು 5…

1 132 133 134 135 136 187
Translate »