ಅತಿವೃಷ್ಟಿ ಪ್ರದೇಶಗಳಿಗೆ ಶಾಸಕರ ಭೇಟಿ
ಕೊಡಗು

ಅತಿವೃಷ್ಟಿ ಪ್ರದೇಶಗಳಿಗೆ ಶಾಸಕರ ಭೇಟಿ

September 3, 2018

ಮಡಿಕೇರಿ: ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಶನಿವಾರ ಹಟ್ಟಿಹೊಳೆ-ಮುಕ್ಕೊಡ್ಲು ರಸ್ತೆ ಸಂಪರ್ಕ ಕಲ್ಪಿಸುವ ಸಂಬಂಧ ಕಾಮಗಾರಿ ಪರಿಶೀಲನೆ ಮಾಡಿ ದರು. ಹಟ್ಟಿಹೊಳೆ, ಮಾದಾಪುರ, ಮುಕ್ಕೊಡ್ಲು ಮತ್ತಿತರ ಕಡೆಗಳಲ್ಲಿ ಪ್ರವಾಹದಿಂದ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಜಿಲ್ಲಾಧಿಕಾರಿ ಭೇಟಿ: ಅತಿವೃಷ್ಟಿ ಪ್ರದೇಶ ಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸುಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರುವ ಸಂತ್ರಸ್ತರನ್ನು ಭೇಟಿ ನೀಡಿ ಮಾತ ನಾಡಿದರು. ಸಂಪಾಜೆ ಸರ್ಕಾರಿ ಆಸ್ಪತ್ರೆ ಹಾಗೂ ಜೋಡುಪಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ವೀಕ್ಷಣೆ ಮಾಡಿದರು.

Translate »