ಗೋಣಿಕೊಪ್ಪಲು ಬಳಿ ಗಂಧದ ಮರ ಕಳವು
ಕೊಡಗು

ಗೋಣಿಕೊಪ್ಪಲು ಬಳಿ ಗಂಧದ ಮರ ಕಳವು

September 3, 2018

ಗೋಣಿಕೊಪ್ಪಲು: ರಸ್ತೆ ಬದಿ ಯಲ್ಲಿ ಗಂಧದ ಮರ ಕಡಿದು ಹಾಗೆಯೇ ಬಿಟ್ಟು ಹೋಗಿರುವ ಘಟನೆ ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.ಅಲ್ಲಿನ ಮುಕ್ಕಾಟೀರ ಕಾಶಿ ಎಂಬುವ ವರ ಮನೆ ಎದುರಿನ ರಸ್ತೆ ಬದಿಯಲ್ಲಿದ್ದ ಮರವನ್ನು ಕಳ್ಳತನಕ್ಕೆ ಬಂದಿದ್ದ ಕಳ್ಳರು ಕಡಿದು ಹಾಕಿದ್ದರು. ಆದರೆ, ಒಳಗೆ ಸೇಗು ಇಲ್ಲದ ಕಾರಣ ಹಾಗಯೇ ಬಿಟ್ಟುಹೋಗಿ ದ್ದಾರೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ತಂಡ ಪರಿಶೀಲನೆ ನಡೆಸಿ ತುಂಡುಗಳನ್ನು ವಶಕ್ಕೆ ತೆಗೆದುಕೊಂಡರು. ಶನಿವಾರ ತಡರಾತ್ರಿ ಕೂಡ ಸ್ಥಳಕ್ಕೆ ತೆರಳಿ ಕಳ್ಳರ ಬಗ್ಗೆ ಪರಿಶೀಲನೆ ನಡೆಸಿದರು.

ಮರ 30 ಸೆ.ಮೀ. ಅಳತೆಯಷ್ಟು ಮಾತ್ರ ಇದೆ. ಅದರಲ್ಲಿ ಏನು ಇಲ್ಲ ಎಂದು ವಲಯ ಅರಣ್ಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅಂಚಿನಲ್ಲಿರುವ ಈ ಗ್ರಾಮದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿರುವ ಬಗ್ಗೆ ಕಾರ್ಮಾಡು ಗ್ರಾಮ ಸಭೆಯಲ್ಲಿ ಆರೋಪಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

Translate »