ವಿದ್ಯುತ್ ಮರು ಸಂಪರ್ಕಕ್ಕೆ ಸೆಸ್ಕ್ ಸಮರೋಪಾದಿ ಕಾರ್ಯಾಚರಣೆ
ಕೊಡಗು

ವಿದ್ಯುತ್ ಮರು ಸಂಪರ್ಕಕ್ಕೆ ಸೆಸ್ಕ್ ಸಮರೋಪಾದಿ ಕಾರ್ಯಾಚರಣೆ

September 2, 2018

ಮಡಿಕೇರಿ: ಜಿಲ್ಲೆಯಲ್ಲಿ ಸಂಭ ವಿಸಿದ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿರುವ ಗ್ರಾಮ ಗಳಿಗೆ ಮರು ಸಂಪರ್ಕ ಕಲ್ಪಿಸುವ ನಿಟ್ಟಿ ನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ(ಸೆಸ್ಕ್) ಸಮರೋಪಾದಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿ ಏ.1 ರಿಂದ ಅದರಲ್ಲೂ ವಿಶೇಷವಾಗಿ ಆಗಸ್ಟ್ 15ರ ಬಳಿಕ ಪ್ರಕೃತಿ ವಿಕೋಪದಿಂದ ವಿದ್ಯುತ್ ವಿತರಣಾ ವ್ಯವ ಸ್ಥೆಯಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ವಿದ್ಯುತ್ ಕಂಬಗಳು ತುಂಡಾಗಿ ಪರಿ ವರ್ತಕಗಳು ವಿಫಲಗೊಂಡು, ವಿದ್ಯುತ್ ಪರಿಕರಗಳು ಮಳೆಯಿಂದ ಕೊಚ್ಚಿ ಹೋಗಿ ಸುಮಾರು 5 ಕೋಟಿ ರೂ.ಗೂ ಹೆಚ್ಚಿನ ಹಾನಿ ಸಂಭವಿಸಿತ್ತು.

ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 3641 ವಿದ್ಯುತ್ ಕಂಬಗಳು ಹಾನಿಗೆ ಒಳಗಾಗಿದ್ದು, ಈ ಪೈಕಿ 3026 ಕಂಬಗಳನ್ನು ಮರುಸ್ಥಾಪನೆ ಮಾಡಲಾ ಗಿದೆ. 284 ಪರಿವರ್ತಕಗಳ ಪೈಕಿ 227 ಪರಿವರ್ತಕಗಳನ್ನು ಮರು ಅಳವಡಿಸಲಾ ಗಿದ್ದು, 61.66 ಕಿ.ಮೀ.ನಷ್ಟು ಹಾನಿಗೊಳ ಗಾದ ವಿದ್ಯುತ್ ಮಾರ್ಗದ ಪೈಕಿ, 42.13 ಕಿ.ಮೀ. ವಿದ್ಯುತ್ ಮಾರ್ಗವನ್ನು ಬದ ಲಾಯಿಸಲಾಗಿದೆ.

ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿಯಿಂದ ಮಡಿಕೇರಿ ತಾಲೂಕಿನ 49, ಸೋಮವಾರ ಪೇಟೆ ತಾಲೂಕಿನ 48 ಹಾಗೂ ವೀರಾಜ ಪೇಟೆ ತಾಲೂಕಿನ 43 ಗ್ರಾಮ ಮತ್ತು ಉಪ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಹಾನಿಯುಂಟಾಗಿತ್ತು. ಈ ಪೈಕಿ ಮಡಿಕೇರಿ ತಾಲೂಕಿನ 16 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಬಾಕಿ ಉಳಿದಿವೆ. ಈ ಪೈಕಿ ಸಂಪಾಜೆ, ಜೋಡು ಪಾಲ, ಮದೆನಾಡು ಮತ್ತು ದೇವರಕೊಲ್ಲಿ ವಿಭಾಗ ಗಳಿಗೆ ಸುಳ್ಯ ಭಾಗದಿಂದ ಮಂಗಳೂರು ವಿದ್ಯುತ್ ಸರಬರಾಜು ನಿಗ ಮದ ಸಹಕಾರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ.

ಸೋಮವಾರಪೇಟೆಯ 7 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಬಾಕಿ ಉಳಿದಿವೆ. ರಸ್ತೆ ಮತ್ತು ಇತರ ಸಂಪರ್ಕ ವ್ಯವಸ್ಥೆಯ ಕೊರತೆಯಿಂದಾಗಿ ಸಿಮೆಂಟ್ ವಿದ್ಯುತ್ ಕಂಬಗಳನ್ನು ಸಾಗಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಉಪ ವಿಭಾಗದಿಂದ 79 ಕಬ್ಬಿಣದ ಏಣಿ ಮಾದರಿಯ (ಲ್ಯಾಡರ್) ಕಂಬಗಳನ್ನು ತರಿಸಿಕೊಳ್ಳಲಾಗಿದ್ದು, ಸಾಧ್ಯವಾದ ಪ್ರದೇಶಗಳ ಮೂಲಕ ಈ ಕಂಬಗಳನ್ನು ಹೊತ್ತೊಯ್ದು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ.

ವೀರಾಜಪೇಟೆ ತಾಲೂಕಿನಲ್ಲಿ 43 ಗ್ರಾಮ, ಉಪ ಗ್ರಾಮ ಗಳಲ್ಲಿ ವಿದ್ಯುತ್ ಸಂಪರ್ಕ ತೀವ್ರ ಹಾನಿಗೊಳಗಾಗಿದ್ದು, ಈ ಪೈಕಿ ಬಹುತೇಕ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಪುನರ್ ಸ್ಥಾಪಿಸಲಾಗಿದೆ.

Translate »