ಶಿಕ್ಷಣ ಪದವಿಗೆ ಮಾತ್ರ ಸೀಮಿತವಾಗಬಾರದು
ಮೈಸೂರು

ಶಿಕ್ಷಣ ಪದವಿಗೆ ಮಾತ್ರ ಸೀಮಿತವಾಗಬಾರದು

September 2, 2018

ಮೈಸೂರು: ಶಿಕ್ಷಣ ಪದವಿ ಪ್ರಮಾಣ ಪತ್ರಗಳಿಗೆ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಎಲ್ಲೆಡೆ ಬಿತ್ತಬೇಕು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶಾತ್ಮಾನಂದ ಹೇಳಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಶನಿವಾರ ಮೈಸೂರು ವೈದ್ಯಕೀಯ ಕಾಲೇಜು ಅಮೃತಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕೇವಲ ಪ್ರಮಾಣ ಪತ್ರ ಪಡೆಯಲು ಸೀಮಿತ ವಾಗಿದ್ದು, ವಿದ್ಯಾರ್ಥಿಗಳು ಸಮಾಜದಲ್ಲಿ ರುವ ಮಾನವೀಯ ಸಂಬಂಧ ಬೆಳೆಸಿ ಕೊಳ್ಳವುದರಲ್ಲಿ ಹಿಂದೆ ಬಿದ್ದಿದ್ದಾರೆ. ನೊಂದ ವರ ಪರ ಮಾನವೀಯ ಕಳಕಳಿ ಮರೆ ಯಾಗಿದೆ. ಸಮಾಜ ವೈಜ್ಞಾನಿಕವಾಗಿ ಬೆಳೆಯುತ್ತಿದೆ. ಆದರೆ, ಮನುಷ್ಯ ಮನು ಷ್ಯನ ನಡುವಿನ ಸಂಬಂಧಗಳ ಮೌಲ್ಯ ಕುಸಿಯುತ್ತಿವೆ. ಮೌಲ್ಯಗಳನ್ನು ನೀಡಬೇಕಾ ಗಿರುವ ಶಿಕ್ಷಣ ಇದರ ವಿರುದ್ಧ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಗೈನಲ್ಲಿ ಮೊಬೈಲ್ ಹಿಡಿದು ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಇತರರ ಮುಖ ನೋಡು ತ್ತೇವೆ. ಆದರೆ ಅವರು ಎದುರಿಗೆ ಬಂದರೆ ಮುಖತಿರುಗಿಸಿಕೊಳ್ಳುತ್ತೇವೆ. ವಾಟ್ಸಾಪ್ ನಲ್ಲಿ ಹಾಯ್ ಬಾಯ್ ಮಾಡುತ್ತೇವೆ. ಆದರೆ, ನೇರವಾಗಿ ಯಾರನ್ನೂ ಬೇಟಿ ಮಾಡಿ ಅವರ ಕಷ್ಟ-ಸುಖ ವಿಚಾರಿಸಲು ಹಿಂದೇಟು ಹಾಕುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವೈದ್ಯಕೀಯ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಮೈಸೂರು ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ಸಿ.ಪಿ.ನಂಜರಾಜ್, ಪ್ರಾಂಶುಪಾಲೆ ಡಾ.ಕೆ.ಆರ್. ದಾಕ್ಷಾಯಿಣಿ, ಡಾ.ಬಿ.ಎಸ್.ಮಂಜು ನಾಥ್, ಡಾ.ಎಂ.ಎ.ಶೇಖರ್, ಡಾ.ಬಿ.ಎನ್. ಆನಂದ ರವಿ, ಡಾ.ಬಿ.ಮಲ್ಲಿಕಾ ಇದ್ದರು.

Translate »