ನಾಳೆ ಮತ ಎಣಿಕೆ: ಜಿಲ್ಲಾಡಳಿತದಿಂದ ಸಿದ್ಧತೆ
ಹಾಸನ

ನಾಳೆ ಮತ ಎಣಿಕೆ: ಜಿಲ್ಲಾಡಳಿತದಿಂದ ಸಿದ್ಧತೆ

September 2, 2018

ಹಾಸನ: ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯ ಗೊಂಡಿದೆ. ಸೆ.3ರಂದು ನಡೆಯುವ ಆಯಾಯ ತಾಲೂಕು ಕೇಂದ್ರಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾ ಡಳಿತ ಸಿದ್ಧತೆ ಪೂರ್ಣಗೊಳಿಸಿದೆ.

ಎಣೀಕೆ ಎಲ್ಲೆಲ್ಲಿ: ಹಾಸನ ನಗರ ಸಭೆ ಚುನಾ ವಣೆಯ ಮತ ಎಣಿಕೆ ಮಹಿಳಾ ಪದವಿ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ 5 ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅರಸೀಕೆರೆ ನಗರ ಸಭೆ ಚುನಾವಣೆಯ ಮತ ಎಣಿಕೆಯು ವಿವೇಕಾನಂದ ಶಿಕ್ಷಣ ಕಾಲೇಜಿನಲ್ಲಿ, ಚನ್ನರಾಯಪಟ್ಟಣ ಪುರ ಸಭೆಯ ಚುನಾವಣೆಯ ಮತ ಎಣಿಕೆಯು ನವೋದಯ ಪದವಿ ಪೂರ್ವ ಕಾಲೇಜಿ ನಲ್ಲಿ ಹೊಳೆನರಸೀಪುರ ಪುರಸಭೆಯ ಚುನಾವಣೆಯ ಮತ ಎಣಿಕೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಸಕ ಲೇಶಪುಪುರ ಪುರಸಭೆಯ ಮತ ಎಣಿಕೆಯು ಮಿನಿ ವಿಧಾನ ಸೌಧದಲ್ಲಿ ನಡೆಯಲಿದೆ.

ಟೇಬಲ್‍ಗಳ ಸಂಖ್ಯೆ:ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ 36 ಟೇಬಲ್‍ಗಳಲ್ಲಿ ನಡೆಯಲಿದ್ದು, ಹಾಸನ ನಗರಸಭೆ 10 ಟೇಬಲ್‍ಗಳಲ್ಲಿ, ಅರಸೀಕೆರೆ ನಗರಸಭೆ 8 ಟೇಬಲ್, ಹಾಗೂ ಚನ್ನರಾಯಪಟ್ಟಣ ಹೊಳೇನರಸೀಪುರ ಮತ್ತು ಸಕಲೇಶಪುರ ಪುರಸಭೆಗಳ ಚುನಾ ವಣೆ ಮತ ಎಣಿಕೆ ತಲಾ 6 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಹಾಸನ 35, ಅರಸೀಕೆರೆ 31, ಹೊಳೆನರ ಸೀಪುರ, ಚನ್ನರಾಯಪಟ್ಟಣ, ಮತ್ತು ಸಕ ಲೇಶಪುರ ಪುರಸಭೆಗಳಲ್ಲಿ 23 ವಾರ್ಡ್ ಗಳಿಗೆ ಮತದಾನ ನಡೆದಿದ್ದು, ಒಟ್ಟಾರೆ 5 ಸ್ಥಳೀಯ ಸಂಸ್ಥೆಗಳ 135 ವಾರ್ಡ್ ಗಳಿಂದ 486 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಸೆ.3ರಂದು ಎಲ್ಲರ ಭವಿಷ್ಯ ನಿರ್ಧಾರ ವಾಗಲಿದೆ. ವಿದ್ಯುನ್ಮಾನ ಮತಯಂತ್ರ ಗಳನ್ನು ಬಳಸಿರುವುದರಿಂದ ಮತ ಎಣಿಕೆ ಪ್ರಾರಂಭಿಸಿದ 1-2 ಗಂಟೆಯೊಳಗೆ ಎಲ್ಲಾ ಸ್ಥಳೀಯ ಸದಸ್ಯರ ಮತ ಎಣಿಕೆ ಪೂರ್ಣಗೊಳ್ಳಲಿದೆ.

Translate »