ಕುಂಬಾರಗುಂಡಿ ರಸ್ತೆ ಸಂಪರ್ಕ ಕಡಿತ ಸಂಚಾರ ಅಸ್ತವ್ಯಸ್ತ, ರಸ್ತೆ ನಿರ್ಮಾಣಕ್ಕೆ ಒತ್ತಾಯ
ಕೊಡಗು

ಕುಂಬಾರಗುಂಡಿ ರಸ್ತೆ ಸಂಪರ್ಕ ಕಡಿತ ಸಂಚಾರ ಅಸ್ತವ್ಯಸ್ತ, ರಸ್ತೆ ನಿರ್ಮಾಣಕ್ಕೆ ಒತ್ತಾಯ

September 2, 2018

ಸಿದ್ದಾಪುರ:  ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿ ಹೋಗಿದ್ದು, ಸಂಚಾರ ಕಡಿತಗೊಂಡಿದೆ. ನೆಲ್ಯಹುದಿಕೇರಿ 3ನೇ ವಾರ್ಡ್‍ನಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಕಾರ್ಮಿ ಕರು, ವಿದ್ಯಾರ್ಥಿಗಳು ಕುಂಬಾರ ಗುಂಡಿಗೆ ಹಳ್ಳ ಕೊಳ್ಳಗಳಂತ್ತಾಗಿರುವ ರಸ್ತೆಯಲ್ಲಿ ಎರಡು ಕಿಲೋಮೀಟರ್ ನಡೆದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ವರ್ಷಗಳಿಂದಲೂ ಅಭಿವೃದ್ಧಿ ಕಾಣದ ಗ್ರಾಮ ದಲ್ಲಿ ಇತ್ತೀಚೆಗಷ್ಟೇ ವಿವಿಧ ಯೋಜನೆಯಿಂದ ಗ್ರಾಪಂ ಮೂಲಕ ಒಂದು ಕಿ.ಮೀ.ರಷ್ಟು ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು ಇದೀಗ ಈ ರಸ್ತೆ ಸಂಪೂರ್ಣ ಹಾನಿಯಾಗಿದೆ.

ಇನ್ನೂ 2 ಕಿ.ಮೀ. ರಸ್ತೆ ಗುಂಡಿ ಬಿದ್ದು ಹಲವಡೆ ಕೊಚ್ಚಿ ಹೋಗಿದೆ ಸೇತುವೆಗಳು ಹಾನಿ ಯಾಗಿವೆ. ಕಾರ್ಮಿಕರೇ ಹೆಚ್ಚಾಗಿರುವು ಗ್ರಾಮಕ್ಕೆ ಬಸ್ ಸಂಚಾರವಿಲ್ಲದೆ ದುಬಾರಿ ಹಣ ನೀಡಿ ಜೀಪು, ಆಟೋಗಳಲ್ಲಿ ಪ್ರಯಾ ಣಿಸುತ್ತಿದ್ದ ಜನರಿಗೆ ಈಗ ಯಾವುದೇ ವಾಹನ ಓಡಾಡಲು ಸಾಧ್ಯವಾಗದೆ ಕಾಲ್ನಡಿಗೆಯಲ್ಲಿ ತೆರಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಮಳೆ ಹಾನಿ ಪರಿಹಾರ ನಿಧಿಯಿಂದ ಗ್ರಾಮದ ರಸ್ತೆಗಳನ್ನು ಸರಿಪಡಿಸಬೇಕೆಂದು ನಿವಾಸಿ ಗಳು ಒತ್ತಾಯಿಸಿದ್ದಾರೆ.

Translate »