ಕೊಡಗು

ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜಮೀನು ಕೃಷಿಯೋಗ್ಯ ಮಾಡಲು ಪ್ರಯತ್ನ
ಕೊಡಗು

ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜಮೀನು ಕೃಷಿಯೋಗ್ಯ ಮಾಡಲು ಪ್ರಯತ್ನ

September 7, 2018

ಪೊನ್ನಂಪೇಟೆ: ಉತ್ತರ ಕೊಡಗಿ ನಲ್ಲಿ ಉಂಟಾಗಿರುವ ಭೀಕರ ಪ್ರಕೃತಿ ವಿಕೋ ಪದಿಂದ ಭೂಕುಸಿತ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಾಫಿ ತೋಟ ಮತ್ತು ಕೃಷಿ ಭೂಮಿಗಳು ಹಾನಿಯಾಗಿದ್ದು, ಅವುಗಳನ್ನು ಸೇನಾ ನೆರವು ಪಡೆದು ಕೃಷಿ ಯೋಗ್ಯವಾಗಿ ಮಾಡಲು ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿನ ಸಂತ್ರಸ್ತ ಕೃಷಿಕರು ವಿಚಲಿತರಾಗಿ ಜಾಗವನ್ನು ಮಾರಾಟ ಮಾಡದಂತೆ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಕರೆ ನೀಡಿದ್ದಾರೆ. ಪೊನ್ನಂಪೇಟೆಯ ಕೊಡಗು ವನ್ಯ ಜೀವಿ ಸಂಘದ ಕಛೇರಿಯಲ್ಲಿ…

ನೋವಿನಲ್ಲೂ ಮೊಳಗಿದ ಮಂಗಳವಾದ್ಯ ನೆರೆ ಸಂತ್ರಸ್ತೆಗೆ ಮಾಂಗಲ್ಯ ಭಾಗ್ಯ
ಕೊಡಗು

ನೋವಿನಲ್ಲೂ ಮೊಳಗಿದ ಮಂಗಳವಾದ್ಯ ನೆರೆ ಸಂತ್ರಸ್ತೆಗೆ ಮಾಂಗಲ್ಯ ಭಾಗ್ಯ

September 7, 2018

ಮಡಿಕೇರಿ: ತಾನು ಪ್ರೀತಿಸಿದ ಯುವತಿ ಮನೆ, ತೋಟವನ್ನು ಕಳೆದು ಕೊಂಡು ನಿರಾಶ್ರಿತ ಕೇಂದ್ರ ಪಾಲಾದರೂ ಕೂಡ ಪ್ರಿಯತಮ ಆಕೆಯನ್ನು ವರಿಸುವ ಮೂಲಕ ಮಾನವೀಯತೆಯ ಹೃದಯ ಸ್ಪರ್ಶಿ ಘಟನೆಗೆ ಮಡಿಕೇರಿ ಅಶ್ವಿನಿ ಆಸ್ಪತ್ರೆಯ ಗಣಪತಿ ದೇವಾಲಯ ಸಾಕ್ಷಿಯಾಯಿತು. ಜೋಡುಪಾಲ 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ವಾರಿಜ ಮತ್ತು ಮಹಾರಾಷ್ಟ್ರ ಪುಣೆ ಸಮೀಪದ ಸೊಲ್ಲಾಪುರ ನಿವಾಸಿ ರುದ್ರೇಶ್ ಅವರುಗಳೇ ಪ್ರೇಮ ವಿವಾಹವಾದ ಪ್ರೇಮಿಗಳಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಬದುಕು ಕಟ್ಟಿಕೊಂಡಿದ್ದ ವಾರಿಜ ಮತ್ತು ಬೆಂಗಳೂರಿನ ಖಾಸಗಿ ಆಪ್ಟಿಕಲ್ಸ್(ಕನ್ನಡಕ)…

ಕೊಡಗು ದುರಂತಕ್ಕೆ ಮಾಫಿಯಾ ಕಾರಣ
ಕೊಡಗು

ಕೊಡಗು ದುರಂತಕ್ಕೆ ಮಾಫಿಯಾ ಕಾರಣ

September 7, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿವಿಧ ಮಾಫಿಯಾವೇ ಕಾರಣವೆಂದು ಆರೋಪಿಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಪ್ರೊ.ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನದಿಂದ ಮಾತ್ರ ಮೂಲ ನಿವಾಸಿಗಳ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯ ದರ್ಶಿ ಡಾ.ಬಿ.ಸಿ.ನಂಜಪ್ಪ, ಮತ ಬ್ಯಾಂಕ್, ಟಿಂಬರ್, ಭೂ ಪರಿವರ್ತನೆ, ರೆಸಾರ್ಟ್, ಮರಳು, ಕಲ್ಲು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ವಿರುದ್ಧವಾದ ಮಾಫಿಯಾ ಕೂಟಗಳ ತಪ್ಪಿನಿಂದಾಗಿ ಕೊಡಗು ಈ ದುಸ್ಥಿತಿಗೆ ಬಂದು ತಲುಪಿದ್ದು, ಮೂಲ ನಿವಾಸಿಗಳು ಅಸ್ತಿತ್ವವನ್ನು…

ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವಕ್ಕೆ ನಿರ್ಧಾರ
ಕೊಡಗು

ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವಕ್ಕೆ ನಿರ್ಧಾರ

September 7, 2018

ವಿರಾಜಪೇಟೆ: ವಿರಾಜಪೇಟೆ ಯಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಗೌರಿ-ಗಣೇ ಶೊತ್ಸವನ್ನು ಸರಳ ರೀತಿಯಾಗಿ ಭಕ್ತಿ ಮತ್ತು ಶಾಂತಿಯುತವಾಗಿ ಆಚರಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹ ಕರಿಸಬೇಕು ಎಂದು ವಿರಾಜಪೇಟೆ ಡಿವೈ ಎಸ್‍ಪಿ ನಾಗಪ್ಪ ಹೇಳಿದರು. ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬದ ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಪುರಭವನದಲ್ಲಿ ಗಣಪತಿ ಪ್ರತಿಷ್ಠಾಪನ ಸಮಿತಿ ಗಳು ಹಾಗೂ ಇಲಾಖೆಗಳ ಅಧಿ ಕಾರಿಗಳಿಗೆ ಆಯೋಜಿಸಲಾಗಿದ್ದ ಸಭೆ ಯಲ್ಲಿ ನಾಗಪ್ಪ ಅವರು ಮಾತನಾಡಿ, ಪ್ರತಿ ವರ್ಷವು ಗೌರಿ-ಗಣೇಶೋತ್ಸವವನ್ನು…

ಜೀಪು ಡಿಕ್ಕಿ; ಓರ್ವ ಸಾವು
ಕೊಡಗು

ಜೀಪು ಡಿಕ್ಕಿ; ಓರ್ವ ಸಾವು

September 7, 2018

ಮಡಿಕೇರಿ: ಚಾಲಕನ ನಿಯಂ ತ್ರಣ ಕಳೆದುಕೊಂಡು ಜೀಪೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ನಗರದ ದೇಚೂರು ರಸ್ತೆಯ ಇಳಿ ಜಾರಿನಲ್ಲಿ ವೇಗವಾಗಿ ಬಂದ ಜೀಪು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ತೆರಳುತ್ತಿದ್ದ ಪಶ್ಚಿಮ ಬಂಗಾಳ ಮೂಲಕ ತೌಫಲ್ (45) ಎಂಬುವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೌಫಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಜೀಪು ಮಗುಚಿ ಕೊಂಡಿದೆ. ಜೀಪು ಚಾಲಕನ ವಿರುದ್ದ ಅಜಾಗರೂಕತೆಯ ಚಾಲನೆ ಪ್ರಕರಣ ದಾಖಲಿಸಿ ಕೊಂಡಿರುವ ನಗರ ಸಂಚಾರ…

ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ
ಕೊಡಗು

ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ

September 7, 2018

ಮಡಿಕೇರಿ: ಖಾಸಗಿ ಹಣಕಾಸು ಸಂಘವೊಂದರಲ್ಲಿ ಮಾಡಿದ್ದ ಸಾಲವನ್ನು ಮರುಪಾವತಿಸಲಾಗದೇ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮರಗೋಡು ಗ್ರಾಮದಲ್ಲಿ ನಡೆದಿದೆ. ಮರಗೋಡು ನಿವಾಸಿ ಆಶಾ (34) ಎಂಬುವರೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಆಶಾ ಈ ಹಿಂದೆ ಸಂಘವೊಂದರಿಂದ 2 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದು, 85 ಸಾವಿರ ರೂಪಾಯಿಗಳನ್ನು ಮರುಪಾವತಿಸಿದ್ದರು. ಉಳಿದ 1.15 ಲಕ್ಷ ರೂಪಾಯಿಗಳ ಸಾಲವನ್ನು ಪಾವತಿಸಲು ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣದ ಕುರಿತು…

ವಿರಾಜಪೇಟೆ ತಾಲೂಕನ್ನೂ ಬಿಡಲಿಲ್ಲ ಪ್ರಕೃತಿಯ ಮುನಿಸು: ಅಂಬಟ್ಟಿ ಗ್ರಾಮದಲ್ಲಿ ಮಣ್ಣಿನಡಿ ಮರೆಯಾದ ಮನೆ
ಕೊಡಗು

ವಿರಾಜಪೇಟೆ ತಾಲೂಕನ್ನೂ ಬಿಡಲಿಲ್ಲ ಪ್ರಕೃತಿಯ ಮುನಿಸು: ಅಂಬಟ್ಟಿ ಗ್ರಾಮದಲ್ಲಿ ಮಣ್ಣಿನಡಿ ಮರೆಯಾದ ಮನೆ

September 6, 2018

ಪೊನ್ನಂಪೇಟೆ: ಕೊಡಗಿನಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಕೃತಿಯ ‘ಮಹಾ ದುರಂತ’ದ ಛಾಯೆ ಜಿಲ್ಲೆಯಾದ್ಯಂತ ಪಸರಿಸಿದೆ. ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂ ಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸುವಂತೆ ಪ್ರಕೃತಿಯ ಮಹಾದುರಂತ ಘಟಿಸಿದ್ದರಿಂದ ವಿರಾಜಪೇಟೆ ತಾಲೂಕಿನಲ್ಲಿ ಉಂಟಾದ ದುರಂತದ ಕಪ್ಪುಛಾಯೆ ಹೆಚ್ಚಿನ ಸುದ್ದಿಯಾಗದೆ ಸರಿಯಾಗಿ ಗಮನಸೆಳೆಯಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಳೆದ ತಿಂಗಳು ವಿರಾಜಪೇಟೆ ತಾಲೂಕಿನಲ್ಲಿ ಸಂಭವಿಸಿದ ಪ್ರಕೃತಿ ದುರಂತಗಳು ಇದೀಗ ತಡವಾಗಿ ಬೆಳಕಿಗೆ ಬರುತ್ತಿದ್ದು, ವಾಸದ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಮಣ್ಣಿನಲ್ಲಿ ಮರೆಯಾದ ಘೋರ ಘಟನೆ ವಿರಾಜಪೇಟೆ ಸಮೀಪದ…

ವಿರಾಜಪೇಟೆಯಲ್ಲಿ ಶಿಕ್ಷಕರ ದಿನಾಚರಣೆ
ಕೊಡಗು

ವಿರಾಜಪೇಟೆಯಲ್ಲಿ ಶಿಕ್ಷಕರ ದಿನಾಚರಣೆ

September 6, 2018

ವೀರಾಜಪೇಟೆ:  ವಿದ್ಯಾರ್ಥಿಗಳ ಜೀವನದ ಕನಸನ್ನು ಶಿಕ್ಷಕರುಗಳು ಸಾರ್ಥಕ ಪಡಿಸುವ ಮೂಲಕ ಶಿಸ್ತು ಮತ್ತು ಉತ್ತಮ ನಡತೆಯನ್ನು ನೀಡುವಂತಾಗಬೇಕು ಎಂದು ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧಕ್ಷ ಕಿರಣ್ ಕಾರ್ಯಪ್ಪ ಹೇಳಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ವಿರಾಜ ಪೇಟೆ ತಾಲೂಕು ಶಿಕ್ಷಕರುಗಳಿಗೆ ಪಟ್ಟಣದ ಸಂತ ಅನ್ನಮ್ಮ ಪ್ರೌಢ ಶಾಲಾ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಾ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನ ರೂಪಿಸುವಂತ ಮಹತ್ವವಾದ ಕಾರ್ಯ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡುವಂತಾಗಬೇಕು…

ಮರಕ್ಕೆ ಬೈಕ್ ಡಿಕ್ಕಿ; ಸವಾರ ಸಾವು
ಕೊಡಗು

ಮರಕ್ಕೆ ಬೈಕ್ ಡಿಕ್ಕಿ; ಸವಾರ ಸಾವು

September 6, 2018

ಗೋಣಿಕೊಪ್ಪಲು: ಸವಾರನೊಬ್ಬ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಹುದಿಕೇರಿ ಏಳನೇ ಮೈಲಿನ ನಿವಾಸಿ ದಿ.ನಾಚಪ್ಪನವರ ಮಗ ನೆಲ್ಲಮಾಡ ಚೇತನ್ ರಾಯ್ (31). ಮಂಗಳ ವಾರ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಕೆಲಸ ಮುಗಿಸಿ ಬಾಳೆಲೆಯಿಂದ ಹುದಿಕೇರಿಯ ತನ್ನ ಮನೆಗೆ ಬೈಕ್‍ನಲ್ಲಿ ಬರುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಬೈಕ್ ಮರಕ್ಕೆ ಡಿಕ್ಕಿಯಾದ ರಭಸಕ್ಕೆ ಸಮೀಪದ ಕಾಫಿ ತೋಟದ ಒಳಗೆ ನುಗ್ಗಿ ಬಿದ್ದಿದೆ. ನರಳಾಳುತ್ತಿದ್ದ ಈತನನ್ನು ಗ್ರಾಮಸ್ಥರು ಗಮನಿಸಿ ಕೂಡಲೇ…

ಮೈಸೂರು ಮೂಲದ ಪೌರ ಕಾರ್ಮಿಕರ ಆತ್ಮಹತ್ಯೆ
ಕೊಡಗು

ಮೈಸೂರು ಮೂಲದ ಪೌರ ಕಾರ್ಮಿಕರ ಆತ್ಮಹತ್ಯೆ

September 6, 2018

ಮಡಿಕೇರಿ: ಮಡಿಕೇರಿ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ ಹಿಂಬದಿಯಲ್ಲಿ ವಾಸ ವಾಗಿದ್ದ ಪೌರ ಕಾರ್ಮಿಕರಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳ ಕಿಗೆ ಬಂದಿದೆ. ಮಡಿಕೇರಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸತೀಶ (38) ಮತ್ತು ಉಷಾ(29) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಘಟನೆ ವಿವರ: ಮೂಲತಃ ಮೈಸೂರಿನ ಅಶೋಕಪುರಂನ ಅಂಬೇಡ್ಕರ್ ಕಾಲೋನಿ ನಿವಾಸಿ ಸತೀಶ್ ಮತ್ತು ಹೆಚ್.ಡಿ.ಕೋಟೆ ರಸ್ತೆಯ ಸಿಲ್ಕ್ ಫ್ಯಾಕ್ಟರಿ ಸಮೀಪದ ನಿವಾಸಿ ಉಷಾ ಕಳೆದ 8 ವರ್ಷಗಳಿಂದ ಮಡಿಕೇರಿ…

1 130 131 132 133 134 187
Translate »