ವಿರಾಜಪೇಟೆ: ವಿದ್ಯಾರ್ಥಿಗಳ ಗುರಿಯನ್ನು ಈಡೇರಿಸುವುದು ಶಿಕ್ಷಕರಾದ ವರ ಕರ್ತವ್ಯ, ವಿದ್ಯಾರ್ಥಿಗಳು ಶ್ರದ್ಧೆ ಯಿಂದ ಕಲಿತು ತಮ್ಮ ಜೀವನವನ್ನು ರೂಪಿಸಿ ಕೊಳ್ಳುವಂತಾಗಬೇಕು ಎಂದು ವಿರಾಜ ಪೇಟೆ ಸರ್ವೋದಯ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಎಂ.ವಾಣಿ ಹೇಳಿದರು. ವಿರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ಎಂ.ವಾಣಿ, ತಮ್ಮ ಭಾಷಣದಲ್ಲಿ ಮಾನವನು ತನ್ನ ಬದುಕಿನಲ್ಲಿ ಸಮಾಜ ಸೇವೆಯಂ ತಹ ಉತ್ತಮ ಕೆಲಸವನ್ನು ಮಾಡಬೇಕು. ಜೀವನದಲ್ಲಿ ಎಲ್ಲಕ್ಕಿಂತ…
ಬೆಳೆ ನಷ್ಟದ ವರದಿ ಸೆ.12ರೊಳಗೆ ಸಲ್ಲಿಸಲು ತ.ಮ.ವಿಜಯ ಭಾಸ್ಕರ್ ಸೂಚನೆ
September 9, 2018ಮಡಿಕೇರಿ: ತೀವ್ರ ಅತಿವೃಷ್ಟಿಯಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ, ಕಾಫಿ, ಸಾಂಬಾರ ಸೇರಿದಂತೆ ವಿವಿಧ ಬೆಳೆಗಳ ನಷ್ಟದ ವರದಿಯನ್ನು ಸೆಪ್ಟೆಂಬರ್ 12ರೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯ ಭಾಸ್ಕರ್ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿ ಸಂಬಂಧ ಇದುವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಆಗಬೇಕಿರುವ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಬೆಳೆ ನಷ್ಟ ಸಂಬಂಧ ಸರ್ಕಾರಕ್ಕೆ ಸೆಪ್ಟೆಂಬರ್ 15 ರೊಳಗೆ ವರದಿ ಸಲ್ಲಿಸಬೇಕಿರುವುದರಿಂದ,…
ನಾಳೆ ಕೊಡಗು ಬಂದ್ ಇಲ್ಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ
September 9, 2018ಮಡಿಕೇರಿ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಭಾರತ್ ಬಂದ್‍ಗೆ ಕರೆ ನೀಡಿವೆ. ಆದರೆ ಕೊಡಗಿನಲ್ಲಿ ಬಂದ್ ಆಚರಿಸು ವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಜನರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಬಂದ್ ಕೈಬಿಡ ಲಾಗಿದೆ ಎಂದಿದ್ದಾರೆ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಹತ್ತಾರು ಪ್ರಾಣ ಹಾನಿ ಸಂಬಂಧಿಸಿ, ಅನೇಕರು ಮನೆ, ಮಠ,…
ಮಡಿಕೇರಿಯಲ್ಲಿ ಗಿರೀಶ್ ಕಾರ್ನಾಡ್ ವಿರುದ್ಧ ಕೇಸ್ ದಾಖಲು
September 9, 2018ಮಡಿಕೇರಿ: ಬೆಂಗಳೂರಿನಲ್ಲಿ ಇತ್ತೀಚಿಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ‘ನಾನೂ ನಗರ ನಕ್ಸಲ್’ ಎಂದು ಬೋರ್ಡ್ ತಗುಲಿಸಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವ ಹಿಂದೂ ಪರಿಷದ್‍ನ ಕೊಡಗು ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಎನ್.ಕೆ.ಅಜಿತ್ ಕುಮಾರ್ ಮಡಿ ಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ವಿರುದ್ದ ದೂರು ದಾಖಲಿಸಿದ್ದಾರೆ. ನಕ್ಸಲ್ ಎಂದರೆ ಮಾವೋವಾದಿ…
ಕರವೇ ತಾಲೂಕು ಅಧ್ಯಕ್ಷ ಸೇರಿ ಮೂವರ ವಿರುದ್ಧ ಜಾತಿ ನಿಂದನೆ ಕೇಸ್
September 9, 2018ಸೋಮವಾರಪೇಟೆ: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ ಮೇಲಿನ ದೌರ್ಜನ್ಯ ಆರೋಪದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪ ಹಾಗು ಅವರ ಪತಿ ಸುರೇಶ್ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ. ಮಳೆಹಾನಿ ಸಂತ್ರಸ್ತರಾದ ಮಸಗೋಡು ಗ್ರಾಮದ ಪರಿಶಿಷ್ಟಜಾತಿಗೆ ಸೇರಿದ ದಂಪತಿಗೆ, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ನೀಡಿದ ಹಣವನ್ನು ಕಸಿದುಕೊಂಡು, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ…
ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ
September 9, 2018ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪದವಿ ಕಾಲೇಜಿನ 3 ವಿದ್ಯಾರ್ಥಿಗಳ ಮೇಲೆ ಕಾಲೇಜಿನ ಹಳೇ ವಿದ್ರ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದ್ವಿತೀಯ ಬಿ.ಎ. ವ್ಯಾಸಂಗ ಮಾಡುತ್ತಿರುವ ಲಿಖಿತ್, ದೇವಯ್ಯ, ಸುಮನ್ ಎಂಬವರ ಮೇಲೆ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ದರ್ಶನ್, ಸಂಗಮ್ ಮತ್ತು ಇಬ್ಬರು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಯೂನಿಯನ್ ಡೇ ನಡೆ ಯುತ್ತಿದ್ದ ಸಂದರ್ಭ ಏಕಾಏಕಿ ಕಾಲೇಜಿಗೆ ಪ್ರವೇಶಿಸಿದ ಹಳೇ ವಿದ್ಯಾರ್ಥಿಗಳು ಹಾಕಿ ಸ್ಟಿಕ್‍ನಿಂದ ಹಲ್ಲೆ ನಡೆಸಿದ್ದು, 3 ವಿದ್ಯಾರ್ಥಿಗಳು…
ಜಿಲ್ಲಾಮಟ್ಟದ ಬ್ಯಾಂಕರ್ಸ್ ಪ್ರಗತಿ ಪರಿಶೀಲನೆ: ಕೊಡಗಿನ ಬೆಳೆಗಾರರ ಸಾಲಮನ್ನಾಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ
September 8, 2018ಮಡಿಕೇರಿ: ಮಹಾಮಳೆಯಿಂದ ಜಿಲ್ಲೆಯಾದ್ಯಂತ ಕಾಫಿ ಮತ್ತು ಕರಿಮೆಣಸು ಬೆಳೆಗೆ ಶೇ.70ರಷ್ಟು ಹಾನಿಯಾಗಿರುವುದರಿಂದ ಕೊಡಗಿನ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಅಧ್ಯ ಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‍ಗಳ ಸಮನ್ವಯ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್‍ಸಿಂಹ, ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆ 6 ಗ್ರಾ.ಪಂ.ಗಳು ಪ್ರಕೃತಿ ವಿಕೋಪಕ್ಕೆ ಒಳಗಾಗಿ…
ಪ್ರಕೃತಿ ವಿಕೋಪ ಹಾನಿ; ನಷ್ಟ ಪರಿಶೀಲನೆಗಾಗಿ ಮುಂದಿನ ವಾರ ಕೊಡಗಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ
September 8, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಸಂಬಂಧಿತ ಹಾನಿ ಮತ್ತು ನಷ್ಟದ ಸಮಗ್ರ ಪರಿಶೀಲನೆಗಾಗಿ ಮುಂದಿನ ವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೊಡಗಿಗೆ ಭೇಟಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ 1709 ಮನೆಗಳು ನಷ್ಟವಾಗಿದ್ದು, ಈ ಮನೆಗಳ ಮಾಲೀಕರಿಗೆ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಧಿಯಿಂದ 5.45 ಕೋಟಿ ರೂಪಾಯಿ ಪರಿಹಾರ ಧನ ನೀಡಲಾಗಿದೆ. ಮುಂದಿನ 3…
ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳು ಗ್ರಾಪಂ ಸದಸ್ಯನ ಮನೆಯಲ್ಲಿ ಪತ್ತೆ
September 8, 2018ಸುಂಟಿಕೊಪ್ಪ: ಮಳೆಹಾನಿ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳನ್ನು ಗ್ರಾಮ ಪಂಚಾಯ್ತಿ ಸದಸ್ಯರೋರ್ವರು ತಮ್ಮ ಸಂಬಂಧಿಯ ಮನೆಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ ಪ್ರಕರಣ ಬಯಲಾಗಿದೆ. ಸುಂಟಿಕೊಪ್ಪದ ರಾಮಮಂದಿರ ಬಳಿಯ ಮನೆಯೊಂದರಲ್ಲಿ ಗರಂಗದೂರು ಗ್ರಾಮ ಪಂಚಾಯ್ತಿ ಸದಸ್ಯರೋರ್ವರು 40 ಚೀಲ ಪರಿಹಾರ ಕಿಟ್‍ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಈ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಮತ್ತು ಕಂದಾಯ ಅಧಿಕಾರಿಗಳು ಪರಿಹಾರದ ಕಿಟ್‍ಗಳನ್ನು ವಶಕ್ಕೆ ಪಡೆದು ಕುಶಾಲನಗರ ಎಪಿಎಂಸಿ ಗೋದಾಮಿಗೆ ಹಸ್ತಾಂತರಿಸಿದರು. ಪಡಿತರ…
ಬೆಹರಾನ್‍ನಿಂದ ಚಿನ್ನ ತಂದ ಕೊಡಗಿನ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
September 8, 201811.57 ಲಕ್ಷದ ಚಿನ್ನ ವಶ ಬೆಂಗಳೂರು: ಬೆಹರಾನ್‍ನಿಂದ 11.57 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣಿಕೆ ಮೂಲಕ ತಂದಿದ್ದ ಕೊಡಗಿನ ವ್ಯಕ್ತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿ, ಚಿನ್ನ ವಶಪಡಿಸಿಕೊಂಡಿದ್ದಾರೆ. ಕೊಡಗಿನ ಹೊದವಾಡ ಗ್ರಾಮದ ಕೊಟ್ಟಂ ಬಾಡಿ ಅಹಮದ್ ಲತೀಫ್, ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದವ ನ್ನಾಗಿದ್ದು, ಈತ ಚಿನ್ನವನ್ನು ತುಂಡು ತುಂಡಾಗಿ ಕತ್ತರಿಸಿ ಅದಕ್ಕೆ ಸಿಲ್ವರ್ ಪಾಲಿಶ್ ಮಾಡಿ ತನ್ನ ಪ್ಯಾಂಟ್‍ನ ಎಡ ಭಾಗದ ಜೇಬಿನಲ್ಲಿ ಇಟ್ಟಿದ್ದನೆಂದು…










