ಮೈಸೂರು: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತ ಕೊಡಗಿನ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಮೈಸೂರು ಕೇಂದ್ರದ ತಂತ್ರ ಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮನಸೋಇಚ್ಛೆ ಅರಣ್ಯ ನಾಶ, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಈ ಬಾರಿ ಸುರಿದ ಭಾರಿ ಮಳೆ ಈ ಪ್ರಾಕೃತಿಕ ವಿಕೋಪಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಹುಣಸೂರು ಶಾಸಕ ಎ.ಎಚ್. ವಿಶ್ವನಾಥ್ ಆ.24…
ಕೊಡಗು ಪ್ರವಾಹ ಸಂತ್ರಸ್ತರಿಗೆ ವಕೀಲರ ಸಂಘದ ಸಹಾಯ ಹಸ್ತ
September 15, 2018ಮಡಿಕೇರಿ: ಬೆಂಗಳೂರು ಹಾಗೂ ಮಡಿಕೇರಿ ವಕೀಲರ ಸಂಘದ ಕೆಲವು ಸದಸ್ಯರು ಸರಕಾರದ ಪ್ರಥಮ ದರ್ಜೆ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟೀರ ಎಸ್.ಪೊನ್ನಣ್ಣ ನೇತೃತ್ವದಲಿ ಮಳೆಯಿಂದ ಹಾನಿಗೊಳಗಾದ ಕೊಡಗಿನ ವಿವಿಧ ಸ್ಥಳಗಳಿಗೆ ್ಲ ಸೆ.12 ರಂದು ಭೇಟಿ ನೀಡಿ ಪರಿಶೀಲಿಸಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯದರ್ಶಿ ಗಂಗಾ ಧರಯ್ಯ, ಖಜಾಂಚಿ ಶಿವಮೂರ್ತಿ, ಮಡಿ ಕೇರಿ ವಕೀಲರ ಸಂಘದ ಅಧ್ಯಕ್ಷ ಕಾರೇರ ಕವನ್, ಉಪಾಧ್ಯಕ್ಷ ಪಿ.ಯು. ಪ್ರೀತಂ, ಕಾರ್ಯದರ್ಶಿ ಕಿಶೋರ್ ಹಾಗೂ ಖಜಾಂಚಿ ಜ್ಯೋತಿ ಶಂಕರ್ ಅವರು…
ವಿರಾಜಪೇಟೆಯಲ್ಲಿ 2 ಅಂಗಡಿಗಳಲ್ಲಿ ಆಕಸ್ಮಿಕ ಬೆಂಕಿ
September 15, 2018ವಿರಾಜಪೇಟೆ: ವಿ.ಪೇಟೆ ಪಟ್ಟಣದ ಎಫ್‍ಎಂಸಿ ರಸ್ತೆಯಲ್ಲಿ ರುವ 2 ಅಂಗಡಿ ಮಳಿಗೆಗಳಿಗೆ ವಿದ್ಯುತ್ ಸ್ಪರ್ಶ ಗೊಂಡು ರೂ.25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಸೆ.12 ರಂದು ದಿನನಿತ್ಯದಂತೆ ರಾತ್ರಿ ಅಂಗಡಿ ಮಾಲಿಕರು ಬಾಗಿಲು ಮುಚ್ಚಿ ಮನೆಗೆ ಹೋಗಿದ್ದರು. ಸೆ.13 ರಂದು ಮುಂಜಾನೆ 4 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿ ಕೊಂಡಾಗ ಅಲ್ಲಿನ ಸ್ಥಳೀಯರು ಅಂಗಡಿ ಮಾಲೀಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿಚಾರ ತಿಳಿದ ಅಂಗಡಿ ಮಾಲೀಕರು ಬಂದು ನೋಡುವಾಗ ಅನೇಕ ಸಾಮಾಗ್ರಿಗಳು ಸುಟ್ಟು ಹೋಗಿದ್ದವು ಅಗ್ನಿಶಾಮಕದಳ…
ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
September 15, 2018ಕುಶಾಲನಗರ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೊರ್ವ ಮೃತಪಟ್ಟಿರುವ ಘಟನೆ ಗುರುವಾರ ಸಿದ್ಧಲಿಂಗಪುರ ಬಳಿಯ ಅರಶಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಸಿದ್ದಲಿಂಗಪುರ ಗ್ರಾಮದ ಅನಂತ ಕುಮಾರ್ ಹಾಗೂ ಪದ್ಮ ದಂಪತಿಯ ಎರಡನೇ ಪುತ್ರ ಹೇಮಂತ್ (13) ಮೃತಪಟ್ಟ ದುರ್ದೈವಿ. ಈತ ಸಿದ್ಧಲಿಂಗಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಗ್ರಾಮದಲ್ಲಿ ಬಾಲಕರ ತಂಡ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗಿದ ಬಳಿಕ ವಿಸರ್ಜನೆಗಾಗಿ ಸಿದ್ಧಲಿಂಗಪುರದ ಬಿದಿರುಕಟ್ಟೆ…
ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಆಗಮನ
September 13, 2018ಮಡಿಕೇರಿ: ಅತೀ ವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಕೇಂದ್ರ ಸರ್ಕಾ ರದ ಹಿರಿಯ ಐಎಎಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಡಿಕೇರಿ ಸಮೀಪದ ಹಾಲೇರಿ, ಕಾಂಡಕೊಲ್ಲಿ, ಹಟ್ಟಿಹೊಳೆ, ಸೋಮವಾರಪೇಟೆ ರಸ್ತೆಯ ಭೂಕುಸಿತ ಪ್ರದೇಶಗಳಿಗೆ ತೆರಳಿ ವಾಸ್ತವಾಂಶವನ್ನು ದಾಖಲಿಸಿಕೊಂಡರು. ಕೇಂದ್ರ ಸರಕಾರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್, ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಭಿಯಂತರ ಜಿತೇಂದ್ರ ಪನ್ವ, ಕೇಂದ್ರ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಪೊನ್ನುಸ್ವಾಮಿ ಅವರುಗಳು ಅತೀವೃಷ್ಠಿ ಹಾನಿಯ…
ನಿರಾಶ್ರಿತ ಕುಟುಂಬದ ಯುವತಿಗೆ ವಿವಾಹ ಭಾಗ್ಯ
September 13, 2018ಮಡಿಕೇರಿ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಕುಟುಂಬ ಸಹಿತ ನಿರಾಶ್ರಿತ ಶಿಬಿರ ಸೇರಿದ್ದ ಹೆಣ್ಣು ಮಗಳೊಬ್ಬಳ ವಿವಾಹಕ್ಕೆ ಗೌರಿ ಹಬ್ಬದ ಶುಭ ದಿನದಂದು ನಗರದ ಓಂಕಾರೇಶ್ವರ ದೇವಾಲಯ ಸಾಕ್ಷಿಯಾಯಿತು. ಭೂ ಕುಸಿತ ಮತ್ತು ಪ್ರವಾಹದಿಂದ ಸಂತ್ರಸ್ಥರಾದ ಮಕ್ಕಂದೂರು ಹೆಮ್ಮೆತ್ತಾಳು ಗ್ರಾಮದ ರಾಟೆಮನೆ ಪೈಸಾರಿ ನಿವಾಸಿ ರಂಜಿತಾ ಮತ್ತು ಕೇರಳ ಕಣ್ಣೂರಿನ ರಂಜಿತ್ ಅವರುಗಳು ಸರಳ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಗರದ ನಿರಾಶ್ರಿತರ ಶಿಬಿರದಲ್ಲಿದ್ದ ರಂಜಿತಾ ಅವರ ಕುಟುಂಬಕ್ಕೆ ಸೇವಾ ಭಾರತಿ, ಲಯನ್ಸ್ ಮತ್ತು ವಿವಿಧ…
ಕೊಡಗಿನ ನಿರಾಶ್ರಿತರ ಶಿಬಿರದಲ್ಲಿ ಗೌರಿ ಹಬ್ಬದ ಸಂಭ್ರಮ
September 13, 2018ಮಡಿಕೇರಿ: ಕೊಡಗಿನಲ್ಲಿ ಪ್ರಕೃತ್ತಿ ವಿಕೋಪದ ಹಿನ್ನಲೆಯಲ್ಲಿ ಗಣೇಶ ಚತುರ್ಥಿಗೆ ಕಾರ್ಮೋಡ ಕವಿದಂತಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿಯೇ ಇರುವ ನೂರಾರು ಜನರು ಹಬ್ಬದ ಸಡಗರವಿಲ್ಲದೇ ಮಂಕಾಗಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲಿನ 17 ಪುನರ್ವಸತಿ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಗೌರಿಹಬ್ಬದ ಉಡುಗೊರೆಯಾಗಿ ಸರ್ಕಾರದಿಂದ ಮಹಿಳೆಯರಿಗೆ ರೇಷ್ಮೆ ಸೀರೆ, ಮಕ್ಕಳಿಗೆ ಬಟ್ಟೆ, ಪುರುಷರಿಗೆ ಷರ್ಟ್, ಪ್ಯಾಂಟ್ ವಿತರಿಸಿದರು. ಮಡಿಕೇರಿಯಲ್ಲಿರುವ ಮೈತ್ರಿ ಸಮುದಾಯ ಭವನಕ್ಕೆ ಬಂದ ಸಚಿವರು ಇಲ್ಲಿನ ನಿರಾಶ್ರಿತರಿಗೆ ಬಟ್ಟೆ ವಿತರಿಸಿದರಲ್ಲದೇ ನಿರಾಶ್ರಿತ ಮಹಿಳೆ ಉದಯಗಿರಿಯ ಜಯಂತಿ ಅವರೊಂದಿಗೆ ಕುಳಿತು…
ಮಡಿಕೇರಿ-ಮಂಗಳೂರು ಹೆದ್ದಾರಿ ಲಘು ವಾಹನ ಸಂಚಾರಕ್ಕೆ ಮುಕ್ತ
September 13, 2018ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ಥಿಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಇದೀಗ 4 ಚಕ್ರದ ಲಘು ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ 275ಯನ್ನು ಮುಕ್ತಗೊಳಿಸಲಾಗಿದೆ. ಕಳೆದ 1 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಭಾರಿ ಬೆಟ್ಟ ಕುಸಿದು ಹೆದ್ದಾರಿಯನ್ನು ಸಂಪೂರ್ಣ ಬಲಿ ಪಡೆದಿತ್ತು. ತದ ನಂತರ ಮಡಿಕೇರಿ- ಮಂಗಳೂರು ಹೆದ್ದಾರಿ ಸಂಪರ್ಕ ಬಂದ್ ಆದ ಸ್ಥಿತಿಯಲ್ಲಿತ್ತು. ಈ ನಡುವೆಯೇ ಕಳೆದ 1 ತಿಂಗಳಿಂದ ಹಗಲಿರುಳು ಹೆದ್ದಾರಿಗೆ ಬಿದ್ದ ಗುಡ್ಡದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗಿತ್ತು. ಆ…
ಕೊಡಗು ನಿರಾಶ್ರಿತರಿಗೆ ಪುನರ್‍ವಸತಿ ಕಾರ್ಯ ಆರಂಭ
September 13, 2018ಮಡಿಕೇರಿ: ಭಾರೀ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬ ಗಳಿಗೆ ಜಿಲ್ಲಾಡಳಿತದ ವತಿಯಿಂದ ಪುನರ್ ವಸತಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭಗೊಂಡಿದೆ. ಮಳೆ ಯಿಂದ ಹಾನಿಗೊಳಗಾದ ಗ್ರಾಮಗಳ ಸಮೀಪದಲ್ಲೇ ಕಂದಾಯ ಇಲಾಖೆಯ ವಶದಲ್ಲಿರುವ ಮತ್ತು ಸರಕಾರಿ ಜಾಗಗಳನ್ನು ಗುರುತಿಸಲಾಗಿದ್ದು ಒಟ್ಟು 100 ಎಕರೆ ಪ್ರದೇಶವನ್ನು ಪುನರ್ ವಸತಿಗಾಗಿ ಬಳಸಿಕೊಳ್ಳ ಲಾಗುತ್ತಿದೆ. ಈ ಸಳ್ಥಗಳೆಲ್ಲವು ಸಮತಟ್ಟು ಪ್ರದೇಶ ಗಳಾಗಿದ್ದು, ಇಲ್ಲಿ ನಿವೇಶನಗಳನ್ನು ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ದೊರೆತ್ತಿದೆ. ಕರ್ಣಗೇರಿ, ಕೆ.ನಿಡುಗಣೆ, ಕಾಟಕೇರಿ, ಮದೆನಾಡು, ಮಾದಾಪುರ, ಸಂಪಾಜೆ…
ಸೆ.18, ಅಂಚೆ ಅದಾಲತ್
September 13, 2018ಮಡಿಕೇರಿ: ಅಂಚೆ ಅದಾಲತ್ ಮುಂದಿನ ಸಭೆಯು ಸೆ.18 ರಂದು ಬೆಳಗ್ಗೆ 11 ಗಂಟೆಗೆ ಕೊಡಗು ಅಂಚೆ ವಿಭಾಗದ, ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರ ಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸ ಲಾಗುತ್ತದೆ. ದೂರುಗಳಿದ್ದಲ್ಲಿ ಅಂಚೆ ಅದಾ ಲತ್ ಎಂದು ಬರೆದು ಅಂಚೆ ಅಧೀಕ್ಷಕರು ಕೊಡಗು ಅಂಚೆ ವಿಭಾಗ ಮಡಿಕೇರಿ ಇವರಿಗೆ ಸೆ.14ರೊಳಗೆ ತಲುಪುವಂತೆ ಕಳುಹಿಸಲು ಈ ಮೂಲಕ ಕೋರಲಾಗಿದೆ. ನಂತರ ಸೆ.18 ರಂದು ನಡೆಯುವ ಸಭೆಯಲ್ಲಿ ತಮ್ಮ…










