ವಿರಾಜಪೇಟೆಯಲ್ಲಿ 2 ಅಂಗಡಿಗಳಲ್ಲಿ ಆಕಸ್ಮಿಕ ಬೆಂಕಿ
ಕೊಡಗು

ವಿರಾಜಪೇಟೆಯಲ್ಲಿ 2 ಅಂಗಡಿಗಳಲ್ಲಿ ಆಕಸ್ಮಿಕ ಬೆಂಕಿ

September 15, 2018

ವಿರಾಜಪೇಟೆ: ವಿ.ಪೇಟೆ ಪಟ್ಟಣದ ಎಫ್‍ಎಂಸಿ ರಸ್ತೆಯಲ್ಲಿ ರುವ 2 ಅಂಗಡಿ ಮಳಿಗೆಗಳಿಗೆ ವಿದ್ಯುತ್ ಸ್ಪರ್ಶ ಗೊಂಡು ರೂ.25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಸೆ.12 ರಂದು ದಿನನಿತ್ಯದಂತೆ ರಾತ್ರಿ ಅಂಗಡಿ ಮಾಲಿಕರು ಬಾಗಿಲು ಮುಚ್ಚಿ ಮನೆಗೆ ಹೋಗಿದ್ದರು. ಸೆ.13 ರಂದು ಮುಂಜಾನೆ 4 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿ ಕೊಂಡಾಗ ಅಲ್ಲಿನ ಸ್ಥಳೀಯರು ಅಂಗಡಿ ಮಾಲೀಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿಚಾರ ತಿಳಿದ ಅಂಗಡಿ ಮಾಲೀಕರು ಬಂದು ನೋಡುವಾಗ ಅನೇಕ ಸಾಮಾಗ್ರಿಗಳು ಸುಟ್ಟು ಹೋಗಿದ್ದವು ಅಗ್ನಿಶಾಮಕದಳ ಗೋಣಿಕೊಪ್ಪಲಿಗೆ ದುರವಾಣಿ ಸಂಪರ್ಕ ಮಾಡಿ ಅವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿ ಹತ್ತಿಕೊಂಡ ವಿಮಲ ಹಾರ್ಡ್‍ವೇರ್ ಮತ್ತು ಪ್ಲೈವುಡ್ ಅಂಗ ಡಿಯ 2 ಕಂಪ್ಯೂಟರ್, ಸಿಸಿ ಟಿ.ವಿ 5 ಕ್ಯಾಮರಾ ಸೇರಿದಂತೆ ಅಂದಾಜು ರೂ.15 ಲಕ್ಷದ ಸಾಮಾಗ್ರಿಗಳು ಬೆಂಕಿ ಅನಾಹುತದಿಂದ ನಷ್ಟವಾಗಿರು ವುದಾಗಿ ಅಂಗಡಿ ಮಾಲಿಕ ಮಧನ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದೇ ರೀತಿ ಪಕ್ಕದ ಅಂಗಡಿ ಸರಸ್ವತಿ ಎಲೆ ಕ್ಟ್ರಾನಿಕ್ಸ್‍ಗೂ ಬೆಂಕಿ ಹತ್ತಿಕೊಂಡು 1 ಟಿ.ವಿ, ಜೆರಾಕ್ಸ್ ಮಿಷನ್ ಸೇರಿ ಅಂದಾಜು ರೂ.10 ಲಕ್ಷ ನಷ್ಟವಾಗಿದೆ ಎಂದು ಅದರ ಮಾಲೀಕ ಎ.ಕೆ.ಮುದ್ದಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾಗೂ ಈ ಕಟ್ಟಡದ ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಮತ್ತು ಮುದ್ರಣಾಲಯದಲ್ಲಿ ಅನೇಕ ಪುಸ್ತಕಗಳು ಬೆಂಕಿ ಹೋಗೆಯಿಂದ ನಷ್ಟವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Translate »