ಕೊಡಗು ಪ್ರವಾಹ ಸಂತ್ರಸ್ತರಿಗೆ ವಕೀಲರ ಸಂಘದ ಸಹಾಯ ಹಸ್ತ
ಕೊಡಗು

ಕೊಡಗು ಪ್ರವಾಹ ಸಂತ್ರಸ್ತರಿಗೆ ವಕೀಲರ ಸಂಘದ ಸಹಾಯ ಹಸ್ತ

September 15, 2018

ಮಡಿಕೇರಿ: ಬೆಂಗಳೂರು ಹಾಗೂ ಮಡಿಕೇರಿ ವಕೀಲರ ಸಂಘದ ಕೆಲವು ಸದಸ್ಯರು ಸರಕಾರದ ಪ್ರಥಮ ದರ್ಜೆ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟೀರ ಎಸ್.ಪೊನ್ನಣ್ಣ ನೇತೃತ್ವದಲಿ ಮಳೆಯಿಂದ ಹಾನಿಗೊಳಗಾದ ಕೊಡಗಿನ ವಿವಿಧ ಸ್ಥಳಗಳಿಗೆ ್ಲ ಸೆ.12 ರಂದು ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯದರ್ಶಿ ಗಂಗಾ ಧರಯ್ಯ, ಖಜಾಂಚಿ ಶಿವಮೂರ್ತಿ, ಮಡಿ ಕೇರಿ ವಕೀಲರ ಸಂಘದ ಅಧ್ಯಕ್ಷ ಕಾರೇರ ಕವನ್, ಉಪಾಧ್ಯಕ್ಷ ಪಿ.ಯು. ಪ್ರೀತಂ, ಕಾರ್ಯದರ್ಶಿ ಕಿಶೋರ್ ಹಾಗೂ ಖಜಾಂಚಿ ಜ್ಯೋತಿ ಶಂಕರ್ ಅವರು ಪರಿಸ್ಥಿತಿ ಅಧ್ಯಯನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸದಸ್ಯರು, ಕೊಡಗು ಸಂತ್ರಸ್ಥರ ನಿಧಿಗಾಗಿ ವಕೀಲರಿಂದ ಸುಮಾರು 35 ಲಕ್ಷ ರೂ. ಸಂಗ್ರಹವಾಗಿದ್ದು, ಈ ಪೈಕಿ 22.5 ಲಕ್ಷ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ, ಮನೆ ಆಸ್ತಿ ಕಳೆದು ಕೊಂಡ ಕೊಡಗಿನ 15 ಮಂದಿ ವಕೀ ಲರಿಗೆ 7.5 ಲಕ್ಷ ಮತ್ತು ಕೇರಳ ಸರಕಾರಕ್ಕೆ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮೊಣ್ಣಂಗೇರಿ, ಜೋಡುಪಾಲ, ಮಕ್ಕಂ ದೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿದ ತಂಡ, ಕೇಂದ್ರ ಹಾಗೂ ರಾಜ್ಯ ಸರಕಾರ ಸಂತ್ರಸ್ಥರಿಗೆ ಹೆಚ್ಚಿನ ಪರಿ ಹಾರ ನೀಡಬೇಕೆಂದು ಆಗ್ರಹಿಸಿತು.

ನಂತರ ಮಡಿಕೇರಿ ನ್ಯಾಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಂ.ಸಿ. ನಾಣ್ಣಯ್ಯ, ಅವ್ಯಾಹತವಾಗಿ ನಡೆಯುತ್ತಿ ರುವ ಪ್ರವಾಸೋದ್ಯಮ ಹಾಗೂ ವಿವೇ ಚನೆಯಿಲ್ಲದ ಅಭಿವೃದ್ಧಿ ಕಾರ್ಯದಿಂದ ಈ ವಿಕೋಪಗಳು ಸಂಭವಿಸುತ್ತಿವೆ. ಹೊರಗಿನಿಂದ ಮೋಜಿಗಾಗಿ ಬರುವ ಜನರಿಂದ ಕೊಡಗು ಅಭಿವೃದ್ಧಿ ಯಾಗಬೇಕಿಲ್ಲ. ಪ್ರಾಕೃತಿಕ ವಿಕೋಪದಿಂದ ಆಗಿರುವ ಈ ಸ್ಥಿತಿಯ ಲಾಭಪಡೆಯಲು ಮುಂದಾಗಿರುವ ಕೆಲವು ಪಟ್ಟಭದ್ರ ಹಿತಾ ಸಕ್ತಿಗಳು ಇದನ್ನು ವಿಕೋಪದ ಪ್ರವಾ ಸೋದ್ಯಮ ಎಂಬಂತೆ ಚಿತ್ರಿಸುತ್ತಿವೆ. ಕೊಡ ಗಿನ ಬಗ್ಗೆ ಈ ಪ್ರವೃತ್ತಿ ನಿಲ್ಲಬೇಕು ಎಂದರು.

ಶೇ.40 ರಷ್ಟು ವಿಕೋಪಗಳು ಮಾನವ ನಿರ್ಮಿತವಾಗಿದ್ದು, ಈ ಭಾರಿ ಸುರಿದ ಭಾರಿ ಮಳೆ ಪರಿಸ್ಥಿತಿಯನ್ನು ಮತ್ತಷ್ಟು ಹದೆಗೆಡಿಸಿದೆ. ಹೋಂಸ್ಟೇ, ಹೋಟೆಲ್ ನಿರ್ಮಾಣಕ್ಕಾಗಿ ಗುಟ್ಟ ಬೆಟ್ಟಗಳನ್ನು ಮನ ಬಂದಂತೆ ಕೊರೆಯುತ್ತಿರುವುದರಿಂದ ಈ ಅನಾಹುತ ನಡೆಯುತ್ತಿದೆ. ಇಂತಹ ರೆಸಾಟ್ರ್ಸ್ ಸಂಸೃತಿ ನಮಗೆ ಬೇಕಿಲ್ಲ. ಇಂತಹ ಅತಿಕ್ರಮಣಕಾರರನ್ನು ಕೊಡಗಿನಿಂದ ಹೊರಹಾಕಬೇಕು. ಈ ಕಾರ್ಯದಲ್ಲಿ ವಕೀಲರು ಸ್ಥಳೀಯರಿಗೆ ನೆರವಾಗಬೇಕು ಎಂದು ಅವರು ಹೇಳಿದರು.

Translate »