ಅರಣ್ಯ ನಾಶ ಹಾಗೂ ಕುಂಭದ್ರೋಣ ಮಳೆ ವಿಕೋಪಕ್ಕೆ ಕಾರಣ
ಕೊಡಗು

ಅರಣ್ಯ ನಾಶ ಹಾಗೂ ಕುಂಭದ್ರೋಣ ಮಳೆ ವಿಕೋಪಕ್ಕೆ ಕಾರಣ

September 15, 2018

ಮೈಸೂರು: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತ ಕೊಡಗಿನ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಮೈಸೂರು ಕೇಂದ್ರದ ತಂತ್ರ ಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮನಸೋಇಚ್ಛೆ ಅರಣ್ಯ ನಾಶ, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಈ ಬಾರಿ ಸುರಿದ ಭಾರಿ ಮಳೆ ಈ ಪ್ರಾಕೃತಿಕ ವಿಕೋಪಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಹುಣಸೂರು ಶಾಸಕ ಎ.ಎಚ್. ವಿಶ್ವನಾಥ್ ಆ.24 ರಂದು ಸಭೆ ನಡೆಸಿ ಒತ್ತಾಯಿಸಿದ್ದ ಹಿನ್ನೆಲೆ ಕೊಡಗಿಗೆ ಭೇಟಿ ನೀಡಿದ್ದ ಈ ತಾಂತ್ರಿಕ ತಂಡ ವಿಸ್ತೃತ ವರದಿ ನೀಡಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ನಾಶ: ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬ ತ್ತ್ಕೆರೆ ಹಾಗೂ 11 ಮಂದಿಯ ತಂಡ ಅಧ್ಯಯನ ನಡೆಸಿ ಕೊಡಗು ಪುನರ್ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗಳ್ಳುವಂತೆ ಸರಕಾರಕ್ಕೆ ವರದಿ ಸಲ್ಲಿಸಿದೆ.

ಮರಗಳನ್ನು ಕಡಿದು ಸಾಗಿಸುತ್ತಿರುವುದು, ಕೃಷಿಗಾಗಿ ಭೂಮಿಯನ್ನು ಸಮ ತಟ್ಟಾಗಿಸುತ್ತಿರುವುದು, ಮನೆ ನಿರ್ಮಾಣಕ್ಕಾಗಿ ಭೂಮಿಯನ್ನು ಮನಬಂದಂತೆ ಆಗೆಯುತ್ತಿರುವುದು, ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸುತ್ತಿರುವುದರಿಂದ ಭೂಮಿ ಸವಕಲುಗೊಂಡು ಸಾವಿರಾರು ವರ್ಷಗಳಿಂದ ಗಟ್ಟಿಯಾಗಿ ನಿಂತಿದ್ದ ಭೂಮಿ ಭಾರಿ ಪ್ರಾಕೃತಿಕ ವಿಕೋಪವನ್ನು ತಡೆದು ಕೊಳ್ಳಲಾಗದೆ ಕುಸಿಯುತ್ತಿದೆ. ಹಲವು ವರ್ಷಗಳಿಂದ ಪ್ರಕೃತಿಯ ಮೇಲೆ ಅವ್ಯಾ ತಹತವಾಗಿ ದಾಳಿ ನಡೆಯುತ್ತಿದ್ದು ಇದೆ ಲ್ಲವು ಮಾನವ ನಿರ್ಮಿತ ದುರಂತ ಎಂದು ವರದಿಯಲ್ಲಿ ಹೇಳಲಾಗಿದೆ.

ಮಿತಿಮೀರಿದ ಹಸ್ತಕ್ಷೇಪ: ಮಿತಿ ಮೀರಿದ ಮಾನವ ಹಸ್ತ ಕ್ಷೇಪದಿಂದ ಪಶ್ಚಿಮಘಟ್ಟ ಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಅಭಿವೃದ್ಧಿ ಹೆಸರಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯುತ್ ಕಂಬಗಳ ಸ್ಥಾಪನೆ, ಟಿಂಬರ್‍ಗಾಗಿ ಅರಣ್ಯ ಕಡಿಯುತ್ತಿರುವುದು, ಅಕ್ರಮ ಗಣಿಗಾರಿಕೆ, ಮರಳು ಮಾಫಿಯಾ, ಪ್ರವಾ ಸೋದ್ಯಮ ಹೆಸರಲ್ಲಿ ನಿರ್ಮಾಣವಾಗುತ್ತಿ ರುವ ಅಕ್ರಮ ಕಟ್ಟಡ ಹೀಗೆ ಹತ್ತು ಹಲವು ಕಾರಣಗಳನ್ನು ತಂಡ ಪಟ್ಟಿ ಮಾಡಿದೆ.

ಮಿತಿ ಮೀರಿದ ಅರಣ್ಯ ನಾಶದಿಂದ ಮಳೆ ಬೀಳುವ ಪ್ರಮಾಣದಲ್ಲಿ ಏರುಪೇರಾಗಿದ್ದು, ಇದರಿಂದ ಅಂತರ್ಜಲ ಬತ್ತುತ್ತಿದೆ. ಮುಂದಿನ ದಿನಗಳಲ್ಲಿ ಇದು ರಾಜ್ಯ ಸೇರಿದಂತೆ ತಮಿ ಳುನಾಡು, ಕೇರಳ ಹಾಗು ಪುದುಚೇರಿ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಮಾಧವ ಗಾಡ್ಗಿಳ್ ವರದಿ: 2011 ರಲ್ಲಿ ಮಾಧವ ಗಾಡ್ಗಿಳ್ ಸಮಿತಿ ವರದಿಯನ್ನು ಸರಕಾರ ಅನುಷ್ಠಾನಗೊಳಿಸಿದ್ದರೆ ಈಗ ಆಗಿರುವ ಹೆಚ್ಚಿನ ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸಬಹುದಿತ್ತು. ನಂತರ ನೇಮ ಕವಾದ ಕಸ್ತೂರಿ ರಂಗನ್ ಸಮತಿ ಶಿಫಾ ರಸ್ಸುಗಳನ್ನು ಸರಕಾರ ಒಪ್ಪಲಿಲ್ಲ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗೋವಾ ರಾಜ್ಯಗಳು ಸಮಿತಿ ವರದಿಯನ್ನು ಅನುಷ್ಠಾನಗೊಳಿಸದ ಕಾರಣ ಮಾನವ ಹಸ್ತಕ್ಷೇಪದಿಂದ ಪಶ್ಚಿಮ ಘಟ್ಟಗಳು ಇಂದು ಅಳಿವಿನ ಅಂಚಿಗೆ ಬಂದು ನಿಂತಿವೆ. ಇನ್ನಾದರೂ ಸರಕಾರ ಕೊಡಗಿನ ಪುನರ್ ನಿರ್ಮಾಣ, ನಿರಾಶ್ರಿತರಿಗೆ ಪುನರ್ ವಸತಿ ಮತ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಂಡ ಶಿಪಾರಸ್ಸು ಮಾಡಿದೆ.

ಮರಗಳನ್ನು ಉಳಿಸಿಕೊಳ್ಳಲು ಸೂಚನೆ: ಅರಣ್ಯ ನಾಶ, ವಾಣಿಜ್ಯ ಉದ್ದೇಶಕ್ಕಾಗಿ ಪ್ರಕೃತಿ ವಿನಾಶ ಹಾಗು ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಪರಿಸರದ ಮೇಲೆ ನಡೆಯುತ್ತಿರುವ ದಾಳಿ ತಪ್ಪಿಸಬೇಕು. ಈಗಾಗಲೆ ಭೂ ಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಸ್ಥಳೀಯವಾಗಿ ಬೆಳೆಯುವ ಗಿಡಗಳನ್ನು ನೆಡುವ ಕಾರ್ಯ ತ್ವರಿತ ಆರಂಭಿಸಬೇಕು. ಸರಕಾರದಿಂದ ಅನುಷ್ಠಾನಗೊಳಿಸಲು ಮುಂದಾಗಿರುವ ಮಾರಕ ಯೋಜನೆಗಳನ್ನು ಕೈಬಿಡ ಬೇಕು. ಈಗಿರುವ ಮರಗಳು ಬೀಳದಂತೆ ಕ್ರಮವಹಿಸಬೇಕು.

ಗಣಿಗಾರಿಕೆ, ಅಕ್ರಮ ಮರಳು ಗಣಿ ಗಾರಿಕೆ ಹಾಗೂ ಪರಿಸರ ನಾಶ ಮಾಡುವಂತಹ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡದಂತೆ ತಂಡ ಶಿಪಾರಸ್ಸು ಮಾಡಿದೆ. ವಿಶೇಷ ಆರ್ಥಿಕ ವಲಯ (ಸ್ಪೆಷಲ್ ಎಕಾನಾಮಿಕ್ ಜೋನ್) ಸ್ಥಾಪನೆ, ಸರಕಾರದ ಜಾಗ ಖಾಸಗಿಯವರ ಪಾಲಾಗದಂತೆ ಎಚ್ಚರ ವಹಿಸಬೇಕು.ಈ ಮೂಲಕವಾದರೂ ಮುಂದೆ ಆಗಬಹುದಾದ ದುರಂತಗಳನ್ನು ತಪ್ಪಿಸಲು ಸಾಧ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

Translate »